ಕರ್ನಾಟಕ ಸರ್ಕಾರದಿಂದ ರಾಜ್ಯದಲ್ಲಿ 35 ಸಾವಿರ ಹುದ್ದೆಗಳ ನೇಮಕಾತಿಗೆ ಅನುಮೋದನೆ : ಈ ಒಂದು ಬೃಹತ್ ನೇಮಕಾತಿಯ ಮಾಹಿತಿ ಇಲ್ಲಿದೆ 

 ಹೌದು ಸ್ನೇಹಿತರೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕರ್ನಾಟಕ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಶಿಕ್ಷಕರ ಕೊರತೆ ಹೆಚ್ಚಾಗುತ್ತಿದ್ದು ಇದನ್ನು ನೀಗಿಸಲು ಕರ್ನಾಟಕ ಸರ್ಕಾರವು ಇದೀಗ ಅತಿಥಿ ಬೋಧಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅನುಮೋದನೆಯನ್ನು ನೀಡಿದೆ. 

ಸದರಿ ಖಾಲಿ ಇರುವ 35000 ಅತಿಥಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕರ್ನಾಟಕ ಸರ್ಕಾರವು ಜಿಲ್ಲಾ ಮತ್ತು ತಾಲೂಕವಾರು ಖಾಲಿ ಹುದ್ದೆಗಳ  ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ.

 ಜ್ಞಾನ ಸಮೃದ್ಧಿ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು.

 ನಮ್ಮ ಈ ಚಾಲತಣದಲ್ಲಿ ನಾವು ದಿನನಿತ್ಯ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತಹ ಮಾಹಿತಿಗಳನ್ನು ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತಹ ಉಪಯುಕ್ತ ಮಾಹಿತಿಗಳನ್ನು ದಿನನಿತ್ಯ ನೀಡುತ್ತಿದ್ದು ಇವತ್ತಿನ ಈ ಒಂದು ಲೇಖನದಲ್ಲಿ ನಾವು ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವಂತ 35,000 ಶಿಕ್ಷಕರ ಹುದ್ದೆಗಳ ನೇಮಕಾತಿಯ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ.

 ಹೌದು ಸ್ನೇಹಿತರೆ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 35,000 ಶಿಕ್ಷಕರ ಕೊರತೆಯಿದ್ದು ಈ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಕಷ್ಟವಾಗುತ್ತಿದೆ ಆದ್ದರಿಂದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ರಾಜ್ಯದ್ಯಂತ ಒಟ್ಟು 35,000 ಅತಿಥಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅನುಮೋದನೆಯನ್ನು ನೀಡಿ ತಾಲೂಕು ಮತ್ತು ಜಿಲ್ಲಾವಾರು ಖಾಲಿ ಇರುವ ಒಟ್ಟು 35,000 ಹುದ್ದೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 

Karnataka Guest Teacher’s Recruitment 2024:

ಕರ್ನಾಟಕ ರಾಜ್ಯದಲ್ಲಿ 2024 25 ನೇ ಶೈಕ್ಷಣಿಕ ಸಾಲಿನ ವರ್ಷಕ್ಕೆ ಶಿಕ್ಷಕರ ಕೊರತೆಯನ್ನು ನೀಗಿಸಲು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲು ಸರ್ಕಾರವು ಈ ಒಂದು ಬೃಹತ್ ನಿರ್ಧಾರವನ್ನು ತೆಗೆದುಕೊಂಡು ಒಟ್ಟು ರಾಜ್ಯದ್ಯಂತ ಖಾಲಿ ಇರುವ 35,000 ಅತಿಥಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದೆ.

 2024 25 ನೇ ಶೈಕ್ಷಣಿಕ ಶಾಲೆಗಳು ಈಗಾಗಲೇ ಆರಂಭವಾಗಿದ್ದು, ಈ ಒಂದು ಅಂಶವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಕ್ಷೇತ್ರದಲ್ಲಿಯೇ ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಆರಂಭ ಮಾಡುತ್ತದೆ. 

ಇನ್ನೇನು ಕೆಲವೇ ದಿನಗಳಲ್ಲಿ ಅಥವಾ ತಿಂಗಳಿನಲ್ಲಿ ರಾಜ್ಯದ್ಯಂತ 35000 ಅತಿಥಿ ಶಿಕ್ಷಕರ ಹುದ್ದೆಗಳ ನೇಮಕಾತಿ ನಡೆಯಲಿದೆ ಎಂದು ಕರ್ನಾಟಕ ಸರ್ಕಾರವು ತಿಳಿಸಿದೆ.

 ಈ ಹುದ್ದೆಗಳ ನೇಮಕಾತಿಯು ಒಂದು ವರ್ಷದ ಅವಧಿಯವರೆಗೆ ಅಥವಾ ಖಾಯಂ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವವರೆಗೂ ಮಾತ್ರ. ಸದರಿ ಖಾಯಂ ಹುದ್ದೆಗಳ  ನೇಮಕಾತಿ ನಡೆಯದಿದ್ದರೆ ಅತಿಥಿ ಶಿಕ್ಷಕರ ಕೆಲಸವೂ ಮುಂದುವರೆಯುತ್ತದೆ. 

ಇನ್ನೇನು ಕೆಲವೇ ದಿನಗಳಲ್ಲಿ ಒಂದು ನೇಮಕಾತಿ ನಡೆಯುವ ಸಂಪೂರ್ಣ ಸಾಧ್ಯತೆಗಳಿದ್ದು ಇದರ ಬಗ್ಗೆ ಅರ್ಜಿ ಸಲ್ಲಿಸುವವರು ಈಗಿನಿಂದಲೇ ಗಮನಿಸಿ. 

 ಇದೇ ರೀತಿ ದಿನನಿತ್ಯ ಇಂತಹ ಉಪಯುಕ್ತ ಮಾಹಿತಿಗಳನ್ನು ನೀವು ಪಡೆದುಕೊಳ್ಳಲು ಬಯಸುವುದಾದರೆ ನಮ್ಮ ವ್ಯಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿರಿ ಹಾಗೂ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಈ ಒಂದು ಮಾಹಿತಿಯನ್ನು ಶೇರ್ ಮಾಡಿರಿ.

Leave a Comment