ಸ್ವಯಂ ಉದ್ಯೋಗ ಮಾಡುವವರಿಗೆ ಸರಕಾರದಿಂದ ಭರ್ಜರಿ 15 ಲಕ್ಷ ರೂಪಾಯಿಯವರೆಗೆ ಶೇ. 50ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನ |

ಸ್ವಯಂ ಉದ್ಯೋಗ ಮಾಡುವವರಿಗೆ ಸರಕಾರದಿಂದ ಭರ್ಜರಿ 15 ಲಕ್ಷ ರೂಪಾಯಿಯವರೆಗೆ ಶೇ. 50ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನ |

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಯುವಕರು ಸ್ವಯಂ ಉದ್ಯೋಗ ಆರಂಭಿಸಲು ಸರ್ಕಾರದಿಂದ ಲಭ್ಯವಿರುವ ಸಹಾಯಧನ ಮತ್ತು ಸಾಲ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಸಲಿದ್ದೇವೆ.

ರಾಜ್ಯದ್ಯಂತ ಕೋವಿಡ್ ಅಪ್ಪಳಿಸಿದ ನಂತರ ಜನರು ಮತ್ತು ಯುವ ಜನರು ಉದ್ಯೋಗವಿಲ್ಲದೆ ಇತ್ತೀಚಿಗೆ ಸ್ವಯಂ ಉದ್ಯೋಗದ ಕಡೆಗೆ ಕೈ ಹಾಕುತ್ತಿದ್ದಾರೆ. ಅನೇಕ ಯುವಜನರಿಗೆ ಉದ್ಯೋಗ ಮಾಡುವ ಎಲ್ಲಾ ಲಕ್ಷಣಗಳಿದ್ದರೂ ಕೂಡ ಅವರಿಗೆ ಆರ್ಥಿಕ ಸಮಸ್ಯೆಯಿಂದ ಸ್ವಯಂ ಉದ್ಯೋಗವನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಜನರಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಯಾವುದು ಈ ಯೋಜನೆ?
15 lakh loan facility with subsidy : ಕೇಂದ್ರ ಸರ್ಕಾರದಿಂದ ಲಭ್ಯವಿರುವ ಈ ಯೋಜನೆಯ ಹೆಸರೇ
Pradhan Mantri Formalisation of Micro food processing Enterprises. ಈ ಯೋಜನೆಯಡಿಯಲ್ಲಿ ಯುವ ಜನರಿಗೆ ಸ್ವಯಂ ಉದ್ಯೋಗ ಆರಂಭಿಸಲು ಅತೀ ಮುಖ್ಯವಾಗಿ ಬೇಕಾಗಿರುವ ಆರ್ಥಿಕ ಸಹಾಯವನ್ನು ಸರ್ಕಾರ ಒದಗಿಸಲಿದೆ. ಈ ಯೋಜನೆಯ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಾಲ ಸೌಲಭ್ಯದ ಜೊತೆಗೆ 50% ಸಹಾಯಧನವನ್ನು ಕೂಡ ನೀಡುತ್ತಿದೆ.

ಈ ಯೋಜನೆಯ ಅಡಿಯಲ್ಲಿ ಯಾವ ಯಾವ ಉದ್ಯೋಮವನ್ನು ಆರಂಭಿಸಬಹುದು?
ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಸ್ವಯಂ ಉದ್ಯೋಗವನ್ನು ಈ ಕೆಳಗಿನ ವಿಭಾಗಗಳಲ್ಲಿ ಉದ್ಯಮವನ್ನು ಆರಂಭಿಸಬಹುದಾಗಿದೆ.
ಅಡಿಕೆ ಬೇಸಾಯಕ್ಕೆ ಸಂಬಂಧಿಸಿದ ಹಸಿ ಮತ್ತು ಒಣ ಅಡಿಕೆ ಸುಲಿಯುವ ಯಂತ್ರವನ್ನು ಖರೀದಿ ಮಾಡಬಹುದು, ಅಡಿಕೆ ಬೇಯಿಸುವಂತಹ ಪಾತ್ರೆಯನ್ನು ಖರೀದಿ ಮಾಡಬಹುದು, ಅಡಿಕೆ ಗೊನೆಯನ್ನು ಬಿಡಿಸುವ ಯಂತ್ರ ಖರೀದಿ ಮಾಡಬಹುದು, ಒಣಗಿಸುವ ಯಂತ್ರ ಸೇರಿದಂತೆ ತಕ್ಕಡಿ ಹಾಗೂ ಇತ್ಯಾದಿ ಯಂತ್ರಗಳನ್ನು ಖರೀದಿಸಿ ಸರ್ಕಾರದಿಂದ ಸಾಲ ಮತ್ತು ಸಹಾಯಧನದ ಸೌಲಭ್ಯವನ್ನು ಪಡೆಯಬಹುದಾಗಿದೆ.

ಅಡಿಕೆಯನ್ನು ಹೊರತುಪಡಿಸಿ ಕಾಳು ಮೆಣಸು ಬೇಸಾಯಕ್ಕೆ ಸಂಬಂಧಿಸಿದಂತೆ ಕಾಳು ಮೆಣಸನ್ನು ಬೇರ್ಪಡಿಸುವ ಯಂತ್ರ, ಸ್ಪೈರಲ್ ಕ್ಲೀನರ್, ಬೋಳುಕಾಳನ್ನು ಮಾಡುವ ಯಂತ್ರ ಖರೀದಿ ಮಾಡಬಹುದು, ಅಳತೆಯ ಪ್ರಕಾರ ಕಾಳುಮೆಣಸನ್ನು ಬೇರ್ಪಡಿಸುವ ಗ್ರೇಡಿಂಗ ಯಂತ್ರ ಖರೀದಿಗೂ ಕೂಡ ಸಾಲ ಮತ್ತು ಸಹಾಯಧನದ ಸೌಲಭ್ಯ ಪಡೆಯಬಹುದಾಗಿದೆ.

ಬಾಳೆ ಬೇಸಾಯಕ್ಕೆ ಸಂಬಂಧಿಸಿದಂತೆ ಚಿಪ್ಸ್ ತಯಾರಿಸುವ ಯಂತ್ರ ಖರೀದಿ ಮಾಡಬಹುದು, ಹಪ್ಪಳ ತಯಾರಿಸುವ ಮಾಡುವ ಯಂತ್ರ ಖರೀದಿಸಬಹುದು, ಸುಕ್ಕೇಳಿ ತಯಾರಿಸುವ ಯಂತ್ರ, ಹಿಟ್ಟು ತಯಾರಿಸುವ ಯಂತ್ರ ಖರೀದಿಗೂ ಕೂಡ ಸಾಲ ಮತ್ತು ಸಹಾಯದನದ ಸೌಲಭ್ಯ ನೀಡಲಾಗುತ್ತದೆ. ಇವುಗಳನ್ನು ಹೊರತುಪಡಿಸಿ ತೆಂಗಿನಕಾಯಿ ಬೇಸಾಯಕ್ಕೆ ಸಂಬಂಧಿಸಿದಂತೆ ಎಣ್ಣೆ ತಯಾರಿಸುವ ಯಂತ್ರ, ಹಾಗೂ ಅರಿಶಿನ ಸೇರಿದಂತೆ ಇನ್ನೂ ಹಲವಾರು ಕೃಷಿಗಳಿಗೆ ಸಂಬಂಧಿಸಿದಂತೆ ನೀವು ಸ್ವಯಂ ಉದ್ಯಮವನ್ನು ಆರಂಭಿಸಲು ಸಾಲ ಮತ್ತು ಸಹಾಯದಿಂದ ಸೌಲಭ್ಯ ಪಡೆಯಬಹುದಾಗಿರುತ್ತದೆ.

ಇವುಗಳನ್ನು ಹೊರತುಪಡಿಸಿ ಪಶು ಆಹಾರ ತಯಾರಿಕೆ ಘಟಕ, ಹಸಿ ಮೇವು ತಯಾರಿಕೆ ಘಟಕ ಸೈಲೇಜ್, ಟೊಮೆಟೋ ಸಾಸ್ ಮಾಡುವ ಯಂತ್ರ ಖರೀದಿ, ಕೆಚಪ್ ಮಾಡುವ ಯಂತ್ರ, ಜ್ಯಾಮ್ ಜೆಲ್ಲಿ ಸೇರಿದಂತೆ ಇನ್ನೂ ಹಲವಾರು ಉತ್ಪನ್ನಗಳನ್ನು ತಯಾರಿಸಲು ಬೇಕಾಗಿರುವಂತಹ ಯಂತ್ರಗಳನ್ನು ಖರೀದಿ ಮಾಡಿ ನೀವು ಸ್ವಯಂ ಉದ್ಯೋಗವನ್ನು ಆರಂಭಿಸಲು ಕೇಂದ್ರ ಸರ್ಕಾರವು Pradhan Mantri Formalisation of Micro food processing Enterprises ಯೋಜನೆಯಡಿಯಲ್ಲಿ ಅರ್ಹ ಪಲಾನುಭವಿಗಳಿಗೆ 15 ಲಕ್ಷ ರೂಪಾಯಿಯವರೆಗಿನ ಸಾಲ ಮತ್ತು ಅದರಲ್ಲಿ ಶೇಕಡ 50ರಷ್ಟು ಸಹಾಯಧನವನ್ನು ಕೂಡ ಒದಗಿಸಲಿದೆ.

link : https://pmfme.mofpi.gov.in/pmfme/#/Home-Page

Loan and subsidy facility by central government

Leave a Comment