1497 ಎಸ್‌ಒ ಹುದ್ದೆಗೆ ಎಸ್‌ಬಿಐ ಬ್ಯಾಂಕ್ ಅಧಿಸೂಚನೆ: ಆನ್‌ಲೈನ್ ಅರ್ಜಿ ಆಹ್ವಾನ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್‌ಬಿಐ) 1497 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಇದೀಗ ನೇಮಕ ಪ್ರಕಟಣೆ ಮಾಡಿದೆ.
ಒಟ್ಟು ಹುದ್ದೆಗಳ ಪೈಕಿ ಕೆಲವು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ, ಇನ್ನು ಕೆಲವು ಹುದ್ದೆಗಳನ್ನು ರೆಗ್ಯುಲರ್ ಬೇಸಿಸ್ ಮೇಲೆ ನೇಮಕ ಮಾಡಲು ಈ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದವರು ಬ್ಯಾಂಕ್ ಹುದ್ದೆಗಳಲ್ಲಿ ಆಸಕ್ತಿ ಇದ್ದರೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ವಯಸ್ಸಿನ ಅರ್ಹತೆಗಳು
ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ 21 ರಿಂದ 30 ವರ್ಷ ವಯೋಮಾನದವರು, ಹಾಗೂ ಇತರೆ ಎಲ್ಲ ಹುದ್ದೆಗಳಿಗೆ 25 ರಿಂದ 30 ವರ್ಷ ವಯೋಮಾನದವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
• ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 14-09-2024
• ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-10-2024
• ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ: 19-10-2024
ಎಸ್‌ಬಿಐ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಓದಲು ಅಧಿಸೂಚನೆಗಾಗಿ ಭೇಟಿ ನೀಡಬೇಕಾದ ವೆಬ್ ವಿಳಾಸ : https://sbi.co.in/web/careers.
ಎಸ್‌ಬಿಐ ಎಸ್‌ಒ ಹುದ್ದೆಗಳಿಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?
– ಎಸ್‌ಬಿಐ ಕರಿಯರ್ ವೆಬ್‌ಸೈಟ್ ವಿಳಾಸ https://ibpsonline.ibps.in/sbisco2aug24/ ಕ್ಕೆ ಭೇಟಿ ನೀಡಿ.
– ತೆರೆದ ವೆಬ್ ಪೇಜ್‌ನಲ್ಲಿ ‘Click For New Registration’ ಎಂಬಲ್ಲಿ ಕ್ಲಿಕ್ ಮಾಡಿ.
– ನಂತರ ಮತ್ತೊಂದು ವೆಬ್‌ಪೇಜ್ ತೆರೆಯುತ್ತದೆ.
– ಇಲ್ಲಿ ಅಭ್ಯರ್ಥಿಗಳು ತಮ್ಮ ಬೇಸಿಕ್ ಡೀಟೇಲ್ಸ್ ನೀಡಿ ರಿಜಿಸ್ಟ್ರೇಷನ್ ಪಡೆಯಿರಿ.
– ನಂತರ ನಿಮ್ಮ ಆಸಕ್ತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯೂಸರ್ ನೇಮ್, ಪಾಸ್‌ವರ್ಡ್ ಬಳಸಿ, ಲಾಗಿನ್ ಆಗಿ.
– ನಂತರ ‘ Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.