ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ವಿವಿಧ ಯೋಜನೆಗಳಡಿ ಸಮಾಲೋಚಕರ ಭರ್ತಿಗೆ ಇದೀಗ ನೇಮಕ ಅಧಿಸೂಚನೆಯನ್ನು ಪ್ರಕಟಿಸಿದೆ.
ಹುದ್ದೆಗಳನ್ನು ಇಲಾಖೆಯ ಜಿಲ್ಲಾ ತಾಂತ್ರಿಕ ಸಹಾಯಕರ ಘಟಕಗಳಲ್ಲಿ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ತಾಂತ್ರಿಕ, ತಾಂತ್ರಿಕೇತರ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಮಾಸಿಕ ರೂ.50,000 ದಿಂದ ರೂ.75,000 ವರೆಗೆ ವೇತನವನ್ನು ನೀಡಲಾಗುತ್ತದೆ. ಆಸಕ್ತರು ಹುದ್ದೆಗಳ ವಿವರ, ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆ
ಪರಿವೀಕ್ಷಣಾ ಮತ್ತು ಮೌಲ್ಯಮಾಪನ ಸಮಾಲೋಚಕರು : ಬಿಸಿಎ / ಬಿಇ (ಸಿಎಸ್ / ಐಟಿ) ಜತೆಗೆ 5 ವರ್ಷ ಕಾರ್ಯಾನುಭವವನ್ನು ಪಡೆದಿರಬೇಕು. ಅಥವಾ ಕನಿಷ್ಠ 2 ವರ್ಷ ಸರ್ಕಾರಿ ವಲಯದಲ್ಲಿ ಕಾರ್ಯಾನುಭವ ಪಡೆದಿರಬೇಕು.
ಪರಿಸರ ಸಮಾಲೋಚಕರು : ಬಿಇ / ಬಿ.ಟೆಕ್ / ಎಂ.ಟೆಕ್ ಅನ್ನು ಪರಿಸರ ಇಂಜಿನಿಯರಿಂಗ್ ವಿಷಯದಲ್ಲಿ ಪಡೆದಿರಬೇಕು. ಕನಿಷ್ಠ 5 ವರ್ಷ ಕಾರ್ಯಾನುಭವ ಅಥವಾ ಕನಿಷ್ಠ 2 ವರ್ಷ ಸರ್ಕಾರಿ ವಲಯದಲ್ಲಿ ಕಾರ್ಯಾನುಭವ ಹೊಂದಿರಬೇಕು.
ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮೀಣ, ಹಾವೇರಿ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ವಿಜಯನಗರ, ವಿಜಯಪುರ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೊಡಗು, ಮಂಗಳೂರು, ರಾಮನಗರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಧಾರವಾಡ, ಬೀದರ್, ಕಲಬುರಗಿ ಜಿಲ್ಲೆಗಳು.
ಅರ್ಜಿ ಸಲ್ಲಿಸುವ ವಿಧಾನ
– ವೆಬ್ ಪೋರ್ಟಲ್ https://www.ksrwspdtsuonline.in/jobapplicationform ಗೆ ಭೇಟಿ ನೀಡಿ, ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 23-09-2024