ಆರೋಗ್ಯ ಇಲಾಖೆಯಲ್ಲಿ ಉದ್ಯೋಗವಕಾಶ..!
ಜ್ಞಾನ ಸಮೃದ್ಧಿಯ ಹೊಸ ಲೇಖನಕ್ಕೆ ಸ್ವಾಗತ..!
ಪ್ರಸ್ತುತ ನಮ್ಮ ಜ್ಞಾನ ಸಮೃದ್ಧಿಯ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಪಬ್ಲಿಕ್ ಹೆಲ್ತ್ ಅಸಿಸ್ಟೆಂಟ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸುವುದು ಹೇಗೆ ತಿಳಿಯೋಣ ಬನ್ನಿ..!
ಹೌದು ಸ್ನೇಹಿತರೆ, 10ನೇ ತರಗತಿ ಹಾಗೂ ಡಿಪ್ಲೋಮಾ ಪಾಸಾದ ಅಂತಹ ವಿದ್ಯಾರ್ಥಿಗಳಿಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ
ಪಬ್ಲಿಕ್ ಹೆಲ್ತ್ ಅಸಿಸ್ಟೆಂಟ್ ನೇಮಕಾತಿಗಾಗಿ ಆಯಿಲ್ ಇಂಡಿಯಾ ಲಿಮಿಟೆಡ್ ಅರ್ಜಿಗಳನ್ನು ಆಹ್ವಾನ ಮಾಡಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು oil-india.com ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಪ್ಲೇ ಮಾಡಬಹುದಾಗಿದೆ.
• ಅಭ್ಯರ್ಥಿಗಳು ದ್ವಿತಿಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಪಾಸ್ ಆಗಿರಬೇಕು
• ಡಿಪ್ಲೋಮಾ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ ತರಬೇತಿ ಪ್ರಮಾಣಪತ್ರ ಇರಬೇಕು
• MS Word, MS Excel, MS PowerPoint ಗಳ ಕುರಿತು ಜ್ಞಾನ ಹೊಂದಿರಬೇಕು
10ನೇ ತರಗತಿ ಪಾಸಾದ ಮಹಿಳೆಯರಿಗೆ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ..! Apply Now..!
• ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 1 ವರ್ಷ ಕೆಲಸ ಮಾಡಿದ ಅನುಭವ ಇರಬೇಕು.
• 21 ವರ್ಷದಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದಾಗಿದೆ.
ತಿಂಗಳಿಗೆ ಸಂಬಳ 16,640 ರೂಪಾಯಿಳನ್ನು ನೀಡಲಾಗುತ್ತದೆ. ಒಂದು ವೇಳೆ ವಿಶೇಷ ದಿನಗಳಲ್ಲಿ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ರೆ ಅದಕ್ಕೆ ಪ್ರತಿ ದಿನಕ್ಕೆ 640 ರೂಪಾಯಿಗಳಂತೆ ಹಣ ಪಾವತಿ ಮಾಡಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ಕೂಡಲೇ ಹುದ್ದೆಗೆ ಸೇರಬೇಕು. ಅಗತ್ಯವಿದ್ದಲ್ಲಿ ನಿಗದಿತ ದಿನಾಂಕದಿಂದ 15 ದಿನಗಳವರೆಗೆ ಹುದ್ದೆಗೆ ಸೇರಲು ಅವಕಾಶ ಇರುತ್ತದೆ.
ಈ ಸಮಯವನ್ನು ಮೀರಿ ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾಗಲಿಲ್ಲ ಎಂದರೆ ಅವರ ಅರ್ಜಿಯನ್ನು ರದ್ದು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಪಬ್ಲಿಕ್ ಹೆಲ್ತ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಸೆಪ್ಟೆಂಬರ್- 03 ಆಗಿದೆ.