ಕರ್ನಾಟಕ ರಾಜ್ಯದ್ಯಂತ ಖಾಲಿ ಇರುವ ಪಶು ವೈದ್ಯಾಧಿಕಾರಿಗಳ ನೇಮಕಾತಿ ಕುರಿತು ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಕುತ್ತಿಗೆ ಆಧಾರದ ಮೇಲೆ 400 ಪಶು ವೈದ್ಯಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳಲು ಇದೀಗ ಅಧಿಕೃತವಾಗಿ ಅಧಿಸೂಚನೆ ಬಿಡುಗಡೆ ಹೊಂದಿರುವುದು ಹಲವಾರು ಅಭ್ಯರ್ಥಿಗಳ ಮುಖದಲ್ಲಿ ಮಂದಹಾಸ ತಂದಂತಿದೆ.
ಈ ನೇಮಕಾತಿಯ ಕುರಿತು ನಾವು ನಿಮಗೆ ಸಂಪೂರ್ಣ ಅಧಿಕೃತ ಮಾಹಿತಿಯನ್ನು ತಿಳಿಸಲಿದ್ದು ನೀವೆಲ್ಲ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.

ಜ್ಞಾನ ಸಮೃದ್ಧಿ ಜಾಲತಾಣದಿಂದ ಪ್ರತಿಯೊಬ್ಬರಿಗೂ ನಮಸ್ಕಾರಗಳು. ನಮ್ಮ ಈ ಜ್ಞಾನ ಸಮೃದ್ಧಿ ಚಾಲತಾನದಲ್ಲಿ ನಾವು ದಿನನಿತ್ಯ ಸರ್ಕಾರಿ ಯೋಜನೆಗಳಿಗೆ ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡುತ್ತಿದ್ದೇವೆ. ಇವತ್ತಿನ ಈ ಒಂದು ಲೇಖನದಲ್ಲಿ ನಾವು ಕರ್ನಾಟಕ ರಾಜ್ಯದ್ಯಂತ ಖಾಲಿ ಇರುವ ಪಶುವೈದ್ಯಾಧಿಕಾರಿಗಳ ನೇಮಕಾತಿಯ ಕುರಿತು ಅಧಿಕೃತ ಅಧಿಸೂಚನೆಯ ವಿವರವನ್ನು ಸಂಪೂರ್ಣವಾಗಿ ತಿಳಿಸಲಿದ್ದೇವೆ.
ನೇಮಕಾತಿಗಾರರು ಪ್ರತಿಯೊಬ್ಬ ಅಭ್ಯರ್ಥಿಗಳು ಲೇಖನವನ್ನು ಸಂಪೂರ್ಣವಾಗಿ ಓದಿ ನೀವು ಅರ್ಹ ಇದ್ದರೆ ಮಾಡದೆ ಅರ್ಜಿ ಸಲ್ಲಿಸಬೇಕೆಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.
Karnataka Veterinary Doctor Recruitment 2024 : ಕರ್ನಾಟಕ ರಾಜ್ಯದ್ಯಂತ ಪಶು ವೈದ್ಯಧಿಕಾರಿಗಳ ನೇಮಕಾತಿ ಕುರಿತು
ಹೌದು ಸ್ನೇಹಿತರೆ, ಕರ್ನಾಟಕ ರಾಜ್ಯದ್ಯಂತ ಖಾಲಿ ಇರುವ 400 ಪಶು ವೈದ್ಯಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಆಯುಕ್ತರವರ ಕಾರ್ಯಾಲಯ ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಅಧಿಕೃತವಾಗಿ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳ ವಿವರ :
ಸ್ನೇಹಿತರೆ ಈ ಒಂದು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಬಯಸುವುದಾದರೆ ಮಾನ್ಯತೆ ಪಡೆದರೆ ವಿಶ್ವವಿದ್ಯಾಲಯದಿಂದ ನೀವು ಬಿ.ವಿ.ಎಸ್ಸಿ B. Vsc ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಪದವಿಯನ್ನು ಮುಗಿಸಬೇಕು. ಈ ಪದವಿಯನ್ನು ಮುಗಿಸಿದ್ದರೆ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತೀರಿ.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹೊಂದಬೇಕಾಗಿರುವ ವಯೋಮಿತಿ ಅರ್ಹತೆಗಳು :
ವಯೋಮಿತಿ ಅಭ್ಯರ್ಥಿಗಳು ಅರ್ಹತೆ ಹೊಂದಬೇಕಾಗಿರುವುದನ್ನು ನಾವು ನೋಡುವುದಾದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹೊಂದಿರಬೇಕು ಮತ್ತು ಗರಿಷ್ಠ 35 ವರ್ಷದ ಒಳಗಿರಬೇಕು.
ಮೀಸಲಾತಿ ವ್ಯಾಪ್ತಿಯಲ್ಲಿ ಬರುವಂತಹ ಪ್ರವರ್ಗ 2a 2b 3b ವರ್ಗದ ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಐದು ವರ್ಷಗಳ ವಯಸ್ಸಿನ ಸಡಲಿಕ್ಕೆ ನೀಡಲಾಗುತ್ತದೆ.
ಇನ್ನೇನು ಕೆಲವೇ ದಿನಗಳಲ್ಲಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭ ಮಾಡಲಾಗುವುದು. ಈ ನೇಮಕಾತಿಯ ಕುರಿತಂತೆ ಇನ್ನು ಹೆಚ್ಚಿನ ಅಪ್ಡೇಟ್ಸ್ ಗಳನ್ನು ಪಡೆಯಲು ನೀವು ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ಹೆಬ್ಬಾಳ ಬೆಂಗಳೂರಿನಲ್ಲಿ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ.