ರಾಜ್ಯದ ರೈತರು ಕರ್ನಾಟಕ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳನ್ನು ಪಡೆಯಲು ಈ ಕೆಳಗಿನ ಒಂದು ಅಂಶವನ್ನು ಮಾಡಿರುವುದು ಕಡ್ಡಾಯವಾಗಿರುತ್ತದೆ.
ರಾಜ್ಯದ ಪ್ರತಿಯೊಬ್ಬರು ಇನ್ನು ಮುಂದೆ ಕರ್ನಾಟಕ ರಾಜ್ಯದ ಹಾಗೂ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಲಾಭ ಪಡೆಯಲು ಅತಿ ಮುಖ್ಯವಾಗಿ ಮಾಡಬೇಕಾಗಿರುವುದು ಆಧಾರ್ ಕಾರ್ಡ್ ಮತ್ತು ಆರ್ ಟಿ ಸಿ ಯನ್ನು ಲಿಂಕ್ ಮಾಡುವುದು.
ಇಲ್ಲಿಯವರೆಗೂ ಯಾರು ತಮ್ಮ ಆರ್ ಟಿ ಸಿ ಗಳಿಗೆ ಆಧಾರ್ ಲಿಂಕ್ ಮಾಡಿಲ್ಲ ಅಂತವರು ಈ ಲೇಖನವನ್ನು ಓದಿರಿ.
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ಹಾಗೂ ಸ್ನೇಹಿತರೆ ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ದಿನನಿತ್ಯ ಕರ್ನಾಟಕ ಸರ್ಕಾರ ಯೋಜನೆಗಳಿಗೆ ಸಂಬಂಧಿಸಿದಂತಹ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದು ಇವತ್ತಿನ ಈ ಒಂದು ಅಂಕಣದಲ್ಲಿ ನಾವು ರಾಜ್ಯದ ರೈತರು ಕರ್ನಾಟಕ ಸರ್ಕಾರ ಯೋಜನೆಗಳ ಲಾಭವನ್ನು ಪಡೆಯಲು ಮತ್ತು ಕೇಂದ್ರ ಸರ್ಕಾರ ಯೋಜನೆಗಳ ಹಲವಾರು ಲಾಭವನ್ನು ಪಡೆಯಲು ಅತಿ ಮುಖ್ಯವಾಗಿ ಬೇಕಾಗಿರುವಂತಹ ಆರ್ ಟಿ ಸಿ ಆಧಾರ್ ಲಿಂಕ್ ಮಾಡಿಕೊಳ್ಳಲು ಸರ್ಕಾರವು ಸೂಚನೆ ನೀಡಲಾಗಿದ್ದು ಇದನ್ನು ಹೇಗೆ ಮಾಡಿಕೊಳ್ಳುವುದು ಎಂಬ ಮಾಹಿತಿಯನ್ನು ಇವತ್ತಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ.
ಹೌದು ಸ್ನೇಹಿತರೆ ದೇಶದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಸರ್ಕಾರವು ಈ ಒಂದು ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದ್ದು ರೈತರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು RTC Adhar Link ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಇದನ್ನು ಆನ್ಲೈನ್ ಮುಖಾಂತರವೇ ಮಾಡಿಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ನಾವು ಇವತ್ತಿನ ಈ ಲೆಕ್ಕದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಿದ್ದೇವೆ.
RTC Adhar Link
ಇದನ್ನು ಮಾಡಿಕೊಳ್ಳಲು ಅಭ್ಯರ್ಥಿಗಳು ಅಥವಾ ರೈತರು ಮೊದಲು ಭೂಮಿ ನಾಗರಿಕ ಸೇವೆಗಳು ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
ಇದರ ಒಂದು ಅಧಿಕೃತ ಲಿಂಕನ್ನು ನಾವು ಲೇಖನದ ಕೊನೆಯ ಒಂದು ಭಾಗದಲ್ಲಿ ನೀಡಲಾಗಿದ್ದು ಅಭ್ಯರ್ಥಿಗಳು ಕೊನೆಯವರೆಗೂ ಓದಬೇಕು.
ನಂತರದಲ್ಲಿ ಆಧಾರ್ ಗೆ ಲಿಂಕ್ ಇರುವ ನಿಮ್ಮ ಮೊಬೈಲ್ ನಂಬರನ್ನು ಅಲ್ಲಿ ಎಂಟರ್ ಮಾಡಿ ಕ್ಯಾಪ್ಚಾ ಕೊಡನ್ನು ನಮೂದಿಸಿ ಮುಂದುವರೆಯಬೇಕು.
ನೊಂದಾಯ್ತ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಮೊಬೈಲ್ ನಂಬರ್ ಗೆ ಬರುವಂತಹ ಓಟಿಪಿಯನ್ನು ಅಲ್ಲಿ ನಮೂದಿಸಿ ಲಾಗಿನ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಒಮ್ಮೆ ನೀವು ಲಾಗಿನ್ ಆದ ನಂತರ ಜಾಲತಾಣದಲ್ಲಿ ನೀಡಿರುವ ಆಧಾರ್ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ ಮುಂದುವರೆಯಬೇಕು ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಹೆಸರನ್ನು ಮತ್ತು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ” ನಾನು ಇಲ್ಲಿ ಸ್ವಯಂ ಪ್ರೇರಣೆಯಿಂದ ಆಧಾರ್ ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ ” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ವೇರಿಫೈ ಮಾಡಿ ಅದರ ಕೆಳಗೆ ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರು ತಮ್ಮ ಆರ್ ಟಿ ಸಿ ಗೆ ಆಧಾರ್ ಲಿಂಕ್ ಮಾಡಬಹುದು.
ಇದೇ ರೀತಿ ದಿನನಿತ್ಯ ಇಂತಹ ಉಪಯುಕ್ತ ಮಾಹಿತಿ ಹಾಗೂ ಪ್ರಮುಖ ಯೋಜನೆಗಳು ಹಾಗೂ ಉದ್ಯೋಗಗಳ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಜಾಲತಾಣಕ್ಕೆ ದಿನನಿತ್ಯ ಭೇಟಿ ನೀಡುತ್ತಿರಿ ಮತ್ತು ನಮ್ಮ ವ್ಯಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿ.
RTC Adhar Link – https://landrecords.karnataka.gov.in/service4/