ಬಡವರಿಗೆ ಸ್ವಂತ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ ಯೋಜನೆ! ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕೋಟಿ ಮನೆ ನಿರ್ಮಾಣ |
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜಾಲತಾಣದಲ್ಲೇ ನಾವು ಪ್ರತಿನಿತ್ಯ ಬಡವರಿಗೆ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಸ್ವಂತ ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ ಲಭ್ಯವಿರುವ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ. ಪ್ರತಿಯೊಬ್ಬರು ಈ ಯೋಜನೆಯ ಬಗ್ಗೆ ತಿಳಿದುಕೊಂಡು ಇದರ ಲಾಭ ಪಡೆದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ.
ಪ್ರತಿಯೊಬ್ಬ ವ್ಯಕ್ತಿಯ ಜೀವದ ಅತಿ ಮುಖ್ಯ ಆಸೆ ಎಂದರೆ ಅದು ಸ್ವಂತ ಮನೆ ಕಟ್ಟಿಸಿಕೊಳ್ಳುವುದು. ಆದರೆ ಅನೇಕ ಬಡ ಕುಟುಂಬದವರಿಗೆ ಆರ್ಥಿಕ ಸಮಸ್ಯೆಯಿಂದ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಬಡ ಜನರಿಗೆ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಲು ಸಹಾಯವಾಗುವಂತೆ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿತ್ತು.
ಈ ಒಂದು ಉದ್ದೇಶವನ್ನು ಇಟ್ಟುಕೊಂಡು 2015ರಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿತ್ತು ಹಾಗೂ ಈ ಯೋಜನೆಯ ಅಡಿಯಲ್ಲಿ ಯೋಜನೆಯ ಜಾರಿಗೆ ಆದ ನಂತರ 7 ಕೋಟಿ ಮನೆಗಳು ಈಗಾಗಲೇ ನಿರ್ಮಾಣ ಮಾಡಲಾಗಿದೆ. ಈ ಒಂದು ಯೋಜನೆಯ ಜಾರಿಯಿಂದ ಭಾರತ ದೇಶವು ಅಭಿವೃದ್ಧಿ ದೇಶವೆಂದು ಶೀಘ್ರದಲ್ಲಿ ಬದಲಾಗಲಿದೆ. ಈ ಒಂದು ಯೋಜನೆಯ ಲಾಭ ಪಡೆದುಕೊಳ್ಳಲು ಏನು ಮಾಡಬೇಕೆಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಕ್ರೆಡಿಟ್ ಲಿಂಕ್ ಸಬ್ಸಿಡಿ ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 2,67,000 ರೂಪಾಯಿ ಯನ್ನು ಸಬ್ಸಿಡಿ ಸರ್ಕಾರ ನೀಡುತ್ತಿದ್ದು, ಈ ಒಂದು ಹಣವನ್ನು ನೀವು ಯಾವ ಬ್ಯಾಂಕಿನಲ್ಲಿ ಮನೆ ಕಟ್ಟಲು ಹೋಂ ಲೋನ್ ತೆಗೆದುಕೊಳ್ಳುತ್ತಿರೋ ಆ ಬ್ಯಾಂಕಿಗೆ ನೇರವಾಗಿ ಸರ್ಕಾರವು ಹಣ ಜಮಾ ಮಾಡುತ್ತದೆ. ಅದೇ ರೀತಿ ಈ ಯೋಜನೆ ಅಡಿಯಲ್ಲಿ ಭಾರತ ದೇಶದಲ್ಲಿ ಈಗಾಗಲೇ 7 ಕೋಟಿ ಮನೆಗಳ ನಿರ್ಮಾಣಗೊಂಡಿದ್ದು ಇದು ಭಾರತ ದೇಶದ ಸಾಧನೆಯಾಗಿದೆ.
ಈ ಯೋಜನೆಯನ್ನು ಇನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸಚಿವೆಯರಾದ ನಿರ್ಮಲ ಸೀತಾರಾಮನ್ ಅವರು ಫೆಬ್ರುವರಿ ಒಂದು 2024 ರಂದು ನಡೆದ ಮಧ್ಯಂತರ ಬಜೆಟ್ ನಲ್ಲಿ ಇದರ ಬಗ್ಗೆ ಹೇಳಿಕೆ ಘೋಷಣೆ ಮಾಡಿದ್ದು ಮುಂಬರುವ ಐದು ವರ್ಷಗಳಲ್ಲಿ ಇನ್ನೂ ಹೆಚ್ಚುವರಿ ಎರಡು ಕೋಟಿ ಮನೆಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತಿದ್ದೇವೆ ಎಂದು ಅದೇ ರೀತಿ ಇದರ ಬಗ್ಗೆ ಸರ್ಕಾರವು ನಿರ್ಧರಿಸಿದೆ ಎಂದು ಮಧ್ಯಂತರ ಬಜೆಟ್ ನಲ್ಲಿ ಸಚಿವೆ ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದರು.
ಒಂದು ವೇಳೆ ನೀವು ಈ ಒಂದು ಯೋಜನೆಯ ಅಡಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.67 ಲಕ್ಷ ರೂಪಾಯಿ ಸಬ್ಸಿಡಿ ಯನ್ನು ಪಡೆಯಬೇಕು ಎಂದಾದರೆ ನೀವು ಈ ಯೋಜನೆಗೆ ಅರ್ಜಿ ಹಾಕಬೇಕು. ಈ ಯೋಜನೆಗೆ ಅರ್ಜಿ ಯಾವಾಗ ಹಾಕಬೇಕು ಎಂದರೆ ನೀವು ಹೋಂ ಲೋನ್ ಪಡೆದುಕೊಂಡ ಒಂದು ವರ್ಷಗಳ ಒಳಗಾಗಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಎರಡಕ್ಕಿಂತ ಹೆಚ್ಚು ವರ್ಷ ಬಿಟ್ಟು ನೀವು ಅರ್ಜಿ ಸಲ್ಲಿಸಿದರೆ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್ ನಲ್ಲಿ ಹೋಂ ಲೋನ್ ಪಡೆದ ನಂತರ ನೀವು ಅದನ್ನು ಮರುಪಾವತಿ ಮಾಡಲು ಅವಧಿ 20 ವರ್ಷಗಳಿರುತ್ತವೆ. ಈ ಒಂದು ಅವಧಿಯು ನೀವು ಎಷ್ಟು ಹಣ ತೆಗೆದುಕೊಂಡಿರುತ್ತೀರಿ ಮತ್ತು ಯಾವ ವಯಸ್ಸಿನಲ್ಲಿ ಹಣ ತೆಗೆದುಕೊಂಡಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವವರು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಗ್ರಾಹಕರ ಸೇವ ಕೇಂದ್ರ ಅಥವಾ ಗ್ರಾಮೀಣ ಸೆಂಟರ್ ಗಳಿಗೆ ಭೇಟಿ ನೀಡಿ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳು :
• ಆಧಾರ್ ಕಾರ್ಡ್
• ಪಾನ್ ಕಾರ್ಡ್
• ಆದಾಯ ಪ್ರಮಾಣ ಪತ್ರ
• ವಿಳಾಸದ ಪ್ರಮಾಣ ಪತ್ರ