ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಇಂಥವರು ಮಾತ್ರ ಅರ್ಹರು..! ಸರ್ಕಾರದ ಹೊಸ ರೂಲ್ಸ್..! ಇಲ್ಲಿದೆ ಸಂಪೂರ್ಣ ವಿವರ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಕಾಂಗ್ರೆಸ್ ಸರ್ಕಾರವು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಏಪ್ರಿಲ್ ಒಂದು 2024 ರಿಂದ ಜನತೆ ಎಲ್ಲರೂ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು ಎಂದು ಅಧಿಕೃತ ಆದೇಶ ಹೊರಡಿಸಿದೆ.

ಆದರೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬೇಕಾದರೆ ಕೆಲವೊಂದಿಷ್ಟು ಹೊಸ ರೂಲ್ಸ್ ಹಾಕಿದೆ ಹಾಗಾದರೆ ಯಾವುದು ಆ ಹೊಸ ರೂಲ್ಸ್ ಬನ್ನಿ ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ.

ಹೌದು ನಮಗೂ ಕೂಡ ಹೊಸ ರೇಷನ್ ಕಾರ್ಡ್ ಬೇಕು ಎಂದು ಜನರು ಕಚೇರಿ ಅಲೆದು ಹೊಲೆದು ಸುಸ್ತಾಗಿದ್ದಾರೆ ಸರ್ಕಾರ ಏಪ್ರಿಲ್ ಒಂದು 2024 ರಿಂದ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ನೀವು ಅರ್ಜಿ ಸಲ್ಲಿಸಬಹುದು ಎಂದು ಅಧಿಕೃತ ಆದೇಶ ಹೊರಡಿಸಿದೆ.

ಆದರೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಕೆಲವೊಂದಿಷ್ಟು ಹೊಸ ರೂಲ್ಸ್ ಗಳನ್ನ ಹಾಕಿದೆ ಈ ರೂಲ್ಸ್ ಈ ಕೆಳಕಂಡಂತಿದೆ.

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು  ಇರಬೇಕಾಗಿರುವ ಅರ್ಹತೆಗಳೇನು..?

(ಸರ್ಕಾರದ ಹೊಸ ರೂಲ್ಸ್ ರೇಷನ್ ಕಾರ್ಡ್ ಪಡೆದುಕೊಳ್ಳಲು)

  •  ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
  • ಬಡತನ ರೇಖೆಗಿಂತ ಕೆಳಗಿರುವ ಜನಗಳಿಗೆ ಬಿಪಿಎಲ್ ನೀಡಬೇಕು ಅಥವಾ ಏಪ್ರಿಲ್ ಇಡಬೇಕು ಎಂದು ತೀರ್ಮಾನ ಮಾಡಿ ಸರ್ಕಾರದವರು ರೇಷನ್ ಕಾರ್ಡ್ ನೀಡುತ್ತಾರೆ.
  • ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ರೂಪಾಯಿ ಒಳಗಡೆ ಇರಬೇಕು. 
  • ಹೊಸದಾಗಿ ಮದುವೆಯಾಗಿರುವಂತಹ ಜೋಡಿಗಳಿಗೆ ಪ್ರತ್ಯಕ್ಕ ಮನೆಯಲ್ಲಿ ವಾಸಿಸುವಂತಿದ್ದರೆ ಇವರು ಕೂಡ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
  • ಒಂದು ವೇಳೆ ಮೊದಲೇ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ನೀವು ಅರ್ಹರಲ್ಲ.
  • ಸರ್ಕಾರಿ ನೌಕರಿ ಇಲ್ಲವೇ ತೆರಿಗೆ ನೀಡುವಂತಿದ್ದರೆ ನೀವು ಕೂಡ ಅರ್ಹರಲ್ಲ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೆನು..?

  • ಕುಟುಂಬದ ಪ್ರತಿ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ದಾಖಲೆ.
  • ಜಾತಿ ಆದಾಯ ಪ್ರಮಾಣ ಪತ್ರ ಯಾರ ಹೆಸರಲ್ಲಿ ರೇಷನ್ ಕಾರ್ಡ್ ಮಾಡುತ್ತಿದ್ದೀರೋ ಅವರದು ತಪ್ಪದೇ ಬೇಕಾಗುತ್ತದೆ.
  • ವಿಳಾಸದ ಪುರಾವೆ ಹಾಗೂ ಜಾತಿ ಆದಾಯದ ಪ್ರಮಾಣ ಪತ್ರ.
  • ಅರ್ಜಿ ಸಲ್ಲಿಸಲು ಕರ್ನಾಟಕ ಒನ್, ಗ್ರಾಮ, ಬೆಂಗಳೂರು ಒನ್ , ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಹೋಗಬೇಕು.

Leave a Comment