SDA ನೇಮಕಾತಿ ಅಧಿಸೂಚನೆ..! 10ನೇ ತರಗತಿ ಪಾಸಾದವರು ಈ ಎಸ್ ಡಿ ಎ SDA ಹುದ್ದೆಗಳಿಗೆ ಅರ್ಜಿ ಸಲ್ಲಿಸಿ…!

ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೌದು ಸ್ನೇಹಿತರೆ ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಎಸ್ ಡಿ ಎ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ

SDA ನೇಮಕಾತಿ : 10ನೇ ತರಗತಿ ಪಾಸಾದವರಿಗೆ ಮತ್ತು ಖಾಲಿ ಇರುವ SDA ಹುದ್ದೆಗಳ ನೇಮಕಾತಿ ಸಂಬಳ ₹88300
SDA Recruitment 2024

ಕೋ ಆಪರೇಟಿವ್ ಬ್ಯಾಂಕ್ ಒಂದರಲ್ಲಿ SDA ಹುದ್ದೆಗಳಿಗಾಗಿ ಕಾಯುತ್ತಿರುವ ಅಂತಹ ಅಭ್ಯರ್ಥಿಗಳಿಗೆ ಶುಭ ಸುದ್ದಿಯಾಗಿದ್ದು, ಈ ನೇಮಕಾತಿ ಯಾವುದು? ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಸಂಪೂರ್ಣವಾಗಿ ಇಲ್ಲಿ ತಿಳಿದುಕೊಳ್ಳಿ

ಎಲ್ಲರಿಗೂ ನಮಸ್ಕಾರ ಪ್ರೀತಿಯ ಬಂಧುಗಳೇ. ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಉದ್ಯೋಗ ನಿರೀಕ್ಷೆಯಲ್ಲಿ ಇರುವವರಿಗೆ ಸಹಾಯವಾಗುವಂತಹ ಉದ್ಯೋಗ ಮಾಹಿತಿಯನ್ನು ನೀಡುತ್ತಿದ್ದೇವೆ.

ಯಾವುದು ಈ ನೇಮಕಾತಿ, ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ, ಮಾಹಿತಿ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.

ನೇಮಕಾತಿ : ಈ ಒಂದು ನೇಮಕಾತಿಯು ಶ್ರೀ ಸುಧಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಬೆಂಗಳೂರಿನಲ್ಲಿರುವ ಸಹಕಾರಿ ಬ್ಯಾಂಕ್ ಒಂದರಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಉದ್ಯೋಗ ನಿರೀಕ್ಷೆಯಲ್ಲಿ ಇರುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು ಈ ಒಂದು ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಖಾಲಿ ಹುದ್ದೆಗಳ ವಿವರ : ಬೆಂಗಳೂರಿನ ಶ್ರೀಸುಧಾ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಒಟ್ಟು 18 ಹುದ್ದೆಗಳು ಖಾಲಿ ಇದ್ದು 18 ಹುದ್ದೆಗಳು ಯಾವುವು ನೋಡುವುದಾದರೆ,

  • ಕಿರಿಯ ಸಹಾಯಕರು ಗ್ರೇಡ್ 2 – 10 ಹುದ್ದೆಗಳು
  • ಸಿಸ್ಟಮ್ ಅಡ್ಮಿನಿಸ್ಟ್ರೇಟರ್ – 01 ಹುದ್ದೆ
  • ಕಚೇರಿ ಸಹಾಯಕರು ( ಅಟೆಂಡರ್ ) – 07 ಹುದ್ದೆಗಳು

ಅರ್ಹತೆಗಳು : ಬೆಂಗಳೂರಿನ ಶ್ರೀ ಸುಧಾ ಕೋ- ಆಪರೇಟಿವ್ ಬ್ಯಾಂಕ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಏನೆಂದು ನೋಡುವುದಾದರೆ
ಕಿರಿಯ ಸಹಾಯಕರ ಗ್ರೇಡ್ 2- ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಅಂಗೀಕರಿಸಿದ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಶಿಕ್ಷಣದ ಜೊತೆಗೆ ಅಭ್ಯರ್ಥಿಗಳು ಕನ್ನಡವನ್ನು ಸರಾಗವಾಗಿ ಮಾತನಾಡಲು ಮತ್ತು ಓದಲು ಬರೆಯಲು ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಅಂಗೀಕರಿಸಿದ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯದಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು ಹಾಗೂ ಅದೇ ರೀತಿ ಕನ್ನಡದಲ್ಲಿ ಮಾತನಾಡುವ ಓದಲು ಬರೆಯಲು ಬೇಕಾಗಿರುವ ಜ್ಞಾನವನ್ನು ಹೊಂದಿರಬೇಕು.

ಅಟೆಂಡರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿರಬೇಕು. ಶೈಕ್ಷಣಿಕ ಅರ್ಹತೆಯೊಂದಿಗೆ ಅಭ್ಯರ್ಥಿಯು ಕನ್ನಡವನ್ನು ಸರಾವಾಗಿ ಮಾತನಾಡಲು ಓದಲು ಜ್ಞಾನ ಹೊಂದಿರಬೇಕು.

ಹುದ್ದೆಗಳಿಗೆ ಸಂಬಳವೆಷ್ಟು ಎಂದು ನೋಡುವುದಾದರೆ – ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸದ ಅರ್ಹ ಅಭ್ಯರ್ಥಿಗಳು ಅಂತಿಮವಾಗಿ ಆಯ್ಕೆಯಾದ ನಂತರ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಮಾಸಿಕ ಸಂಬಳವನ್ನು 27,650 ರೂಪಾಯಿಯಿಂದ 88,300 ರೂ. ಯವರೆಗೆ ಮಾಸಿಕ ಸಂಬಳವನ್ನು ನೀಡಲಾಗುತ್ತದೆ.

ಅರ್ಜಿ ಹೀಗೆ ಸಲ್ಲಿಸಿ : ಖಾಲಿ ಇರುವಂತ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ವಿಳಾಸಕ್ಕೆ ಅಂಚೆ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುತ್ತದೆ.


ವಿಳಾಸ : ಅಧ್ಯಕ್ಷರು, ನೇಮಕಾತಿ ಸಮಿತಿ, ಶ್ರೀ ಸುಧಾ ಸಹಕಾರಿ ಬ್ಯಾಂಕ್‌ 3, A.O., No. 195/33, ” ಶ್ರೀ ಸುಧಾ ರಜತ್ ಭವನ “, R.V. ರಸ್ತೆ, ಬೆಂಗಳೂರು-560004

Leave a Comment