ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ..?
ಹೌದು ಸ್ನೇಹಿತರೆ ಪ್ರಸ್ತುತ ನಮ್ಮ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿದ್ದು ಹಾಗೂ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯು ಕೂಡ ಆರಂಭವಾಗಿದೆ ಹಾಗಾಗಿ ನೀವು ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬಯಸುತ್ತಿದ್ದರೆ ಇದು ನಿಮಗೆ ಭರ್ಜರಿ ಗುಡ್ ನ್ಯೂಸ್..
ಹೌದು ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಡಿಸೆಂಬರ್ 12ನೇ ತಾರೀಖಿನಿಂದ ಅವಕಾಶ ಮಾಡಿಕೊಟ್ಟಿದೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 31 2024 ಆಗಿದೆ ಹಾಗಾಗಿ ನೀವು ರೇಷನ್ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಹಾಗೂ ಇತರ ಯಾವುದೇ ಕೆಲಸ ಮಾಡಲು ಬಯಸುತ್ತಿದ್ದರೆ ಈ ದಿನಾಂಕದ ಒಳಗಡೆ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಬಹುದು ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯು ಕೂಡ ಆರಂಭವಾಗಿದೆ.!
ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯು ಕೂಡ ಪ್ರಸ್ತುತ ಆರಂಭವಾಗಿದ್ದು ನೀವು ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬಯಸಿದರೆ ಬೆಳಗ್ಗೆ 10:00 ಗಂಟೆಯಿಂದ ಸಾಯಂಕಾಲ 4:30 ಗಂಟೆಯವರೆಗೆ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಈ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ನೀವು ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮಾಡಬಹುದು
ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಏನು ಮಾಡಬಹುದು (ration Card apply)..?
• ಸ್ನೇಹಿತರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಹೊಸದಾಗಿ ಕುಟುಂಬದ ಸದಸ್ಯರನ್ನು ಸೇರ್ಪಡೆ ಮಾಡಬಹುದು ಹಾಗೂ ಹೊಸದಾಗಿ ಮದುವೆಯಾದಂತಹ ದಂಪತಿಗಳ ಹೆಸರು ಸೇರ್ಪಡೆ ಮಾಡಬಹುದು
• ಸ್ನೇಹಿತರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಬದಲಾವಣೆ ಮಾಡಲು ಅವಕಾಶ ಬರುತ್ತದೆ
• ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾರ ಸದಸ್ಯರಾದರು ಮರಣ ಹೊಂದಿದ್ದರೆ ಅಂತ ಸದಸ್ಯರನ್ನು ಬಿಪಿಎಲ್ ರೇಷನ್ ಕಾರ್ಡ್ ನಿಂದ ಅಥವಾ ರೇಷನ್ ಕಾರ್ಡ್ ನಿಂದ ತೆಗೆದುಹಾಕಲು ಅವಕಾಶವಿದೆ
• ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೊಸದಾಗಿ ಮಕ್ಕಳನ್ನು ಹಾಗೂ ಇತರ ಸದಸ್ಯರನ್ನು ಸೇರ್ಪಡೆ ಮಾಡಬಹುದು
• ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಮದುವೆಯಾಗಿ ಹೋದಂತಹ ಸದಸ್ಯರನ್ನು ತೆಗೆದುಹಾಕಲು ಈ ತಿದ್ದುಪಡಿಯಲ್ಲಿ ಅವಕಾಶವಿದೆ
• ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ವಿಳಾಸದ ಬದಲಾವಣೆ ಅಂದರೆ ನೀವು ವಾಸ ಮಾಡುತ್ತಿರುವಂತಹ ಸ್ಥಳದ ಅಥವಾ ಬೇರೆ ಸ್ಥಳಕ್ಕೆ ವಲಸೆ ಹೋದರೆ ಅಂತ ಸಂದರ್ಭದಲ್ಲಿ ವಿಳಾಸದ ಬದಲಾವಣೆ ಮಾಡಬಹುದು ಇದರ ಜೊತೆಗೆ ನ್ಯಾಯಬೆಲೆ ಅಂಗಡಿ ಹೆಸರು ಬದಲಾವಣೆ ಮಾಡಿಸಬಹುದು
• ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಸದಸ್ಯರ ಈ ಕೆವೈಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಈ ತಿದ್ದುಪಡಿಯಲ್ಲಿ ಅವಕಾಶವಿದೆ
• ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾರ ಸದಸ್ಯರ ಹೆಸರು ತಪ್ಪಾಗಿದ್ದರೆ ಅಂತ ಸಂದರ್ಭದಲ್ಲಿ ಹೆಸರು ಸರಿಪಡಿಸಬಹುದು
ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?
• ಕುಟುಂಬದ ಸದಸ್ಯರ ಆಧಾರ್ ಕಾರ್ಡ್
• ಆರು ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ ಬೇಕಾಗುತ್ತದೆ
• ಜಾತಿ ಪ್ರಮಾಣ ಪತ್ರ
• ಆದಾಯ ಪ್ರಮಾಣ ಪತ್ರ
• ಮೊಬೈಲ್ ನಂಬರ್
• ಪಾನ್ ಕಾರ್ಡ್
• ರೇಷನ್ ಕಾರ್ಡ್
• ಇತ್ತೀಚಿನ ಭಾವಚಿತ್ರ
ಹೊಸ ರೇಷನ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಎಲ್ಲಿ ಮಾಡಿಸಬಹುದು (ration Card apply)..?
ಸ್ನೇಹಿತರೆ ನೀವು ಹೊಸದಾಗಿ ಬಿಪಿಎಲ್ ಅಥವಾ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಹಾಗೂ ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ಸದಸ್ಯರ ಬದಲಾವಣೆ ಅಥವಾ ಹೆಸರು ಸೇರ್ಪಡೆ ಅಥವಾ ಇತರ ಯಾವುದೇ ತಿದ್ದುಪಡಿ ಮಾಡಲು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಈ ಆನ್ಲೈನ್ ಕೇಂದ್ರಗಳಲ್ಲಿ ಡಿಸೆಂಬರ್ 31ನೇ ತಾರೀಖಿನವರೆಗೆ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4:30 ಗಂಟೆವರೆಗೆ ಅವಕಾಶವಿದೆ