BEML ಸಂಸ್ಥೆಯಲ್ಲಿ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ..! Apply Now..!

BEML ಸಂಸ್ಥೆಯಲ್ಲಿ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ..!

ಜ್ಞಾನ ಸಮೃದ್ಧಿಯ ಹೊಸ ಲೇಖನಕ್ಕೆ ಸ್ವಾಗತ..!

ಪ್ರತಿನಿತ್ಯದ ನಮ್ಮ ಜ್ಞಾನ ಸಮೃದ್ಧಿಯ ಜಾಲತನದಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅದರಲ್ಲಿ ಪಿಯುಸಿ ಹಾಗೂ ಡಿಗ್ರಿ ಪಾಸಾದವರಿಗೆ ಉದ್ಯೋಗದ ಅವಕಾಶದ ಬಗ್ಗೆ ಪ್ರತಿನಿತ್ಯ ಮಾಹಿತಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಬಿ ಇ ಎಂ ಎಲ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ತಿಳಿಯೋಣ ಬನ್ನಿ..!

BEML Recruitment 2024:

ಬೆಂಗಳೂರು ಮೂಲದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ( BEML-ಬಿಇಎಂಎಲ್) ಕಂಪನಿಯಲ್ಲಿ 100 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಂದು ವರ್ಷದ ತರಬೇತಿ ಅವಧಿಯಲ್ಲಿ ಮಾಸಿಕ 15,500 ರೂಪಾಯಿ ಮಾಸಿಕ ವೇತನ ಇರಲಿದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

ಹುದ್ದೆಗಳಿಗೆ ಐಟಿಐ, ಡಿಪ್ಲೋಮಾ ಹಾಗೂ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ.

BEML Recruitment 2024: ಐಟಿಐ ಟ್ರೈನಿ ಹಾಗೂ ಆಫೀಸ್ ಅಸಿಸ್ಟಂಟ್ ಟ್ರೈನಿ ಸೇರಿ 100 ಹುದ್ದೆಗಳು ಖಾಲಿಯಿವೆ. ಆಫೀಸ್ ಅಸಿಸ್ಟಂಟ್ ಟ್ರೈನಿ ಹುದ್ದೆಗಳಿಗೆ ಪದವಿ ಅಥವಾ ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹುದು.

ಉಳಿದ ಹುದ್ದೆಗಳಿಗೆ ಸಂಬoಧಿಸಿದ ವಿಷಯದಲ್ಲಿ ಐಟಿಐ ಪೂರೈಸಿರಬೇಕಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕಡೆಯ ದಿನ. ದೈಹಿಕ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ, ಮೆಡಿಕಲ್, ದಾಖಲಾತಿ ಪರಿಶೀಲನೆ ಮೂಲಕ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಐಟಿಐ ಟ್ರೈನಿ ಟರ್ನರ್ 11, ಐಟಿಐ ಟ್ರೈನಿ ಫಿಟ್ಟರ್ 7, ಐಟಿಐ ಟ್ರೈನಿ ಮೆಕಾನಿಸ್ಟ್ 11, ಐಟಿಐ ಟ್ರೈನಿ ವೆಲ್ಡರ್ 18, ಐಟಿಐ ಟ್ರೈನಿ ಎಲೆಕ್ಟ್ರಿಷಿಯನ್ 8 ಮತ್ತು ಆಫೀಸ್ ಅಸಿಸ್ಟಂಟ್ ಟ್ರೈನಿ 46 ಹುದ್ದೆಗಳಿಗೆ ನೇಮಕಾಗಿ ನಡೆಯಲಿದೆ.

ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷ ತರಬೇತಿ ಅವಧಿ ಇರುತ್ತದೆ, ಅಲ್ಲದೆ, ಮತ್ತೊಂದು ವರ್ಷ ಒಪ್ಪಂದ ಅವಧಿಯನ್ನು ಯಶಸ್ವಿಯಾಗಿ ಪೂರೈಸಬೇಕು. ಎರಡು ವರ್ಷಗಳ ಬಳಿಕ ನಿಯಮಾನುಸಾರ ಬಿಇಎಂಎಲ್ ನ ಖಾಯಂ ಉದ್ಯೋಗಿಗಳಾಗುತ್ತಾರೆ.

ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಸೆಪ್ಟೆಂಬರ್ 4, 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು 32 ವರ್ಷದ ವಯೋಮಿತಿ ನಿಗದಿಪಡಿಸಲಾಗಿದೆ. ಇನ್ನು ಹೆಚ್ಚಿನ ಉದ್ಯೋಗಾವಕಾಶದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

https://kps14.exmegov.com/#/login

Leave a Comment