ನಮಸ್ಕಾರ ಸ್ನೇಹಿತರೆ
ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಕುರಿತಾಗಿ.
ಹೌದು, ನೀವು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಚಲಿಸಬೇಕು ಎಂದಾದರೆ ನಿಮಗಾಗಿ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಈ ಮಾಹಿತಿಯಂತೆ ನೀವು ಮಾಡಿದ್ದೆಯಾದಲ್ಲಿ ನೀವು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
- ನಿಮ್ಮ ವಾರ್ಷಿಕ ಆದಾಯ ಒಂದು ಲಕ್ಷ ಒಳಗಡೆ ಇರಬೇಕಾಗುತ್ತೆ
- ಸರಕಾರಕ್ಕೆ ಯಾವುದೇ ತರಹದ ತೆರಿಗೆಯನ್ನು ಭಾವಿಸಬಾರದು
- ಮನೆಯಲ್ಲಿ ಯಾರೂ ಸಹ ಸರ್ಕಾರಿ ನೌಕರಿಯಲ್ಲಿ ಇರಬಾರದು.
- ನಾಲ್ಕು ಚಕ್ರ ವಾಹನಗಳನ್ನು ಹೊಂದಿರಬಾರದು ಒಂದು ವೇಳೆ ಹೊಟ್ಟೆಪಾಡಿಗೋಸ್ಕರ ಗೂಡ್ಸ್ ಗಾಡಿಗಳಾಗಲಿ ಅಥವಾ ಹಳದಿ ನಂಬರ್ ಪ್ಲೇಟ್ ವಾಹನ ಇದ್ದರೆ ನಡೆಯುತ್ತೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳನ್ನು..?
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್
- ಜಾತಿ ಆದಾಯ ಪ್ರಮಾಣ ಪತ್ರ ಪ್ರತಿಯೊಬ್ಬರಿಗೂ
- ಕುಟುಂಬದ ಎಲ್ಲ ಸದಸ್ಯರ ಇತ್ತೀಚಿನ ಫೋಟೋ.
- ಒಂದು ವೇಳೆ ನಿಮ್ಮ ಮನೆಯಲ್ಲಿ 5 ವರ್ಷಕ್ಕಿಂತ ಚಿಕ್ಕಮಗುವಿದ್ದರೆ ಮಗುವಿನ ಜನನ ಪ್ರಮಾಣ ಪತ್ರ ಬೇಕಾಗುತ್ತದೆ.
ಹೊಸ ರೇಷನ್ ಕಾರ್ಡಿಗೆ ಹೇಗೆ ಅರ್ಜಿ ಸಲ್ಲಿಸಬೇಕು.?
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಾದರೆ ಹತ್ತಿರ ಇರುವಂತಹ ಸೇವಾ ಕೇಂದ್ರಗಳಿಗೆ ಹೋಗಿ ದಯವಿಟ್ಟು ಕೇಳಿ ಹೊಸ ರೇಷನ್ ಕಾರ್ಡ್ ಗಳಿಗೆ ಯಾವಾಗಿನಿಂದ ಅರ್ಜಿ ಪ್ರಾರಂಭವಾಗುತ್ತೆ ಎಂದು ಅವರಿಗೆ ಕೇಳಿದ್ದೆ ಆದಲ್ಲಿ ಅವರು ನಿರ್ದಿಷ್ಟವಾಗಿ ಈ ದಿನಾಂಕ ಅಂತ ಒಂದು ದಿನಾಂಕ ನೀಡುತ್ತಾರೆ ಆ ದಿನಾಂಕಕ್ಕೆ ಹೋಗಿ ನೀವು ಅರ್ಜಿ ಸಲ್ಲಿಸಬಹುದು.
- ನೋಡಿ ತಿಂಗಳಿನಲ್ಲಿ ಕೇವಲ ಒಂದರಿಂದ ನಾಲ್ಕು ತಾಸಾಗಿರಬಹುದು ಅಥವಾ ಮೂರು ತಾಸು ಅಥವಾ 24 ಗಂಟೆಗಳವರೆಗೆ ಕೇವಲ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ಇರುತ್ತೆ ಹೀಗಾಗಿ ನೀವು ಸೇವಾ ಕೇಂದ್ರಗಳಲ್ಲಿ ಒದಗಿಸಿರುವ ದಿನಾಂಕಕ್ಕೆ ಹೋಗಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಕು.
- ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿದ್ದೆಯಾದಲ್ಲಿ ಎರಡು ತಿಂಗಳ ಒಳಗಾಗಿ ನಿಮಗೆ ರೇಷನ್ ಕಾರ್ಡ್ ಬರುತ್ತೆ ಸೆಪ್ಟಂಬರ್ ತಿಂಗಳಿನಲ್ಲಿ ಅಗಸ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದವರ ಹೊಸ ರೇಷನ್ ಕಾರ್ಡ್ ಗಳು ಬಂದಿದೆ.