Loan: ಬಡ್ಡಿ ಇಲ್ಲದೆ 5 ಲಕ್ಷ ಸಾಲ ವಿತರಣೆ.!
ರಾಜ್ಯದ ರೈತರಿಗೆ ಗುಡ್ ನ್ಯೂಸ್ ಸರ್ಕಾರದ ವತಿಯಿಂದ 5 ಲಕ್ಷ ರೂಪಾಯಿ ಸಾಲವನ್ನು(Loan) ನೀಡುತ್ತಿದ್ದಾರೆ ಈ ವಿಚಾರವನ್ನು ಮಾನ್ಯ ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಸಾಲವನ್ನು ಪಡೆಯಲು ಬೇಕಾಗುವ ದಾಖಲಾತಿಗಳು ಏನು.?
ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ.? ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿ ಕೊಡುತ್ತೇವೆ ಕೊನೆಯವರೆಗೂ ಓದಿ.
LOAN: 5 lakh loan distribution without interest.!
Siddaramaiah, who is a valid chief minister, shared the issue on his Twitter account. What are the documents needed to get a loan? How to submit an application? Complete information will tell you in this article.
Our government has been tied up to re -enthusiastic in the field of agriculture, which has been affected by climate change, uncertain harvest and disease. It is our government’s wish to pay for the hands of others and encourage them to invest in agriculture, thereby strengthening the economy of the country. The loans of zero interest for up to Rs 5 lakh have been extended to the Co -operative Agriculture Bank and Rural Development Bank. 38 crore for this. Dedicated. We have again proved that the concern of the peasantry is not the commodity of our speech but the focus of the administration. Siddaramaiah shared this on his Twitter account.
The agricultural loan limit for zero interest rate has been increased from Rs 3 lakh to Rs 5 lakh. 290 crore for 6,744 farmers in 2023-24. The loan was issued, and by the end of February 2025, 13,689 farmers were paid Rs 589.12 crore. Co -operative Minister K.N. Rajanna said.
Eligible to get a loan:
Responding to a query by Pratap Sinha Nayak in the Vidhan Sabha, the minister made it clear that all farmers are not entitled to get agricultural loans at zero interest rate of up to Rs 5 lakh. He explained that if the land is higher, there will be higher debt, and the amount of debt will be reduced accordingly if there is less land.
Details of NABARD aid and loan distribution:
5600 crore, as NABARD did not provide the expected level of assistance this time. The subsidy requires Rs 936 crore, but 58 per cent. Only available. Considering the available wealth, agricultural loans are being taken. The government will pay interest on the loans of cooperative banks at zero interest rates.
Introduction to zero interest loan:
The agricultural loan scheme was launched in 2004 in 2004 and in 2012-13, zero interest loans were paid up to Rs 1 lakh. This limit was extended to Rs 2 lakh in 2013-14. 5 lakhs in 201Increased to, but the government has changed before implementation. The current government has extended the loan limit of Rs 3 to Rs 5 lakh.
Debt Delivery Terms:
The agricultural loan obtained by the farmers will be decided on a land grip or crop basis.
- Short term loan: zero interest for 1 year.
- Medium term loan: 5 years.
- Long -term loan: 10 years.
Banks offering lending:
Zero interest loan for agricultural activities is provided by Primary Cooperative Agriculture and Rural Development Banks, Picard Bank and District Co -operative Central Banks (DCC Bank). In addition, the loans are available up to Rs 5 lakh for sheep, goat, poultry, pork farming and silk shed construction.
Eligible and Registration Process:
- Bank Membership: Farmers should be a member of the Primary Agricultural Co -operative Society or District Co -operative Central Banks.
- Landslide: Borrowing farmers should be in the jurisdiction of the land or the area of land.
- Other loans: Farmers will not be eligible for zero interest loan if they have borrowed from other banks.
- Dispute: If there is no loan in a specific association, you can apply for a remarkable letter and apply to the relevant DCC Bank.
- State Limited Rule: Living in the Neighborhood, Farmers who have land in Karnataka are not eligible for this scheme
Required Documents:
- Primary Agricultural Co -operative Society or DCC Bank Membership List
- Pahini (RTC)
- Aadhaar card
- Bank Pass Book Xerox
- Caste and Income Certificate
Farmers will be able to obtain agricultural loans at zero interest rate by maintaining all these rules and processes.
In the budget of the Karnataka government for the year 2023-24, the limit of zero interest rate for farmers has increased from Rs 3 lakh to Rs 5 lakh. Similarly, the interest rate on medium and long -term loans has been reduced by 3 per cent and the limit of these loans has been increased from Rs 10 lakh to Rs 15 lakh. The move will enable more than 35 lakh farmers in the state to get a loan of Rs 25,000 crore.
The government is committed to lending zero interest rates to farmers. These loans are being distributed through cooperatives, and the amount of loan is fixed by the land holding, crop type and loan repayment capacity of each farmer. However, as NABARD has not received the expected amount of credit, the government has requested the Prime Minister, the Finance Minister and the NABARD to give more lending.
ಹವಾಮಾನ ವೈಪರೀತ್ಯ, ಅನಿಶ್ಚಿತ ಫಸಲು ಹಾಗೂ ರೋಗರುಜಿನಗಳಿಂದ ತತ್ತರಿಸಿಹೋಗಿರುವ ಕೃಷಿ ಕ್ಷೇತ್ರದಲ್ಲಿ ಮತ್ತೆ ಉತ್ಸಾಹವನ್ನು ಕಾಣಲು ನಮ್ಮ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಅನ್ನದಾತರ ಕೈಗಳಿಗೆ ಹಣ ನೀಡಿ ಅದನ್ನು ಕೃಷಿಯಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಿ, ಆ ಮೂಲಕ ನಾಡಿನ ಆರ್ಥಿಕತೆಗೆ ಬಲತುಂಬುವುದು ನಮ್ಮ ಸರ್ಕಾರದ ಆಶಯ. 5 ಲಕ್ಷ ರೂ.ಗಳವರೆಗೆ ಶೂನ್ಯ ಬಡ್ಡಿ ರೂಪದಲ್ಲಿ ನೀಡಲಾಗುವ ಸಾಲವನ್ನು ಸಹಕಾರಿ ಕೃಷಿ ಬ್ಯಾಂಕ್ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳಿಗೆ ವಿಸ್ತರಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿಯಾಗಿ 38 ಕೋಟಿ ರೂ. ಮೀಸಲಿರಿಸಲಾಗಿದೆ. ರೈತರ ಕಾಳಜಿ ಎನ್ನುವುದು ನಮ್ಮ ಭಾಷಣದ ಸರಕಲ್ಲ, ಆಡಳಿತದ ಕೇಂದ್ರಬಿಂದು ಎಂಬುದನ್ನು ಮತ್ತೆ ಸಾಬೀತು ಮಾಡಿದ್ದೇವೆ. ಎಂದು ಸಿದ್ದರಾಮಯ್ಯನವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲ ಮಿತಿಯನ್ನು 3 ಲಕ್ಷ ರೂ.ದಿಂದ 5 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. 2023-24ನೇ ಸಾಲಿನಲ್ಲಿ 6,744 ರೈತರಿಗೆ 290 ಕೋಟಿ ರೂ. ಸಾಲ ನೀಡಲಾಗಿದ್ದು, 2025ರ ಫೆಬ್ರವರಿ ಅಂತ್ಯದ ವೇಳೆಗೆ 13,689 ರೈತರಿಗೆ 589.12 ಕೋಟಿ ರೂ. ಕೃಷಿ ಸಾಲ ವಿತರಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಸಾಲ ಪಡೆಯಲು ಅರ್ಹತೆ:
ವಿಧಾನಪರಿಷತ್ ಪ್ರಶೋತ್ತರ ಕಲಾಪದಲ್ಲಿ ಪ್ರತಾಪ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ಪಡೆಯಲು ಎಲ್ಲ ರೈತರು ಅರ್ಹರಲ್ಲ ಎಂದು ಸ್ಪಷ್ಟಪಡಿಸಿದರು. ಭೂಸ್ವಾಮ್ಯ ಹೆಚ್ಚು ಇದ್ದರೆ ಹೆಚ್ಚಿನ ಸಾಲ ಸಿಗಲಿದೆ, ಕಡಿಮೆ ಭೂಸ್ವಾಮ್ಯ ಹೊಂದಿದ್ದರೆ ಅನುಗುಣವಾಗಿ ಸಾಲದ ಪ್ರಮಾಣ ಕಡಿಮೆಯಾಗಲಿದೆ ಎಂದು ವಿವರಿಸಿದರು.
ನಬಾರ್ಡ್ ನೆರವು ಮತ್ತು ಸಾಲ ವಿತರಣೆಯ ವಿವರ:
ಈ ಬಾರಿ ನಬಾರ್ಡ್ ನಿರೀಕ್ಷಿತ ಮಟ್ಟದಲ್ಲಿ ನೆರವು ನೀಡದ ಕಾರಣ, 5600 ಕೋಟಿ ರೂ. ಸಹಾಯಧನ ಸಿಗಬೇಕಾಗಿದ್ದರೂ ಶೇ.58ರಷ್ಟು ಕಡಿಮೆಯಾಗಿ 936 ಕೋಟಿ ರೂ. ಮಾತ್ರ ಲಭಿಸಿದೆ. ಲಭ್ಯ ಸಂಪತ್ತನ್ನು ಪರಿಗಣಿಸಿ ಕೃಷಿ ಸಾಲ ವಿತರಣೆಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಹಕಾರಿ ಬ್ಯಾಂಕುಗಳು ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲಕ್ಕೆ ಸರಕಾರವೇ ಬಡ್ಡಿ ಪಾವತಿಸಲಿದೆ.
ಶೂನ್ಯ ಬಡ್ಡಿ ಸಾಲದ ಪರಿಚಯ:
ರಾಜ್ಯದಲ್ಲಿ 2004ರಲ್ಲಿ ಕೃಷಿ ಸಾಲ ಯೋಜನೆ ಆರಂಭಗೊಂಡಿದ್ದು, 2012-13ರಲ್ಲಿ 1 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ಸಾಲ ನೀಡಲಾಗುತ್ತಿತ್ತು. 2013-14ರಲ್ಲಿ ಈ ಮಿತಿಯನ್ನು 2 ಲಕ್ಷ ರೂ.ಗೆ ವಿಸ್ತರಿಸಲಾಯಿತು. 2014ರಲ್ಲಿ 5 ಲಕ್ಷ ರೂ.ಗೆ ಹೆಚ್ಚಿಸಲಾಯಿತು, ಆದರೆ ಅನುಷ್ಠಾನಗೊಳ್ಳುವ ಮುನ್ನ ಸರಕಾರ ಬದಲಾಗಿದೆ. ಪ್ರಸ್ತುತ ಸರಕಾರ 3ರಿಂದ 5 ಲಕ್ಷ ರೂ.ವರೆಗೆ ಸಾಲ ಮಿತಿಯನ್ನು ವಿಸ್ತರಿಸಿದೆ.
ಸಾಲ ವಿತರಣಾ ನಿಯಮಗಳು:
ರೈತರು ಪಡೆಯುವ ಕೃಷಿ ಸಾಲ ಭೂಸ್ವಾಮ್ಯ ಅಥವಾ ಬೆಳೆ ಆಧಾರದ ಮೇಲೆ ನಿರ್ಧಾರವಾಗುತ್ತದೆ.
• ಅಲ್ಪಾವಧಿ ಸಾಲ: 1 ವರ್ಷದವರೆಗೆ ಶೂನ್ಯ ಬಡ್ಡಿ.
• ಮಧ್ಯಮಾವಧಿ ಸಾಲ: 5 ವರ್ಷ.
• ದೀರ್ಘಾವಧಿ ಸಾಲ: 10 ವರ್ಷ.
ಸಾಲ ನೀಡುವ ಬ್ಯಾಂಕುಗಳು:
ಕೃಷಿ ಚಟುವಟಿಕೆಗಳಿಗೆ ಶೂನ್ಯ ಬಡ್ಡಿ ಸಾಲವನ್ನು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು, ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳು (DCC Bank) ಒದಗಿಸುತ್ತವೆ. ಇದಲ್ಲದೆ, ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆ, ರೇಷ್ಮೆ ಶೆಡ್ ನಿರ್ಮಾಣಗಳಿಗೆ ಸಹ 5 ಲಕ್ಷ ರೂ.ವರೆಗೆ ಸಾಲ ಲಭ್ಯವಿದೆ.
ಅರ್ಹತೆ ಮತ್ತು ನೋಂದಣಿ ಪ್ರಕ್ರಿಯೆ:
• ಬ್ಯಾಂಕ್ ಸದಸ್ಯತ್ವ: ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳ ಸದಸ್ಯರಾಗಿರಬೇಕು.
• ಭೂಸ್ವಾಮ್ಯ: ಸಾಲ ಪಡೆಯುವ ರೈತರು ಜಮೀನು ಹೊಂದಿರುವ ಸ್ಥಳ ಅಥವಾ ವಾಸಿಸುವ ಪ್ರದೇಶದ ಸಹಕಾರ ಸಂಘ ವ್ಯಾಪ್ತಿಯಲ್ಲಿ ಇರಬೇಕು.
• ಇತರ ಸಾಲಗಳು: ರೈತರು ಬೇರೆ ಬ್ಯಾಂಕುಗಳಿಂದ ಸಾಲ ಪಡೆದಿದ್ದರೆ ಶೂನ್ಯ ಬಡ್ಡಿ ಸಾಲಕ್ಕೆ ಅರ್ಹರಾಗುವುದಿಲ್ಲ.
• ನಿರಪೇಕ್ಷಣಾ ಪತ್ರ: ನಿರ್ದಿಷ್ಟ ಸಂಘದಲ್ಲಿ ಸಾಲ ಸಿಗದಿದ್ದರೆ, ನಿರಪೇಕ್ಷಣಾ ಪತ್ರ ಪಡೆದು ಸಂಬಂಧಿತ ಡಿಸಿಸಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬಹುದು.
• ರಾಜ್ಯ ಮಿತಿಯ ನಿಯಮ: ನೆರೆರಾಜ್ಯದಲ್ಲಿ ವಾಸವಿದ್ದು, ಕರ್ನಾಟಕದಲ್ಲಿ ಜಮೀನು ಹೊಂದಿರುವ ರೈತರು ಈ ಯೋಜನೆಗೆ ಅರ್ಹರಾಗುವುದಿಲ್ಲ
ಆವಶ್ಯಕ ದಾಖಲೆಗಳು:
• ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ DCC ಬ್ಯಾಂಕ್ ಸದಸ್ಯತ್ವ ಪಟ್ಟಿ
• ಪಹಣಿ (RTC)
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಈ ಎಲ್ಲಾ ನಿಯಮ ಮತ್ತು ಪ್ರಕ್ರಿಯೆಗಳನ್ನು ಪಾಲನೆ ಮಾಡುವ ಮೂಲಕ ರೈತರು ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ಪಡೆಯಲು ಸಾಧ್ಯವಾಗುತ್ತದೆ.
ಕರ್ನಾಟಕ ಸರ್ಕಾರವು 2023-24ನೇ ಸಾಲಿನ ಬಜೆಟ್‌ನಲ್ಲಿ ರೈತರಿಗೆ ಶೂನ್ಯ ಬಡ್ಡಿದರದ ಸಾಲದ ಮಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಇದೇ ರೀತಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಬಡ್ಡಿದರವನ್ನು ಶೇಕಡಾ 3ರಷ್ಟು ಇಳಿಸಿ, ಈ ಸಾಲಗಳ ಮಿತಿಯನ್ನು 10 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ಕ್ರಮದಿಂದ ರಾಜ್ಯದ 35 ಲಕ್ಷಕ್ಕಿಂತ ಹೆಚ್ಚು ರೈತರು 25,000 ಕೋಟಿ ರೂ.ಗಳಷ್ಟು ಸಾಲ ಪಡೆಯಲು ಸಾಧ್ಯವಾಗಲಿದೆ.
ಸರ್ಕಾರವು ರೈತರಿಗೆ ಶೂನ್ಯ ಬಡ್ಡಿದರದ ಸಾಲ ನೀಡಲು ಬದ್ಧವಾಗಿದೆ. ಸಹಕಾರ ಸಂಘಗಳ ಮೂಲಕ ಈ ಸಾಲಗಳನ್ನು ವಿತರಿಸಲಾಗುತ್ತಿದ್ದು, ಪ್ರತಿ ರೈತನ ಜಮೀನು ಹಿಡುವಳಿ, ಬೆಳೆ ಪ್ರಕಾರ ಮತ್ತು ಸಾಲ ಮರುಪಾವತಿ ಸಾಮರ್ಥ್ಯವನ್ನು ಪರಿಗಣಿಸಿ ಸಾಲದ ಪ್ರಮಾಣವನ್ನು ನಿಗದಿಪಡಿಸಲಾಗುತ್ತದೆ. ಆದಾಗ್ಯೂ, ನಬಾರ್ಡ್‌ನಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಾಲ ಸೌಲಭ್ಯ ಸಿಗದಿರುವುದರಿಂದ, ಸರ್ಕಾರವು ಪ್ರಧಾನಮಂತ್ರಿ, ಹಣಕಾಸು ಸಚಿವರು ಮತ್ತು ನಬಾರ್ಡ್ ಮುಖ್ಯಸ್ಥರಿಗೆ ಹೆಚ್ಚಿನ ಸಾಲ ನೀಡುವಂತೆ ಮನವಿ ಮಾಡಿದೆ.