1.75 ಲಕ್ಷ ರೂಪಾಯಿ ಸಹಾಯಧನ! ನೀವು ಆಡು ಮತ್ತು ಕುರಿ ಸಾಕುತ್ತೀರಾ? ಇಲ್ಲಿದೆ ನಿಮಗೆ ಭರ್ಜರಿ ಆಫರ್
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ, ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ.
ಇಂದಿನ ಈ ಲೇಖನದಲ್ಲಿ ನಾವು ಕೃಷಿ ಚಟುವಟಿಕೆಗಳಾದ ಕುರಿ ಮತ್ತು ಆಡು ಸಾಕಾಣಿಕೆ ಮಾಡುವಂತಹ ಜನರಿಗೆ ಸರ್ಕಾರದಿಂದ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಕರೆದಿರುವ ಬಗ್ಗೆ ಮಾಹಿತಿಯನ್ನು ಒದಗಿಸಲಿದ್ದೇವೆ.
ಕರ್ನಾಟಕ ರಾಜ್ಯದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾಮಂಡಗಳೊಂದಿಗೆ ಇರುವ ಸಂಘಗಳ ಸದಸ್ಯರಿಗೆ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ಅಡಿಯಲ್ಲಿ ಕುರಿ ಮತ್ತು ಆಡು ಸಾಕಾಣಿಕೆ ಮಾಡುವಂತವರಿಗೆ ಸಾಲ ಮತ್ತು ಸಹಾಯಧನ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. ಕುರಿ ಮತ್ತು ಆಡು ಸಾಕಾಣಿಕೆ ಮಾಡುವಂತಹ ಜನರಿಗೆ ಇದು ಒಂದು ಭರ್ಜರಿ ಆಫರ್ ಎಂದರೆ ತಪ್ಪಾಗಲಾರದು.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಮತ್ತು ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ ಜೊತೆಗೆ ಇರುವ ಸಂಘಗಳ ಸದಸ್ಯರುಗಳ ಅಮೃತ ಸ್ವಾಭಿಮಾನಿ ಕುರಿಗಾಗಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುವ ಅಭ್ಯರ್ಥಿಗಳ ಫೆಬ್ರವರಿ 19, 2024ರ ಒಳಗಾಗಿ ಈ ಒಂದು ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಮುಖಾಂತರ ಸಂಬಂಧಿಸಿದ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂದು ನೋಡುವುದಾದರೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ ಪ್ರಕಾರ ಒಂದು ಯೋಜನೆಯ ಲಾಭ ಪಡೆಯಲು ಕರ್ನಾಟಕ ಕೋರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಂಘದ ಸದಸ್ಯರ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ಒಂದು ಯೋಜನೆಯಡಿಯಲ್ಲಿ ಅರ್ಹರಿರುವ ಒಟ್ಟು 20 ಸಾವಿರ ಅಭ್ಯರ್ಥಿಗಳಿಗೆ ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪನೆ ಮಾಡಿಕೊಳ್ಳಲು 1,75,000 ರೂ. ಸಹಾಯಧನ ಮತ್ತು ಸಾಲ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. ಕುರಿಗಾರಿಗಳನ್ನು ಸದೃಢಗೊಳಿಸಲು ಮತ್ತು ಆರ್ಥಿಕವಾಗಿ ಸದೃಢಗೊಳಿಸಲು ಹಾಗೂ ಅವರ ಸಮಗ್ರ ಅಭಿವೃದ್ಧಿಗಾಗಿ ಈ ಒಂದು ಯೋಜನೆಯನ್ನು ಜಾರಿಗೆ ತಂದಿರುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲಾತಿಗಳು :
ಈ ಒಂದು ಯೋಜನೆಯಡಿಯಲ್ಲಿ ನೀವು ಅರ್ಜಿ ಸಲ್ಲಿಸುವುದಾದರೆ ನಿಗದಿತ ಅರ್ಜಿ ನಮೂನೆಯಲ್ಲಿ ಭಾವಚಿತ್ರಗಳೊಂದಿಗೆ ಅರ್ಜಿಯನ್ನು. ಅದೇ ರೀತಿ ಸಂಘದ ಇತ್ತೀಚಿನ ಮೂರು ವರ್ಷಗಳ ಲೆಕ್ಕ ಪರಿಶೋಧನೆ ಆಗಿರುವಂತದ್ದು ಮತ್ತು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಹಕಾರ ಇಲಾಖೆಯಿಂದ ದೃಡೀಕರಣ ಹೊಂದಿರಬೇಕು. ಅದೇ ರೀತಿ ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಂಘದ ಕಾರ್ಯದರ್ಶಿ ರವರಿಂದ ದೃಢೀಕರಣ ಪತ್ರ ಹೊಂದಿರಬೇಕು. ಒಂದು ವೇಳೆ ನೀವು ಪರಿಶಿಷ್ಟ ಜಾತಿಯವರಾಗಿದ್ದರೆ ಅಥವಾ ಪರಿಶಿಷ್ಟ ಪಂಗಡದವರಾಗಿದ್ದರೆ ಪ್ರಮಾಣವನ್ನು ಸಲ್ಲಿಸಬೇಕು.
ನೀವು ಈ ಯೋಜನೆಗೆ ಅರ್ಜಿ ಸಲ್ಲಿಸುವುದಾದರೆ ನಾಟಕ ಕುಡಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕೃತ ಜಾಲತಾಣವಾಗಿರುವಂತಹ ವೆಬ್ ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
For more details : https://kswdcl.karnataka.gov.in/