ಕಾರ್ಮಿಕರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಸರ್ಕಾರದ ಹಲವಾರು ಸೌಲತ್ತುಗಳನ್ನು ಪಡೆಯಲು ಅತ್ಯವಶ್ಯಕ ಕಾರ್ಡ್ ನೋಂದಣಿ ಶುರು….!
ನಮಸ್ಕಾರ ಕರ್ನಾಟಕ ಜನತೆಗೆ. ನಮ್ಮ ಈ ಜಾಲತಾಣದಲ್ಲಿ ಪ್ರತಿನಿತ್ಯ ಜನರಿಗೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಗಳನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ಕಾರ್ಮಿಕರಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡಲು ಬಯಸುತ್ತೇವೆ. ಈ ಒಂದು ಲೇಖನದ ಮೂಲಕ ರಾಜ್ಯದ ಎಲ್ಲಾ ಕಾರ್ಮಿಕರಿಗೂ ತಿಳಿಸುವುದೇನೆಂದರೆ, ಕಾರ್ಮಿಕ ಇಲಾಖೆಯ ಹಲವಾರು ಯೋಜನೆಗಳನ್ನು ಪಡೆಯಲು ಅತಿ ಮುಖ್ಯವಾಗಿ ಬೇಕಾಗಿರುವುದು ಲೇಬರ್ ಕಾರ್ಡ್.
ಅನೇಕ ಜನರು ಕಾರ್ಮಿಕರಾಗಿದ್ದರು ಕೂಡ ಇಲ್ಲಿಯವರೆಗೆ ಲೇಬರ್ ಕಾರ್ಡ್ ಮಾಡಿಸಿರುವುದಿಲ್ಲ. ಇಂತಹ ಜನರಿಗೆ ಸರ್ಕಾರವು ಒಂದು ಗುಡ್ ನ್ಯೂಸ್ ಕೊಟ್ಟಿದೆ. ಅದೇನೆಂದರೆ ಯಾರು ಲೇಬರ್ ಕಾರ್ಡ್ ಮಾಡ್ಸಿಲ್ಲವೂ, ಅಂತವರಿಗೆ ನೋಂದಣಿ ಮಾಡಿಸಿಕೊಳ್ಳಲು ಸರ್ಕಾರವು ಸರ್ಕಾರವು ಅವಕಾಶ ನೀಡಿದೆ.
Labour card registration –
ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಾಗೂ ಇಲಾಖೆಯಿಂದ ಬರುವ ಹಲವಾರು ಸವಲತ್ತುಗಳನ್ನು ಪಡೆಯಲು ಅತಿ ಮುಖ್ಯವಾಗಿ ಬೇಕಾಗಿರುವುದು ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್. ಕೇವಲ ಈ ಒಂದು ಕಾರ್ಡು ಹೊಂದುವುದರಿಂದ ಕಾರ್ಮಿಕರು ಮತ್ತು ಅವರ ಮಕ್ಕಳು ಸರ್ಕಾರದಿಂದ ಹಾಗೂ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ನೂರಾರು ಸೌಲತ್ತುಗಳನ್ನು ಪಡೆಯಬಹುದಾಗಿದೆ.
Benefits of labour card –
ಕಾರ್ಮಿಕರು ಈ ಒಂದು ಲೇಬರ್ ಕಾರ್ಡ ನಿಂದ ಹಲವಾರು ಸವಲತ್ತುಗಳನ್ನು ಪಡೆಯಬಹುದಾಗಿದೆ. ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಮತ್ತು ಸರ್ಕಾರದಿಂದ ಇರುವ ಸವಲತ್ತುಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ – ರಾಜ್ಯದ ಕಾರ್ಮಿಕರು ಕಾರ್ಮಿಕ ಕಾರ್ಡ್ ನೊಂದಣಿ ಮಾಡಿಸಿಕೊಳ್ಳುವುದರಿಂದ ಕಾರ್ಮಿಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸರ್ಕಾರದಿಂದ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ. ಆದ್ದರಿಂದ ಈಗಲೇ ನೀವು ಲೇಬರ್ ಕಾರ್ಡನ್ನು ನೋಂದಣಿ ಮಾಡಿಸಿಕೊಳ್ಳಿ.
ಅಪಘಾತ ಪರಿಹಾರ-
ಒಂದು ವೇಳೆ ಕಾರ್ಮಿಕರು ಕೆಲಸದ ಸಮಯದಲ್ಲಿ ಅಪಘಾತವನ್ನು ಹೊಂದಿದರೆ ಅವರಿಗೆ ಸರ್ಕಾರವು ಪರಿಹಾರ ನೀಡಲಿದೆ. ಈ ಪರಿಹಾರವನ್ನು ಪಡೆಯಲು ಕೂಡ ಅತ್ಯು ಮುಖ್ಯವಾಗಿ ಬೇಕಾಗಿರುವುದು ಲೇಬರ್ ಕಾರ್ಡ್.
ವೈದ್ಯಕೀಯ ಸಹಾಯಧನ – ಕರ್ನಾಟಕ ರಾಜ್ಯದ ನೊಂದಾಯಿತ ಕಾರ್ಮಿಕರಿಗೆ ಯಾವುದೇ ತೊಂದರೆಗೆ ಒಳಪಟ್ಟರೆ ಅಂದರೆ ವೈದ್ಯಕೀಯ ಅಥವಾ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದರೆ ಸರ್ಕಾರವು ಅವರಿಗೆ ಸಹಾಯಧನವನ್ನು ನೀಡಲಿದೆ.
ಹೆರಿಗೆ ಸೌಲಭ್ಯ, ಪಿಂಚಣಿ ಸೌಲಭ್ಯ , ಉಚಿತ ಬಸ್ ಪಾಸ್ ಸೌಲಭ್ಯ, ಅಂತ್ಯ ಕ್ರಿಯೆ ವೆಚ್ಚ ಸೇರಿದಂತೆ ಇನ್ನು ಹಲವಾರು ಸೌಲಭ್ಯಗಳು ಕಾರ್ಮಿಕರಿಗೆ ಲಭ್ಯವಿವೆ. ಎಲ್ಲ ಸೌಲಭ್ಯಗಳನ್ನು ಸರ್ಕಾರದಿಂದ ನೀವು ಪಡೆಯಲು ಅತೀ ಮುಖ್ಯವಾಗಿ ಬೇಕಾಗಿರುವುದು ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್.
ಈ ಒಂದು ಲೇಬರ್ ಕಾರ್ಡನ್ನು ಇಲ್ಲಿಯವರೆಗೂ ಯಾರೂ ನೋಂದಣಿ ಮಾಡಿಸಿಲ್ಲವೂ, ಅಂತಹ ಕಾರ್ಮಿಕರಿಗೆ ಸರ್ಕಾರವು ಮತ್ತೊಂದು ಅವಕಾಶವನ್ನು ನೀಡಿದೆ.
ಹಾಗಾದರೆ ಈ ಕಾರ್ಮಿಕರ ಕಾರ್ಡನ್ನು ನೋಂದಣಿ ಮಂಡಿಸಿಕೊಳ್ಳಲು ಯಾರು ಅರ್ಹರು ಎಂದು ನೋಡುವುದಾದರೆ,
ಕರ್ನಾಟಕ ರಾಜ್ಯದ ಕಾರ್ಮಿಕರು ನೊಂದಣಿ ಮಾಡಿಸುವುದರ ಪೂರ್ವದಲ್ಲಿ 12 ತಿಂಗಳ ಕಾಮಗಾರಿ ಕೆಲಸದಲ್ಲಿ ಒಟ್ಟು ಕನಿಷ್ಠ 90 ದಿನಗಳ ಕಾಲ ಕೆಲಸ ಮಾಡಿರುವಂತಹವರು ಈ ಲೇಬರ್ಕಾರ್ಡ್ ಗೆ ನೋಂದಣಿ ಮಾಡಿಸಲು ಅರ್ಹರಿರುತ್ತಾರೆ.
ಲೇಬರ್ ಕಾರ್ಡ್ ನೊಂದಣಿ ಮಾಡಿಸಿಕೊಳ್ಳಲು ಬೇಕಾಗುವ ದಾಖಲಾತಿಗಳು –
ಈ ಲೇಬರ್ ಕಾರ್ಡ್ ನಿಂದ ಇಷ್ಟೆಲ್ಲ ಲಾಭಗಳಿದ್ದರೆ, ಈ ಲಾಭಗಳನ್ನು ಪಡೆಯಲು ಬೇಕಾಗಿರುವುದು ಲೇಬರ್ ಕಾರ್ಡ್. ಈ ಲೇಬರ್ ಕಾರ್ಡ್ ನಿಂದ ಮಾಡಿಸಿಕೊಳ್ಳಲು ಕೆಲವು ದಾಖಲಾತಿಗಳು ಅತಿ ಅವಶ್ಯಕವಾಗಿರುತ್ತವೆ. ಲೇಬರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಲು ಬೇಕಾಗಿರುವ ಮುಖ್ಯ ದಾಖಲಾತಿಗಳೆಂದರೆ ಕಾರ್ಮಿಕರು 90 ದಿನಗಳ ಕಾಲ ಕೆಲಸ ಮಾಡಿರುವ ಉದ್ಯೋಗ ದೃಢೀಕರಣ ಪತ್ರ ಅತಿ ಅವಶ್ಯಕ.
ಅದೇ ರೀತಿ ಅರ್ಜಿ ಸಲ್ಲಿಸುವ ಕಾರ್ಮಿಕನ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬೇಕಾಗುತ್ತವೆ. ಅದೇ ರೀತಿ ಲೇಬರ್ ಕಾರ್ಡ್ ನೊಂದಣಿ ಮಾಡಿಸಿಕೊಳ್ಳಲು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಜೊತೆಗೆ, ಅರ್ಜಿ ಸಲ್ಲಿಸುವ ಕಾರ್ಮಿಕನ ಬ್ಯಾಂಕ್ ಪಾಸ್ ಬುಕ್ ಕೂಡ ಅತಿ ಅವಶ್ಯಕ. ಅರ್ಜಿದಾರನ ಆಧಾರ್ ಕಾರ್ಡ್ ಜೊತೆಗೆ, ಅವನ ಅವಲಂಬಿತರ ಅಂದರೆ ಅವನ ಮಕ್ಕಳ ಅಥವಾ ಗಂಡನ ಹೆಂಡತಿಯ ಆಧಾರ್ ಕಾರ್ಡ್ ಕೂಡ ಅತಿ ಅವಶ್ಯಕವಾಗಿರುತ್ತದೆ.
ಲೇಬರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಲು ವಯೋಮಿತಿ –
ಕರ್ನಾಟಕ ರಾಜ್ಯ ಸರ್ಕಾರದ, ಕಾರ್ಮಿಕ ಕಲ್ಯಾಣ ಇಲಾಖೆ ಮಂಡಳಿಯಿಂದ ಲೇಬರ್ ಕಾರ್ಡ್ ಪಡೆಯಲು ಕಾರ್ಮಿಕನು ಕನಿಷ್ಠ 18 ವರ್ಷದಿಂದ 60 ವರ್ಷದ ಒಳಗಿರಬೇಕು. ಇಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಅರ್ಜಿ ಸಲ್ಲಿಸಲು ಯಾವಾಗ ಆರಂಭ ಮತ್ತು ಮುಕ್ತಾಯ – ಲೇಬರ್ ಕಾರ್ಡ್ ನೊಂದಣಿ ಮಾಡಿಸಿಕೊಳ್ಳಲು ಡಿಸೆಂಬರ್ 31, 2023 ರಿಂದ ಆರಂಭವಾಗಿದ್ದು ಮಾರ್ಚ್ 31, 2024ಕ್ಕೆ ಅಂತಿಮವಾಗಲಿದೆ. ಆದ್ದರಿಂದ ಅರ್ಹರಿರುವ ಎಲ್ಲಾ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ನಿಮ್ಮ ಲೇಬರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಿ.
ಲೇಬರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಲು ತಾಲೂಕಿನ ಕಾರ್ಮಿಕ ಇಲಾಖೆಯ ಭೇಟಿ ನೀಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.