ಕಾರ್ಮಿಕರಿಗೆ ಗುಡ್ ನ್ಯೂಸ್! ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಲೇಬರ್ ಕಾರ್ಡ್ ಅರ್ಜಿ ಅಹ್ವಾನ | Labour card application

ಕಾರ್ಮಿಕರಿಗೆ ಗುಡ್ ನ್ಯೂಸ್! ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಲೇಬರ್ ಕಾರ್ಡ್ ಅರ್ಜಿ ಅಹ್ವಾನ | Labour card application

ಎಲ್ಲರಿಗೂ ನಮಸ್ಕಾರ ಬಂಧುಗಳೇ. ನಮ್ಮ ಈ ಜಾಲತಾಣದಲ್ಲಿ ನಾವು ದಿನನಿತ್ಯ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಕಾರ್ಮಿಕರಿಗೆ ಉಪಯುಕ್ತವಾಗುವಂತಹ ಲೇಬರ್ ಕಾರ್ಡ್ ಬಗ್ಗೆ ಮಾಹಿತಿಯನ್ನು ತಿಳಿಸಲಿದ್ದೇವೆ.

ಕಾರ್ಮಿಕ ಇಲಾಖೆಯು ಕಾರ್ಮಿಕರಿಗಾಗಿ ಹಾಗೂ ಅವರ ಜೇವನದ ಉನ್ನತೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕ ಇಲಾಖೆಯಿಂದ ಜಾರಿ ಇರುವ ಎಲ್ಲಾ ಯೋಜನೆಗಳ ಲಾಭ ಪಡೆಯಬೇಕಾದರೆ ಅತೀ ಮುಖ್ಯವಾಗಿ ಬೇಕಾಗಿರುವುದು ಲೇಬರ್ ಕಾರ್ಡ್. ಈ ಲೇಬರ್ ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು ನಮ್ಮ ಈ ಲೇಖನದಲ್ಲಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಹರಿದ್ದರೆ ತಡ ಮಾಡದೇ ಅರ್ಜಿ ಸಲ್ಲಿಸಿ ಎಲ್ಲಾ ಯೋಜನೆಗಳ ಲಾಭ ಪಡೆದುಕೊಳ್ಳಿ.

ಕರ್ನಾಟಕ ಸರ್ಕಾರವು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ( Karnataka Building and Other Construction Workers’ Welfare board ) ಮೂಲಕ ಈ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಎಲ್ಲಾ ಯೋಜನೆಗಳನ್ನು ಲಾಭವನ್ನು ನೀವು ಪಡೆಯ ಬೇಕಾದರೆ ಈ ಕೂಡಲೇ ಕಾರ್ಮಿಕರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು.

ಲೇಬರ್ ಕಾರ್ಡ್ ಹೊಂದಿರುವಂತಹ ಕಾರ್ಮಿಕರಿಗೆ ಏನೆಲ್ಲಾ ಸಿಗುವ ಸೌಲಭ್ಯಗಳು ಸಿಗಲಿವೆ :
ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡ್ ಗುರುತಿನ ಚೀಟಿ ಮಾತ್ರವಲ್ಲದೆ ಅದು ಒಂದು ಕಾರ್ಮಿಕರಿಗೆ ಹಲವಾರು ಯೋಜನೆಗಳ ಲಾಭ ಪಡೆಯಲು ಅತೀ ಮುಖ್ಯವಾಗಿ ಬೇಕಾಗಿರುವುದು. ಈ ಕಾರ್ಡ್ ಹೊಂದಿರುವವರಿಗೆ ಏನೆಲ್ಲಾ ಲಭ್ಯವಿರುವ ಸೌಲಭ್ಯಗಳು ಲಭ್ಯವಿವೇ ಎಂಬುದರ ಪಟ್ಟಿ ಇಲ್ಲಿದೆ.

  1. ಅಪಘಾತ ಪರಿಹಾರ: ಯಾವುದೇ ಅಪಘಾತ ಸಂಭವಿಸಿದರೆ ಆರ್ಥಿಕವಾಗಿ ಸಹಾಯ ಸಿಗಲಿದೆ.
  2. ವೈದ್ಯಕೀಯ ಸಹಾಯಧನ: ಉಚಿತ ಚಿಕಿತ್ಸೆ ದೊರೆಯಲಿದೆ.
  3. ತಾಯಿ ಮಗು ಸಹಾಯ ಹಸ್ತ: ಜನನದ ಸಮಯದಲ್ಲಿ ಆರ್ಥಿಕ ನೆರವು.
  4. ಮದುವೆ ಸಹಾಯಧನ: .
  5. ಪಿಂಚಣಿ ಮುಂದುವರಿಕೆ:
  6. ಶೈಕ್ಷಣಿಕ ಸಹಾಯಧನ:
  7. ಹೆರಿಗೆ ಸೌಲಭ್ಯ:
  8. ಅಂತ್ಯಕ್ರಿಯೆ ವೆಚ್ಚ:
  9. ಉಚಿತ ಸಾರಿಗೆ ಬಸ್ ಪಾಸ್:
  10. ಶ್ರಮಸಮರ್ಥ್ಯ ಟೂಲ್ ಕಿಟ್:

Labour Card ಅರ್ಹತೆಗಳೇನು?


ನೋಂದಣಿ ಮಾಡುವದಕ್ಕಿಂತ ಮುಂಚಿತವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ 1 ವರ್ಷದ ಒಳಗೆ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರುವುದು ಕಡ್ಡಾಯವಾಗಿರುತ್ತದೆ.

Labour Card Karnataka Application ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

  • ಕಾರ್ಮಿಕರ 90 ದಿನಗಳು ಕೆಲಸ ಮಾಡಿದ ಉದ್ಯೋಗ ದೃಡೀಕರಣ ಪತ್ರ
  • ಅರ್ಜಿದಾರನ ಮತ್ತು ಅವನ ಅವಲಂಬಿತರ ಆಧಾರ ಕಾರ್ಡ್ (Aadhar card)
  • ಅರ್ಜಿದಾರರ ಬ್ಯಾಂಕ್ ಖಾತೆ (Bank passbook )
  • ಅರ್ಜಿದಾರನ ಆಧಾರ ಲಿಂಕ್ ಆಗಿರುವ ಮೊಬೈಲ್ ನಂಬರ್ (Aadhar linked Mobile number)

ವಯೋಮಿತಿ :
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಲೇಬರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಲು, ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಟ ವಯೋಮಿತಿ 60 ವರ್ಷ ಮೀರಿರಬಾರದು.

ನೋಂದಣಿ ಎಲ್ಲಿ ಮಾಡಿಸಬೇಕು?

ಹಿರಿಯ ಕಾರ್ಮಿಕ ನಿರೀಕ್ಷಿಕರು(Senior Labor Inspector) / ಕಾರ್ಮಿಕ ನಿರೀಕ್ಷಿಕರ ಕಚೇರಿ (Labor Inspector)

ನೋಂದಣಿ ಅಭಿಯಾನ ಯಾವಾಗ ಇರಲಿದೆ?


ಲೇಬರ್ ಕಾರ್ಡ್ ಮಾಡಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳು ಬೆಂಗಳೂರು ನಗರದಲ್ಲಿ ಇರುವಂತವರಿಗೆ 30 ನೇ ಡಿಸೆಂಬರ್ 2023 ರಿಂದ 31 ನೇ ಮಾರ್ಚ್ 2024 ರವರೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್ ಗೆ ನೋಂದಣಿ ಅಭಿಯಾನ ನಡೆಯಲಿದ್ದು ತಡ ಮಾಡದೇ ಮಾಡಿಸಿಕೊಳ್ಳಿ.
ಇನ್ನುಳಿದವರು ಇನ್ನು ಹೆಚ್ಚಿನ ಮಾಹಿತಿಗಾಗಿ ನಿಮಗೆ ಸಂಬಂದಿಸಿದ ಕಾರ್ಮಿಕ ಅಧಿಕಾರಿಗಳು ಮತ್ತು ಹಿರಿಯ ಕಾರ್ಮಿಕ ನಿರೀಕ್ಷಿಕರನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು ಮತ್ತು ಇತರೆ ಮಾಹಿತಿಗಾಗಿ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ. 155214

Leave a Comment