ವಿದ್ಯಾರ್ಥಿಗಳಿಗಾಗಿ ಕಲಿಕಾ ಸ್ಕಾಲರ್ಶಿಪ್ ಹೊಸ ಯೋಜನೆ…!
ಕರುನಾಡ ಜನತೆಗೆ ನಮಸ್ಕಾರಗಳು…!
ಪ್ರೀತಿಯ ಓದುಗರೇ ಪ್ರಸ್ತುತ ಈ ನಮ್ಮ ಜ್ಞಾನ ಸಮೃದ್ಧಿಯ ಲೇಖನಗಳ್ಳಿ ವಿದ್ಯಾರ್ಥಿಗಳಿಗೆ ಬೇಕಾಗಿರುವಂತಹ ಮಾಹಿತಿಯನ್ನು ನಮ್ಮ ಲೇಖನಗಳಲ್ಲಿ ನೀಡುತ್ತಿದ್ದು ಇದೀಗ ವಿದ್ಯಾರ್ಥಿಗಳಿಗಾಗಿ 75,000 ವರೆಗೂ ಸ್ಕಾಲರ್ಶಿಪ್ ದೊರೆಯುವ ಸರ್ಕಾರದ ಹೊಸ ಯೋಜನೆ ಬಂದಿದೆ…!
ಹೌದು ಸ್ನೇಹಿತರೆ ಕಲಿಕಾ ಭಾಗ್ಯ ಎಂಬ ಹೊಸ ಸ್ಕಾಲರ್ಶಿಪ್ ಯೋಜನಾ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ 15 ರಿಂದ 75,000 ವರೆಗೂ ಸ್ಕಾಲರ್ಶಿಪ್ ದೊರೆಯಲಿದ್ದು ಈ ಸ್ಕಾಲರ್ಶಿಪ್ನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!
ಲೇಬರ್ ಕಾರ್ಡ್ ಇರುವಂತಹ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರದಿಂದ ಕಲಿಕಾ ಭಾಗ್ಯ ಸ್ಕಾಲರ್ಶಿಪ್ ಎಂಬ ಹೊಸ ಯೋಜನಾ ಅಡಿಯಲ್ಲಿ ವಿದ್ಯಾರ್ಥಿಗಳ ಖಾತೆಗೆ 15 ರಿಂದ 75,000 ವರೆಗೂ ಸ್ಕಾಲರ್ಶಿಪ್ ದೊರೆಯಲಿದ್ದು ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ…!
ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಬೇಕೆಂದರೆ ನಿಮ್ಮ ಹತ್ತಿರ ಕಡ್ಡಾಯವಾಗಿ ಲೇಬರ್ ಕಾರ್ಡ್ ಇರಬೇಕಾಗುತ್ತದೆ ಅಂದಾಗ ಮಾತ್ರ ನೀವು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತೀರಿ ಎಂದರ್ಥ…!
ಕಲಿಕಾ ಭಾಗ್ಯ ಯೋಜನೆ (Kalika bhagya Yojana)
ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕರ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಮಿಕ ಮಕ್ಕಳಿಗೆ (labour’s children) ವಿದ್ಯಾಭ್ಯಾಸ ಒದಗಿಸುವ ಕಲಿಕಾ ಭಾಗ್ಯ ಯೋಜನೆ ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ಮಕ್ಕಳಿಗೆ ವಿದ್ಯಾರ್ಥಿ ವೇತನ (Education scholarship) ನೀಡಲಾಗುವುದು.
ಅತಿ ಸಣ್ಣ ವಯಸ್ಸಿನಿಂದ ಅಂದರೆ ಆರಂಭಿಕ ಶಿಕ್ಷಣದಿಂದ ಉನ್ನತ ಶಿಕ್ಷಣ ಪಡೆದುಕೊಳ್ಳುವ ವರೆಗೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಕುಟುಂಬದ ಮಕ್ಕಳಿಗೆ, ಅಗತ್ಯ ಇರುವ ಆರ್ಥಿಕ ನೆರವು ಒದಗಿಸುವ ಸಲುವಾಗಿ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು.
ಮೂರರಿಂದ ಐದು ವರ್ಷದ ನರ್ಸರಿ ಮಕ್ಕಳಿಗೆ ವಾರ್ಷಿಕ ರೂ. 5,000
ಒಂದರಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ರೂಪಾಯಿ 5,000
5ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ರೂಪಾಯಿ 8,000
9 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ರೂಪಾಯಿ 12,000
PUC ವಿದ್ಯಾರ್ಥಿಗಳಿಗೆ ರೂಪಾಯಿ 15,000
ಡಿಪ್ಲೋಮೋ ವಿದ್ಯಾರ್ಥಿಗಳಿಗೆ ರೂಪಾಯಿ 20,000
ಡಿ ಎಡ್ ವಿದ್ಯಾರ್ಥಿಗಳಿಗೆ ರೂ. 25,000
ಬಿ ಎಡ್ ವಿದ್ಯಾರ್ಥಿಗಳಿಗೆ ರೂಪಾಯಿ 35000
ಪದವಿ (ಯಾವುದೇ ಕೋರ್ಸ್) ವಿದ್ಯಾರ್ಥಿಗಳಿಗೆ ರೂ. 25000.
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೂಪಾಯಿ 60,000.
IIT, IIM ಮೊದಲಾದ ಕೋರ್ಸ್ ಗಳಿಗೆ ಪಾವತಿಸಲಾಗಿರುವ ಬೋಧನಾ ಶುಲ್ಕವನ್ನು ವಿದ್ಯಾರ್ಥಿವೇತನವಾಗಿ ನೀಡಲಾಗುವುದು.