ಕನ್ನಡ ಮಾತನಾಡಲು ಬರುವವರಿಗೆ ಮಂಗಳೂರಿನಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ | ಆಯ್ಕೆಯಾದವರಿಗೆ ಪ್ರತಿ ತಿಂಗಳು 28,950 ರೂ. ಸಂಬಳ

ಎಲ್ಲರಿಗೂ ನಮಸ್ಕಾರ ಬಂಧುಗಳೇ,

ಈ ಒಂದು ಲೇಖನದಲ್ಲಿ ಮಂಗಳೂರು ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನ ಆಹ್ವಾನಿಸಿದ್ದಾರೆ. ಅರ್ಜಿ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳು ಈ ಕೂಡಲೇ ನೀವು ಎಲ್ಲಾ ಅರ್ಹತೆಯನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಕೂಡ ಸಧುಪಯೋಗಪಡಿಸಿಕೊಳ್ಳಿ.

ಮಂಗಳೂರು ಮಹಾನಗರಪಾಲಿಕೆಗೆ 134 ಸಂಖ್ಯಾತಿರಿಕ್ತ (supernumerary Posts) ಪೌರಕಾರ್ಮಿಕ ಹುದ್ದೆಗಳನ್ನು ಸೃಜಿಸಿದ್ದು, ಮಂಗಳೂರು ಮಹಾನಗರಪಾಲಿಕೆಯಲ್ಲಿ ನೇರಪಾವತಿಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಆಪ್ ಲೈನ್ ಮೂಲಕ ಅರ್ಜಿ
ಸಲ್ಲಿಸಬಹುದಾಗಿದೆ.

ಪೌರ ಕಾರ್ಮಿಕರು ಒಟ್ಟು ಖಾಲಿ ಹುದ್ದೆಗಳು – 134

  1.  ವಿದ್ಯಾರ್ಹತೆಯು ಅನ್ವಯಿಸುವುದಿಲ್ಲ.
  2. ಕನ್ನಡವನ್ನ ಮಾತನಾಡಲು ಗೊತ್ತಿರಬೇಕು.
  3. ಪೌರಕಾರ್ಮಿಕ ಹುದ್ದೆಯಲ್ಲಿ ಕನಿಷ್ಟ 2 ವರ್ಷಗಳಿಗಿಂತ ಕಡಿಮೆ ಇಲ್ಲದೆ ಸೇವೆ ಸಲ್ಲಿಸುತ್ತಿರುವ ನೇರಪಾವತಿ ನೌಕರರು ಅರ್ಜಿಯನ್ನ ಸಲ್ಲಿಸಲು ಅರ್ಹರಾಗಿರುತ್ತಾರೆ. ಅವರುಗಳು ಅರ್ಜಿ ಸಲ್ಲಿಸುತ್ತಿರುವ ದಿನಾಂಕಕ್ಕೂ ಸೇವೆಯಲ್ಲಿ ಕೂಡ ಮುಂದುವರಿಯುತ್ತಿರಬೇಕು.

ಅರ್ಜಿ ಸಲ್ಲಿಸಲು ನಿಮಗೆ ಕೊನೆಯ ದಿನಾಂಕದಂದು 18 ವರ್ಷ ಪೂರ್ಣಗೊಂಡಿದ್ದು, ಗರಿಷ್ಟ ವಯೋಮಿತಿ 55 ವರ್ಷ.

1. ಪೌರಕಾರ್ಮಿಕರು ಎಂದರೆ ಮಹಾನಗರಪಾಲಿಕೆಗಳಲ್ಲಿ ನೇರಪಾವತಿ/ದಿನಗೂಲಿ/ಕ್ಷೇಮಾಭಿವೃದ್ಧಿ/ಸಮಾನ ಕೆಲಸಕ್ಕೆ ಸಮಾನ ವೇತನದಲ್ಲಿ ಕಾರ್ಯ ನಿವರ್ಹಿಸುತ್ತಿರುವ ನೌಕರರು ಕನಿಷ್ಟ 2 ವರ್ಷಗಳ ಸೇವೆಯನ್ನು ಸಲ್ಲಿಸಿರಬೇಕು. ಮತ್ತು ಈ ನಿಯಮಗಳು ಜಾರಿಗೆ ಬಂದ ದಿನಾಂಕದಲ್ಲಿಯೂ ಹಾಗೂ ಅರ್ಜಿ ಸಲ್ಲಿಸುವ ದಿನಾಂಕದಲ್ಲಿಯೂ ಕಾರ್ಯವನ್ನ ನಿರ್ವಹಿಸುತ್ತಿರುವವರು.

2. ವಯೋಮಿತಿ : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಟ 55 ವರ್ಷಗಳು ವಯೋಮಿತಿ ಹೊಂದಿರತಕ್ಕದ್ದು.

3. ಕೊನೆಯ ದಿನಾಂಕದ ನಂತರ ಹಾಕಿದ ಅರ್ಜಿಯನ್ನು ಮತ್ತು ಅರ್ಪೂಣವಾದ ಅರ್ಜಿಗಳನ್ನು ಕೂಡ ಪರಿಗಣಿಸಲಾಗುವುದಿಲ್ಲ.

4. ಮೀಸಲಾತಿ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರದ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ (ಪರಿಶೀಲನಾ ಸಮಿತಿಯ ಅಧ್ಯಕ್ಷರು) ಜಾತಿ ಅದಾಯದ ಸಿಂದುತ್ವ ಪ್ರಮಾಣ ಪತ್ರದ ಪಡೆದ ನಂತರ ನೇಮಕಾತಿ ಆದೇಶ ನೀಡಲಾಗುವುದು.

ಅರ್ಹತೆಗಳು :

ಅರ್ಜಿದಾರರು ಭಾರತದ ನಾಗರೀಕನಾಗಿರತಕ್ಕದ್ದು. ಪೌರಕಾರ್ಮಿಕ ಅಂದರೆ ಮಹಾನಗರಪಾಲಿಕೆಯಲ್ಲಿ ಕನಿಷ್ಠ 2 ವರ್ಷಗಳ ಕಾಲ ನೇರಪಾವತಿ/ ಕ್ಷೇಮಾಭಿವೃದ್ಧಿ/ದಿನಗೂಲಿ/ ಗುತ್ತಿಗೆ /ಹೊರಗುತ್ತಿಗೆಯಲ್ಲಿ ಅರ್ಜಿ ಸಲ್ಲಿಕೆಯ ದಿನಾಂಕಕ್ಕೂ ಕೂಡ ಸೇವೆಯಲ್ಲಿರಬೇಕು. ನೇಮಕಾತಿಯನ್ನು ಮಂಗಳೂರು ನಲ್ಲಿ ಮಹಾನಗರಪಾಲಿಕೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಹಾಗೂ ಮಂಗಳೂರು ಮಹಾನಗರಪಾಲಿಕೆಯಲ್ಲಿ ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರಪಾವತಿಯಲ್ಲಿ ಈಗಾಗಲೇ ಪಡೆದುಕೊಳ್ಳಲಾಗಿದ್ದು ಅವರುಗಳು ಹೊರಗುತ್ತಿಗೆ ಸಂಸ್ಥೆಯಲ್ಲಿ ಸಲ್ಲಿಸಿದ ಸೇವೆಯನ್ನು ಹಿರಿತನದಲ್ಲಿ ಪರಿಗಣಿಸಿ ಕೂಡ ಆದ್ಯತೆ ನೀಡಲಾಗುವುದು.

ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವವಿರುವ ದೈಹಿಕ ನ್ಯೂನತೆಯಿಂದ ಮುಕ್ತವಾಗಿರಬೇಕು. ದೈಹಿಕವಾಗಿ ಸಾಮರ್ಥ್ಯವಿರುವ ಬಗ್ಗೆ ಗ್ರೂಪ್ ‘ಡಿ’ ನೌಕರರಿಗೆ ನಿಗಧಿಪಡಿಸಲಾದ ಕನಿಷ್ಠ ದೇಹ ದಾರ್ಡ್ಯತೆ ಹೊಂದಿರಬೇಕು. ಅರ್ಜಿ ಸಲ್ಲಿಕೆ ಹಾಗೂ ಆಯ್ಕೆ ಸಮಯದಲ್ಲಿ ಸರಕಾರಿ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.

 

ಕೆಳಕಂಡ ಮೂಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಅರ್ಜಿಯೊಂದಿಗೆ ಕೂಡ ಲಗತ್ತಿಸಬೇಕು.

ಜನ್ಮ ದಿನಾಂಕವನ್ನು ನಮೂದಿಸಿರುವ ಅಧಾರ್/ ಜನನ ಪ್ರಮಾಣ ಪತ್ರ/ಪಡಿತರ ಚೀಟಿ/ ಮತದಾರರ ಗುರುತಿನ ಚೀಟಿ/ಎಸ್ಎಸ್ಎಲ್ ಸಿ/ ಜನ್ಮದ ದಿನಾಂಕವನ್ನು ತೋರಿಸುವ ಶೈಕ್ಷಣಿಕ ಸಂಚಿತ ದಾಖಲೆಯ ಉದ್ಭತ ಭಾಗ. ನೇರಪಾವತಿ ಪೌರಕಾರ್ಮಿಕರಾಗಿ ಮಹಾನಗರ ಪಾಲಿಕೆ ಆಯುಕ್ತರಿಂದ ಪಡೆದ ಆದೇಶದ ಪ್ರತಿ, ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ ಬಗ್ಗೆ ಜೇಷ್ಠತೆಯನ್ನು ಪರಿಶೀಲಿಸಲು ಕಾರ್ಮಿಕ ರಾಜ್ಯ ವಿಮೆ ಮತ್ತು ಭವಿಷ್ಯ ನಿಧಿ ದಾಖಲಾತಿ.
ಸೈನಿಕ ಸೇವೆಯಿಂದ ಬಿಡುಗಡೆಯಾದ ಮಾಜಿ ಸೈನಿಕ ಮೀಸಲಾತಿಯ ಕೂಡ ಪ್ರಮಾಣ ಪತ್ರ.
ಪರಿಶಿಷ್ಠ ಜಾತಿ,ಪಂಗಡ ಪರಿಶಿಷ್ಠ/ ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ-ಪ್ರವರ್ಗ 3ಎ,3ಬಿ ಗಳ ಜಾತಿ ಪ್ರಮಾಣ ಪತ್ರಗಳು 2. ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ-1 ಮತ್ತು 2 ರಲ್ಲಿ

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ. ಅಂಗವಿಕಲ ಮೀಸಲಾತಿ ಪ್ರಮಾಣ ಪತ್ರ. ಯೋಜನೆಗಳಿಂದ ನಿರಾಶ್ರಿತರಾದ ಬಗ್ಗೆ ಪ್ರಮಾಣ ಪತ್ರ. ಮೇಲ್ಕಂಡಂತೆ ನಿಗದಿಪಡಿಸಿದ ಎಲ್ಲಾ ದಾಖಲೆಗಳನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಮಾತ್ರ ಮೂಲ ದಾಖಲಾತಿಗಳ ಕೂಡ ಪರಿಶೀಲನೆಯ ಸಮಯದಲ್ಲಿ ಕೂಡ ಹಾಜರುಪಡಿಸತಕ್ಕದ್ದು.

ದಿನಾಂಕ: 04-01-2024 ರಿಂದ 18-01-2024 ರವರೆಗೆ ಮಹಾನಗರಪಾಲಿಕೆಯ ಆಡಳಿತ ಶಾಖೆಯಿಂದ ಅರ್ಜಿ ನಮೂನೆಯನ್ನು ಪಡೆದು ಕೊಂಡು ಆಡಳಿತ ಶಾಖೆಯಲ್ಲಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18ನೇ ತಾರೀಕು ಆಗಿದ್ದು ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ.

10ನೇ ತರಗತಿ ಪಿಯುಸಿ ಡಿಪ್ಲೋಮಾ ಐಟಿಐ ಪಾಸಾದ ಅಂತಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದ್ದು ನಿಮ್ಮ ಅರ್ಹತೆಯನ್ನು ಈಗಲೇ ತಿಳಿದುಕೊಂಡು ಕೂಡಲೇ ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.. ಸರ್ಕಾರಿ ಹುದ್ದೆಗಾಗಿ ಪ್ರಸ್ತುತ ದಿನಮಾನಗಳಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆ ಇದು ನೀವು ಕೂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

Leave a Comment