ಕರ್ನಾಟಕ ಲೋಕಸೇವಾ ಆಯೋಗವು ಇದೀಗ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವಂತೆ ಹಲವಾರು ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಕಳೆದ ತಿಂಗಳಿನಲ್ಲಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿತ್ತು.
ಆದರೆ ಇದೀಗ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಆನ್ಲೈನ್ ಮುಖಾಂತರ ಆರಂಭವಾಗಿದ್ದು ಅರ್ಜಿ ಸಲ್ಲಿಸಬಯಸುವ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ನಾವು ಕೆಳಗೆ ನೀಡಿರುವ ಅರ್ಜಿ ಸಲ್ಲಿಕೆ ಡೈರೆಕ್ಟ್ ಲಿಂಕನ್ನು ಬಳಸಿಕೊಂಡು ತಡ ಮಾಡದೆ ಅರ್ಜಿ ಸಲ್ಲಿಸಿ.
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ಹಾಗೂ ಸ್ನೇಹಿತರೆ.
ನಮ್ಮ ಇಂದಿನ ಈ ಲೇಖನದಲ್ಲಿ ನಾವು ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ಅಂದರೆ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಮಾಡಿಕೊಳ್ಳುತ್ತಿರುವಂತಹ ಆರ್ ಟಿ ಓ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ಹಾಗೂ ಉಪಯುಕ್ತ ಮಾಹಿತಿಯನ್ನು ನೀಡಲಿದ್ದೇವೆ.
ನಮ್ಮ ಈ ಜಾಲತಾಣದಲ್ಲಿ ನೀಡುತ್ತಿರುವ ಪ್ರತಿ ದಿನದ ಉಪಯುಕ್ತ ಮಾಹಿತಿಗಳು ನಿಮಗೆ ಉಪಯುಕ್ತವೆನಿಸಿದ್ದಲ್ಲಿ ನಿಮ್ಮ ಈ ಎಲ್ಲಾ ಆತ್ಮೀಯ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಪ್ರತಿಯೊಬ್ಬರಿಗೂ ಮಾಹಿತಿ ತಲುಪುವಂತೆ ಮಾಡಿ.
ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ನೇಮಕಾತಿ ಸಂಕ್ಷಿಪ್ತ ವಿವರ :
ನೇಮಕಾತಿ ಇಲಾಖೆ : ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್
ನೇಮಕಾತಿ ಮಾಡಿಕೊಳ್ಳುತ್ತಿರುವ ಒಟ್ಟು ಹುದ್ದೆಗಳ ಸಂಖ್ಯೆ : 76
ಹುದ್ದೆಗಳ ಹೆಸರು : ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್
ಅರ್ಜಿ ಸಲ್ಲಿಸುವುದು : ಆನ್ಲೈನ್ ಮುಖಾಂತರ
ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ಕಳೆದ ತಿಂಗಳು ಈ ಒಂದು ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿತ್ತು. ಅಧಿಕೃತ ಅಧಿಸೂಚನೆ ಪ್ರಕಾರ ಈ ಒಂದು ನೇಮಕಾತಿಯಲ್ಲಿ ಒಟ್ಟು 76 ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಉಳಿಕೆ ವೃಂದದ ವಿಭಾಗದಲ್ಲಿ 70 ಹುದ್ದೆಗಳು ಹಾಗೂ ಹೈದರಾಬಾದ್ ಕರ್ನಾಟಕ ವೃಂದ ದಲ್ಲಿ 6 ಹುದ್ದೆಗಳು ಒಟ್ಟಾರೆ 76 ಹುದ್ದೆಗಳಿಗೆ ಒಂದು ನೇಮಕಾತಿ ನಡೆಯುತ್ತಿದೆ.
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾವೆಲ್ಲ ಅಭ್ಯರ್ಥಿಗಳು ಅರ್ಹರಿದ್ದಾರೆ?
ಆತ್ಮೀಯ ಸ್ನೇಹಿತರೆ ಕೆಪಿಎಸ್ಸಿ ಯ ಅಧಿಕೃತ ಅಧಿಸೂಚನೆ ಪ್ರಕಾರ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿ ಅದರ ಜೊತೆಗೆ ಡಿಪ್ಲೋಮಾ ಇನ್ ಆಟೋಮೊಬೈಲ್ ಆಟೋ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಮುಗಿಸಿರುವಂತಹ ಅಭ್ಯರ್ಥಿಗಳು ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ವಯೋಮಿತಿ ಅರ್ಹತೆಗಳು :
ಈ ಒಂದು ನೇಮಕಾತಿಗೆ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹೊಂದಿರಬೇಕು ಮತ್ತು ಗರಿಷ್ಠ 35 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಮಾತ್ರ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ, ಇತರೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವಂತ ಪ್ರವರ್ಗ 2ಗೆ 2ಬಿ 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ರೂ.300, ಮಾಜಿ ಸೈನಿಕ್ ವರ್ಗದ ಅಭ್ಯರ್ಥಿಗಳಿಗೆ ರೂ. 50, ಉಳಿದು ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಜೂನ್ 3024 ಕೊನೆಯ ದಿನಾಂಕ ವಾಗಿದೆ.