ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ವೆಲ್ ಭಾಗ್ಯ..! ರೈತರು ಈಗಲೇ ಅರ್ಜಿ ಸಲ್ಲಿಸಿ ಉಚಿತ ಬೋರ್ವೆಲ್ ಪಡೆದುಕೊಳ್ಳಿ..! Apply Now..!

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ವೆಲ್ ಪಡೆದುಕೊಳ್ಳಿ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

ರೈತ ಬಾಂಧವರಿಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಚಿಕ್ಕ ಹಾಗೂ ಅತಿ ಚಿಕ್ಕ ರೈತರಿಗೆ ಸಹಾಯವಾಗಲೆಂದು ಗಂಗಾ ಕಲ್ಯಾಣ ಯೋಜನಾ ಅಡಿಯಲ್ಲಿ ಸರ್ಕಾರವೇ ಬೋರ್ವೆಲ್ ಕೊರೆಸುವ ಸಹಾಯಧನವನ್ನು ನೀಡುತ್ತಿದ್ದು ಈ ಯೋಜನೆಯು ಯಾರಿಗೆ ಸಿಗಲಿದೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಹೇಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೆ ಯಾವ ಯಾವ ಜಿಲ್ಲೆಗಳಲ್ಲಿ ಈ ಗಂಗಾ ಕಲ್ಯಾಣ ಯೋಜನೆ ಚಾಲ್ತಿಯಲ್ಲಿದೆ ಈಗ ತಿಳಿದುಕೊಳ್ಳೋಣ ಬನ್ನಿ..!

ಹೌದು ಸ್ನೇಹಿತರೆ ಗಂಗಾ ಕಲ್ಯಾಣ ಯೋಜನೆಯು ಚಿಕ್ಕ ಹಾಗೂ ಅತಿ ಚಿಕ್ಕ ರೈತರಿಗೆ ಸಹಾಯವಾಗಲೆಂದು ಬಿಡುಗಡೆ ಆಗಿರುವಂತಹ ಯೋಜನೆಯಾಗಿದ್ದು ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ..

ಕರ್ನಾಟಕ ಮಿನಿರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಯೋಜನೆ ಅಡಿ ಪ್ರಾರಂಭಿಸಲಾಗಿದ್ದು ಈ ಯೋಜನೆ ಮೂಲಕ ಕೃಷಿಯ ಬೆಳೆಯ ಹೊಲಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ . ಇದರಲ್ಲಿ ಕೊಳವೆಬಾವಿ ಮತ್ತು ತೆರೆದ ಬಾವಿಯನ್ನು ರಚಿಸಲು , ಪಂಪ್ ಸೆಟ್‌ಗಳನ್ನು ಮತ್ತು ಎಕ್ಸೆಸರೀಸ್ ಗಳನ್ನು ಸ್ಥಾಪಿಸುವುದು ಸೇರಿದೆ.

ಪ್ರತಿ ಬೋರ್ವೆಲ್ ಯೋಜನೆಯ ( Free Borewell ) ಸರ್ಕಾರವು 1.50 ಲಕ್ಷ ರೂಪಾಯಿ ವರಿಗೆ ಸಂಪೂರ್ಣ ಉಚಿತ ಸಹಾಯಧನವನ್ನು ನಿಗದಿ ಮಾಡಿದ್ದು ಈ ಹಣವನ್ನು ಬೋರ್ವೆಲ್ ಕೊರೆಯಲು , ಪಂಪ್ ಸರಬರಾಜು ಮತ್ತು ವಿದ್ಯುತ್ ಉಪಕರಣ ಅಳವಡಿಸಲು ನೀಡಲಾಗುತ್ತಿದೆ. ಬೆಂಗಳೂರು ಅರ್ಬನ್ ,ಬೆಂಗಳೂರು ಗ್ರಾಮೀಣ ,ರಾಮನಗರ ,ಕೋಲಾರ , ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ 3.5 ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗುತ್ತಿದೆ.

Ganga Kalyana Yojana Karnataka Eligibility | ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡ

• ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ರೂ 90,000 ಹಾಗೂ ನಗರ ಪ್ರದೇಶದಲ್ಲಿ 1.03 ಲಕ್ಷ ಮೀರಿರಬಾರದು

• ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.

• ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು

• ಅರ್ಜಿದಾರರು ಕನಿಷ್ಠ ಅಥವಾ ಸಣ್ಣ ಕೃಷಿಕರಾಗಿರಬೇಕು.

Ganga Kalyana Yojana Required Documents | ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

• ಯೋಜನೆಯ ಅರ್ಜಿದಾರರ ಪ್ರಮಾಣ ಪತ್ರ

• ಜಾತಿ ಪ್ರಮಾಣ ಪತ್ರ

• ಆದಾಯ ಪ್ರಮಾಣ ಪತ್ರ

• ಆಧಾರ್ ಕಾರ್ಡ್

• ಬಿಪಿಎಲ್ ಕಾರ್ಡ್

• ಹೊಲದ ಹೊಲದ ಕೂಡುವಿಕೆ ರಸ್ತೆಯ ಕಡತದ ನಕಲು

• ಬ್ಯಾಂಕ್ ಪಾಸ್ ಪುಸ್ತಕ ನಕಲು

• ಭೂ ಕಂದಾಯ ರಸಿದಿ ಪಾವತಿ

• ಸ್ವಯಂ ಘೋಷಣಾ ಪತ್ರ

• ಸುರಕ್ಷಿತ ಸ್ವಯಂ ಘೋಷಣ ಪತ್ರ.

Ganga Kalyana Yojana Karnataka Apply Online | ಅರ್ಜಿ ಸಲ್ಲಿಸುವ ವಿಧಾನ

• ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ –

 https://kmdc.karnataka.gov.in/31/ganga-kalyana-schmeme/en

• ಯೋಜನೆಯ ಪುಟ ಆಯ್ಕೆ ಮಾಡಿ

• ಅರ್ಜಿಗೆ ಸಂಬಂಧಿಸಿದ ಮುಖಪುಟ ಪ್ರದರ್ಶಿತವಾಗುತ್ತದೆ.

• ಎಲ್ಲಾ ಅವಶ್ಯಕತೆ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ

• ಈ ಮೇಲೆ ತಿಳಿಸಿದ ಸಂಬಂಧಿತ ದಾಖಲೆಯನ್ನು ಅಪ್ಲೋಡ್ ಮಾಡಿ

• ಕೊನೆಯದಾಗಿ ಸಬ್ಮಿಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ

Leave a Comment