ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು
ಪ್ರೀತಿಯ ಓದುಗರೆ ಈಗ ಯುವನಿಧಿಯ ಹೊಸ ಅಪ್ಡೇಟ್ ತಿಳಿಯೋಣ ಬನ್ನಿ..
ಯುವನಿಧಿ ಪಡೆಯುತ್ತಿರುವವರು ಈ ದಾಖಲೆಗಳನ್ನು ಸಲ್ಲಿಸದಿದ್ದರೆ ಮುಂದಿನ ಕಂತಿನ ಹಣ ಬರುವುದಿಲ್ಲ | Yuvanidhi Big update
ಯುವ ನಿಧಿ ಯೋಜನೆಯ ಲಾಭವನ್ನು ಪಡೆಯುತ್ತಿರುವವರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್ ಬಂದಿದ್ದು, ಈ ದಾಖಲಾತಿಗಳನ್ನು ಸಲ್ಲಿಸದೆ ಇದ್ದರೆ ಮುಂದಿನ ತಿಂಗಳಿನಿಂದ ನಿಮ್ಮ ಖಾತೆಯ ಹಣ ಬರುವುದು ನಿಲ್ಲುತ್ತದೆ. ಈಗಲೇ ಈ ಮಾಹಿತಿಯನ್ನು ತಿಳಿದುಕೊಳ್ಳಿ.
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ನಮ್ಮ ಈ ಜಾಲತಾಣದಲ್ಲಿ ನಾವು ಸಾರ್ವಜನಿಕರಿಗೆ, ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಯುವ ನಿಧಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಇರುವ ಬಿಗ್ ಅಪ್ಡೇಟ್ ಬಗ್ಗೆ ತಿಳಿಸಲಿದ್ದೇವೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮುನ್ನ ಪ್ರಚಾರದಲ್ಲೇ ತನ್ನ ಪ್ರಣಾಳಿಕೆಯಲ್ಲಿ ತಾವು ಗೆದ್ದರೆ ಪಂಚ ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರುವುದಾಗಿ ಗ್ಯಾರಂಟಿ ಕೊಟ್ಟಿದ್ದರು. ಅದೇ ರೀತಿ ಅವರು ಕೊಟ್ಟ ಮಾತಿನಂತೆ ಕರ್ನಾಟಕ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಉಚಿತ ಬಸ್ ಹಾಗೂ ಯುವನಿಧಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತಂದೇಬಿಟ್ಟರು.
ಯುವನಿಧಿ ಯೋಜನೆಯನ್ನು ಜಾರಿಗೆ ತರುವುದು ಸ್ವಲ್ಪ ತಡವಾದರೂ ಕೂಡ, ಜನವರಿ ತಿಂಗಳಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ಇದೀಗ ಕಳೆದ ತಿಂಗಳಿಂದ ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮವಾಗಲು ಆರಂಭವಾಗುತ್ತಿದೆ. ಅನೇಕ ಬಡ ಜನರಿಗೆ ಹಾಗೂ ಉದ್ಯೋಗ ದೊರೆಯದೇ ಇದ್ದಂತಹ ಯುವಜನರಿಗೆ ಇದು ಒಂದು ಬಾರಿ ಸಹಾಯ ಮಾಡಿದೆ. ಈ ಯೋಜನೆಯಡಿಯಲ್ಲಿ ತಿಂಗಳ ಹಣ ಪಡೆದವರು ಪ್ರತಿ ತಿಂಗಳು ಈ ದಾಖಲಾತಿಗಳನ್ನು ಸಲ್ಲಿಸದೆ ಇದ್ದರೆ ನಿಮಗೆ ಮುಂದಿನ ತಿಂಗಳಿನಿಂದ ಹಣ ಬರುವುದನ್ನು ಸ್ಥಗಿತಗೊಳಿಸಲಾಗುವುದು.
ಏನದು?
ಇವನಿಗೆ ಯೋಜನೆಯ ಲಾಭವನ್ನು ಪಡೆಯುತ್ತಿರುವ ಪ್ರತಿಯೊಬ್ಬ ಅರ್ಹ ಫಲಾನುಭವಿಯು, ಪ್ರತಿ ತಿಂಗಳು ಸರ್ಕಾರಕ್ಕೆ ತನಗೆ ಯಾವುದೇ ರೀತಿಯ ಉದ್ಯೋಗ ಸಿಕ್ಕಿಲ್ಲ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿರಬೇಕು. ಉದ್ಯೋಗ ಸಿಕ್ಕಿಲ್ಲ ಎಂಬ ಮಾಹಿತಿ ಮಾತ್ರವಷ್ಟೇ ಇಲ್ಲದೆ, ನಾನು ಯಾವುದೇ ರೀತಿಯ ಉನ್ನತ ಶಿಕ್ಷಣ ಪಡೆಯುತ್ತಿಲ್ಲ ಎಂಬ ಮಾಹಿತಿಯನ್ನು ಕೂಡ ಸರ್ಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ. ಒಂದು ವೇಳೆ ನೀವು ಸಲ್ಲಿಸಲು ವಿಫಲರಾಗಿದ್ದಲ್ಲಿ ನಿಮಗೆ ಮುಂದಿನ ತಿಂಗಳಿಂದ ಈ ಯೋಜನೆಯಲ್ಲಿ ಬರುತ್ತಿರುವ ಹಣವು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಪ್ರತಿಯೊಬ್ಬ ಅರ್ಹ ಫಲಾನುಭವಿಯು ಕೂಡ ಪ್ರತಿ ತಿಂಗಳು ನನಗೆ ಯಾವುದೇ ರೀತಿಯ ಉದ್ಯೋಗ ಸಿಕ್ಕಿಲ್ಲ ಮತ್ತು ನಾನು ಉನ್ನತ ಶಿಕ್ಷಣಕ್ಕೆ ದಾಖಲಾತಿ ಮಾಡಿಸಿಲ್ಲ ಎಂಬ ಸ್ವಯಂಘೋಷಿತ ದಾಖಲೆಗಳನ್ನು ಸರ್ಕಾರಕ್ಕೆ ಪ್ರತಿ ತಿಂಗಳು ಸಲ್ಲಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಈ ಯೋಜನೆಯ ಅಡಿಯಲ್ಲಿ 2022-23 ರ ನಂತರ ಪದವಿ ಮುಗಿಸಿದಂತಹ ಅಭ್ಯರ್ಥಿಗಳಿಗೆ ಹಾಗೂ ಪದವಿ ಮುಗಿದು ಆರು ತಿಂಗಳಾದರೂ ಯಾವುದೇ ರೀತಿಯ ಉದ್ಯೋಗ ಸಿಕ್ಕಿಲ್ಲ ಮತ್ತು ಶಿಕ್ಷಣ ಪಡೆಯುತ್ತಿಲ್ಲದೆ ಇರುವಂತಹ ಅಭ್ಯರ್ಥಿಗಳಿಗೆ ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಈ ಯೋಜನೆಯಿಂದ ಬರುತ್ತಿರುವಂತಹ ಹಣವು ಫಲಾನುಭವಿಗಳಿಗೆ ಎರಡು ವರ್ಷದ ಅವಧಿಗೆ ಮಾತ್ರ ಬರುತ್ತದೆ ಅಥವಾ ಅಭ್ಯರ್ಥಿಯ ಉದ್ಯೋಗ ಸಿಗುವವರೆಗೆ ಮಾತ್ರ ಹಣವು ಬರುತ್ತಿರುತ್ತದೆ. ಒಂದು ವೇಳೆ ನಿಮಗೆ ಎರಡು ವರ್ಷದ ಅವಧಿಯಲ್ಲಿ ಉದ್ಯೋಗ ಸಿಕ್ಕರೆ ಈ ಮಾಹಿತಿಯನ್ನು ನೀವು ಸರ್ಕಾರಕ್ಕೆ ಸ್ವಯಂಘೋಷಿತವಾಗಿ ಸರ್ಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಸರ್ಕಾರಕ್ಕೆ ಪ್ರತಿ ತಿಂಗಳು ಸ್ವಯಂ ಘೋಷಿತ ದಾಖಲಾತಿಗಳನ್ನು ಸಲ್ಲಿಸಿ ಮತ್ತು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.