ಹೊಸ ರೇಷನ್ ಕಾರ್ಡ್ ಸ್ಟೇಟಸ್ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಿ..! ಇಲ್ಲಿದೆ ಸಂಪೂರ್ಣ ಮಾಹಿತಿ..!

 ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಹೊಸ ರೇಷನ್ ಕಾರ್ಡ್ ಸ್ಟೇಟಸ್ ಹೇಗೆ ಚೆಕ್ ಮಾಡಬೇಕು ಎಂದು ಅಧಿಕೃತವಾಗಿ ತಿಳಿಸಿದ್ದೇನೆ.

 ನೀವು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದೀರಾ ಇನ್ನುವರಿಗೂ ನಿಮ್ಮ ರೇಷನ್ ಕಾರ್ಡ್ ಬಂದಿಲ್ಲವೇ ಹಾಗಿದ್ದರೆ ನಿಮಗಿಲ್ಲಿದೆ ಒಂದು ಸುವರ್ಣ ಅವಕಾಶ ಕೊಡಬಹುದು.

 ನೀವಿಲ್ಲಿ ಹೊಸ ರೇಷನ್ ಕಾರ್ಡ್ ಸ್ಟೇಟಸ್ ನೋಡಬಹುದು ಈ ಕೆಳಗಡೆ ಸಂಪೂರ್ಣ ಮಾಹಿತಿ ಕೊನೆವರೆಗೂ ಓದಿ.

 ಹೊಸ ರೇಷನ್ ಕಾರ್ಡ್ ಸ್ಟೇಟಸ್ ಮೊಬೈಲ್ ಮೂಲಕ ಹೇಗೆ ನೋಡುವುದು..?

https://ahara.kar.nic.in/lpg/

 ಮೊದಲಿಗೆ ಈ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮಗೆ ರೇಷನ್ ಕಾರ್ಡ್ ಸ್ಟೇಟಸ್ ಮೊಡ್ಯೂಲ್ ಅಂತ ಕಾಣುತ್ತೆ ಇದರ ಅಡಿಯಲ್ಲಿ ಕೇಸರಿ ಅಕ್ಷರನಲ್ಲಿ  ಜಿಲ್ಲೆಯ ಹೆಸರು ಇರುತ್ತೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

 ನಂತರ ಇಲ್ಲೇ ಒಂದು ಹೊಸಪುಟ ತೆರೆದುಕೊಳ್ಳುತ್ತದೆ ಅಪ್ಲಿಕೇಶನ್ ಸ್ಟೇಟಸ್  ಆಫ್ ನ್ಯೂ ರೇಷನ್ ಕಾರ್ಡ್ ಅಪ್ಲೈ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.

 ನಿಮಗೆ ನೀಡಿದ ಇಬ್ಬರಹ ಸಂಖ್ಯೆಯನ್ನು ನಮೂದಿಸಿ  ಇಲ್ಲಿ acknowledgement ನಂಬರ್   ಇಲ್ಲಿ ತಪ್ಪದೇ ನಮೂದಿಸಿ ಎಂಟರ್ ಮಾಡಿ.

 ನಂತರ ನೀವಿಲ್ಲಿ  ಗ್ರಾಮೀಣ ಪ್ರದೇಶವಾರಾಗಿದ್ದರೆ  ರೂರಲ್ ಅಂತ ಕ್ಲಿಕ್ ಮಾಡಿ  acknowledgement number ಎಂಟ್ರಿ ಮಾಡಿದ ಮೇಲೆ ನಿಮ್ಮ ಜಿಲ್ಲೆ ಮತ್ತು  ಮತ್ತು ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ ನಂತರ  ಹೆಸರು ಆಯ್ಕೆ ಮಾಡಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ.

  ಸೆಕೆಂಡ್ ಗಳಲ್ಲಿ  ನಿಮ್ಮ ಕಣ್ಣೆದುರಿಗೆ ಹೊಸ ರೇಷನ್ ಕಾರ್ಡ್ ಸ್ಥಿತಿ    ಕಾಣಬಹುದು.

Leave a Comment