ದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಲು ಸರ್ಕಾರದ ಯೋಜನೆಗೆ ಅರ್ಜಿ ಅಹ್ವಾನ : ನಿಮ್ಮ ಮಕ್ಕಳು ಕೂಡ ಅರ್ಜಿ ಸಲ್ಲಿಸಬಹುದಾ? ಈಗಲೇ ತಿಳಿದುಕೊಳ್ಳಿ.

ದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಲು ಸರ್ಕಾರದ ಯೋಜನೆಗೆ ಅರ್ಜಿ ಅಹ್ವಾನ : ನಿಮ್ಮ ಮಕ್ಕಳು ಕೂಡ ಅರ್ಜಿ ಸಲ್ಲಿಸಬಹುದಾ? ಈಗಲೇ ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ, ನಮ್ಮ ಈ ಚಾಲತಾನದಲ್ಲಿ ನಾವು ಪ್ರತಿನಿತ್ಯ ಜನರಿಗೆ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಹಾಯವಾಗುವಂತ ಮಾಹಿತಿಯನ್ನು ಪ್ರತಿನಿತ್ಯ ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಕೊಡಿಸುವ ನೆಟ್ಟಿನಲ್ಲಿ ಸರ್ಕಾರದ ಯೋಜನೆ ಆಗಿರುವಂತಹ ಆರ್ ಟಿ ಇ ಕಾಯ್ದೆ ಅಡಿ ಇರುವಂತಹ ಯೋಜನೆಯ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ.

RTE Karnataka 2024: ರೈಟ್ ಟು ಎಜುಕೇಶನ್ ಅಂದರೆ ಶಿಕ್ಷಣ ಹಕ್ಕು. ಈ ಒಂದು ಕಾಯ್ದೆಯ ಅಡಿಯಲ್ಲಿ ಎಲ್ಲ ಬಡ ಮಕ್ಕಳಿಗೂ ಅಥವಾ ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು, ಈ ಒಂದು ಯೋಜನೆಯ ಅಡಿಯಲ್ಲಿ ಎಲ್ಲಾ ಮಕ್ಕಳಿಗೂ ಸರ್ಕಾರದಿಂದ ಉಚಿತ ಶಿಕ್ಷಣ ದೊರೆಯಬೇಕೆಂಬುದು ಉದ್ದೇಶ. ಈ ಒಂದು ಕಾಯ್ದೆಯ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನುನೀಡುವುದು ಉದ್ದೇಶ. ಹಾಗಾದರೆ ಬನ್ನಿ ಇದಕ್ಕೆ ಅರ್ಜಿ ಸಲ್ಲಿಸಲು ಯಾರು ಯಾರರು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು.

ಆರ್ ಟಿ ಈ ಕಾಯ್ದೆಯಡಿಯಲ್ಲಿ ಪ್ರತಿಯೊಬ್ಬ 6 ರಿಂದ 14 ವರ್ಷದ ಮಗುವಿಗೆ ಕಡ್ಡಾಯವಾಗಿ ಸರ್ಕಾರದಿಂದ ಉಚಿತ ಶಿಕ್ಷಣ ದೊರೆಯುವುದು ಉದ್ದೇಶ. ಅದೇ ರೀತಿ ಖಾಸಗಿ ಸಂಸ್ಥೆಗಳಲ್ಲಿ ಬಡ ಮಕ್ಕಳಿಗೆ ಶೇಕಡ 25% ರಷ್ಟು ಸೀಟುಗಳನ್ನು ಮೀಸಲಿಡಬೇಕೆಂಬುದು ಸರ್ಕಾರದ ನಿಯಮ. ಇಂತಹ ಶಾಲೆಗಳಿಗೆ ಸರ್ಕಾರದಿಂದ ಅನುದಾನ ಕೂಡ ದೊರೆಯಲಿದ್ದು ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಪಡೆಯಲು ಸಹಾಯಕವಾಗಿದೆ.

ಉಚಿತ ಶಿಕ್ಷಣ ಪಡೆಯಲು ಯಾರು ಅರ್ಹರು?
ಸರ್ಕಾರದ ಆರ್ ಟಿ ಇ ಕಾಯ್ದೆಯ ಅಡಿಯಲ್ಲಿ ಉಚಿತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮುನ್ನ ಇದರ ಬಗ್ಗೆ ಮಾಹಿತಿ ಅಂತ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕರ್ನಾಟಕ ರಾಜ್ಯದಲ್ಲಿ ಖಾಯಂ ಪ್ರಜೆ ಮತ್ತು ನಿವಾಸಿ ಆಗಿರಬೇಕು.

ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಒಂದನೇ ತರಗತಿಗೆ ಮಾತ್ರ ಪ್ರವೇಶವಿದೆ. ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು 1.6.2016 ರಿಂದ 1.1.2018 ರ ಒಳಗಡೆ ಜನಿಸಿರಬೇಕು.
ವಿದ್ಯಾರ್ಥಿಗಳ ಕುಟುಂಬದ ಒಟ್ಟು ವಾರ್ಷಿಕ ಆದಾಯವು ಮೂರುವರೆ ಲಕ್ಷ ಒಳಗಿರಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸಮಾಜದ ಹಿಂದುಳಿದ ಮತ್ತು ದುರ್ಬಲ ವರ್ಗಗಳಿಗೆ ಸೇರಿದವರಾಗಿರಬೇಕು.
ಕುಟುಂಬದ ಒಟ್ಟು ವಾರ್ಷಿಕ ಆದಾಯ 3.5 ಲಕ್ಷ ಮೀರಬಾರದು.

ಆರ್ ಟಿ ಇ ತಾತ್ಕಾಲಿಕ ವೇಳಾಪಟ್ಟಿ : ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರವು ಈ ಶೈಕ್ಷಣಿಕ ವರ್ಷಕ್ಕಾಗಿ ವೇಳಪಟ್ಟಿಯನ್ನು ಈ ಕೆಳಗಿನಂತೆ ಹಾಕಿಕೊಂಡಿದೆ.

  • ಫೆ.7, 2024-25ನೇ ಸಾಲಿನ ಆರ್‌ಟಿಟಿ ಪ್ರವೇಶ ಪ್ರಕ್ರಿಯೆಗೆ ಮಾರ್ಗಸೂಚಿ ಪ್ರಕಟಣೆ.
  • ಫೆ.23: ಈ ಯೋಜನೆಯಡಿಯಲ್ಲಿ ಖಾಸಗಿ ಶಾಲೆಗಳ ತಾತ್ಕಾಲಿಕ ಪಟ್ಟಿ ಪ್ರಕಟಣೆ.
  • ಫೆ.28 : ನೆರೆಹೊರೆಯಲ್ಲಿರುವ ಶಾಲೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸುವವರಿಗೆ ಕೊನೆಯ ದಿನಾಂಕ
  • ಮಾ.4 : ಶೇ.25 ಸೀಟುಗಳು ಲಭ್ಯವಿರುವ ಶಾಲೆಗಳ ಪಟ್ಟಿಯ ಹೆಸರುಗಳನ್ನೂ ಜಿಲ್ಲೆಯ ಅಧಿಕೃತ ವೆಬ್‌ಸೈಟ್ ಮತ್ತು ಕಚೇರಿyab ಸೂಚನಾ ಪಲಕದಲ್ಲಿ ಪ್ರಕಟಣೆ.
  • ಮಾ.20, ಹಾಗೂ 21 : ಅರ್ಜಿ ಸಲ್ಲಿಸಲು ಆರಂಭ.
  • ಮಾ.22 – ಏಪ್ರಿಲ್ 22 ವರೆಗೆ : ಅರ್ಜಿ ಸಲ್ಲಿಕೆಗೆ ಅವಕಾಶ,
  • ಏ.30 : ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು : ಇಲಾಖೆಯ ನಿಗದಿಪಡಿಸಿದ ದಿನಾಂಕಕ್ಕೆ ಅಭ್ಯರ್ಥಿಗಳು ಲಿಂಕ್ ಮುಖಾಂತರ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Apply online : https://www.schooleducation.kar.nic.in/

Leave a Comment