ಹೌದು ಇದೀಗ ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ಇಲಾಖೆಯಲ್ಲಿ ಟ್ರೇಡ್ ಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.
ಅರ್ಜಿ ಸಲ್ಲಿಸಲು ನಮಗೆ ಸಾಮಾನ್ಯವಾಗಿ ಬರುವಂಥ ಪ್ರಶ್ನೆಗಳು ವಯೋಮಿತಿ ಎಷ್ಟಿರಬೇಕು..? ವಿದ್ಯಾ ಅರ್ಹತೆ ಏನಾಗಿರಬೇಕು..? ಒಟ್ಟು ಎಷ್ಟು ಹುದ್ದೆಗಳಿವೆ..? ನಿಮ್ಮೆಲ್ಲ ಈ ಪ್ರಶ್ನೆಗೆ ಈ ಕೆಳಗಡೆ ಉತ್ತರ.
ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ನೇಮಕಾತಿ 2024:
ಒಟ್ಟು ಎಷ್ಟು ಹುದ್ದೆಗಳಿವೆ..?
- 73
- ಆಯ್ಕೆಯಾಗಿರುವ ಅಭ್ಯರ್ಥಿಗಳು ಭಾರತದಲ್ಲಿಡೆ ಕೆಲಸ ಮಾಡಬೇಕು.
ಶೈಕ್ಷಣಿಕ ಅರ್ಹತೆ..?
- ಅಧಿಸೂಚನೆ ಪ್ರಕಾರ 10ನೇ ತರಗತಿ ಹಾಗೂ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಬೇಕು ಜೊತೆಗೆ ಐಟಿಐ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ..?
- ದಿನಾಂಕ 12 ಏಪ್ರಿಲ್ 2024ಕ್ಕೆ ಅಭ್ಯರ್ಥಿಗೆ ಕನಿಷ್ಠ 15 ಪೂರೈಸಬೇಕು ಹಾಗೂ ಗರಿಷ್ಠ 24 ವರ್ಷಗಳ ಒಳಗಡೆ ಇರಬೇಕು.
- ವಯೋಮಿತಿ ಸಡಲಿಕ್ಕೆ ಮಾಡಿದ್ದಾರೆ sc , st ಅಭ್ಯರ್ಥಿಗಳಿಗೆ 5 ವರ್ಷ.
- ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ.
- ಪಿಡಬ್ಲ್ಯೂಡಿ ಮಾಜಿಕ ಸೈನಿಕ ಅಭ್ಯರ್ಥಿಗಳಿಗೆ 10 ವರ್ಷ.
ಆಯ್ಕೆ ವಿಧಾನ ಹೇಗೆ..?
- ಮೊದಲಿಗೆ ಅಭ್ಯರ್ಥಿಗಳು ವಿದ್ಯಾ ಅರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಒಂದು ಮೆರಿಟ್ ಲಿಸ್ಟ್ ಸಿದ್ಧಪಡಿಸುತ್ತಾರೆ ನಂತರ ಮೆರಿಟ್ ಲಿಸ್ಟ್ ನಲ್ಲಿ ಬಂದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡುತ್ತಾರೆ.
ಪ್ರಮುಖ ಲಿಂಕ್ ಗಳು.!
ನೋಟಿಫಿಕೇಶನ್:👇
https://drive.google.com/file/d/1qm_ga43kifE36Y-JklRS0VoaVRRpUIij/view?usp=drivesdk
ಅರ್ಜಿ ಲಿಂಕ್ 👇:
https://portal.mhrdnats.gov.in/boat/login/user_login.action