ವಿದ್ಯಾರ್ಥಿಗಳಿಗೆ ಭರ್ಜರಿ ರೂ.60,000 Scholarship : ಕಲಿಕಾ ಭಾಗ್ಯ ಯೋಜನೆಯಲ್ಲಿ ವಿದ್ಯಾರ್ಥಿವೇತನ ನೀಡಲು ನಿರ್ಧಾರ

ವಿದ್ಯಾರ್ಥಿಗಳಿಗೆ ಭರ್ಜರಿ ರೂ.60,000 Scholarship : ಕಲಿಕಾ ಭಾಗ್ಯ ಯೋಜನೆಯಲ್ಲಿ ವಿದ್ಯಾರ್ಥಿವೇತನ ನೀಡಲು ನಿರ್ಧಾರ

ಕರ್ನಾಟಕ ಸರ್ಕಾರದಿಂದ ಲಭ್ಯವಿರುವ ಕಲಿಕಾ ಯೋಜನೆ ಅಡಿಯಲ್ಲಿ 60,000 ರೂ. ವರೆಗಿನ ವಿದ್ಯಾರ್ಥಿ ವೇತನ ನೀಡಲು ನಿರ್ಧಾರ. ಇದರ ಬಗ್ಗೆ  ಪ್ರತಿಯೊಂದು ಮಾಹಿತಿಯನ್ನು ಈ ಲೆಕ್ಕದಲ್ಲಿ ನೀಡಿದ್ದೇವೆ ಈಗಲೇ ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ವಿದ್ಯಾರ್ಥಿಗಳಿಗೆ ಸಹಾಯವಾಗುವಂತ ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಲಿದ್ದೇವೆ. ಈ ಒಂದು ವಿದ್ಯಾರ್ಥಿ ವೇತನ ಯಾರಿಗೆ ಸಿಗಲಿದೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಯಾವ ಇಲಾಖೆಯಿಂದ ಈ ವಿದ್ಯಾರ್ಥಿ ವೇತನ ಸಿಗಲಿದೆ ಎಂಬುದರ ಮಾಹಿತಿ ನೀಡಿದ್ದೇವೆ. ಈಗಲೇ ತಿಳಿದುಕೊಳ್ಳಿ ಇದರ ಮಾಹಿತಿ.

Kalika bhagya scholarship : ಕರ್ನಾಟಕ ಸರ್ಕಾರ ಕಟ್ಟಡ ಹಾಗೂ ಇತರೆ ಕಾರ್ಮಿಕ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯವನ್ನು ಒದಗಿಸುವ ಸಂಬಂಧವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಇದೀಗ ಇಂಥವರಿಗೆ ಶಿಕ್ಷಣ ಒದಗಿಸಲು ಅಥವಾ ಶಿಕ್ಷಣ ಮುಂದುವರೆಸಲು ಆರ್ಥಿಕ ಸಹಾಯವನ್ನು ನೀಡುವ ಸಲುವಾಗಿ ಕಲಿಕ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ.
ಕಲಿಕಾ ಭಾಗ್ಯ ಯೋಜನೆಯಡಿಯಲ್ಲಿ ಕಟ್ಟಡ ಹಾಗೂ ಇತರೆ ಕಾರ್ಮಿಕರ ಮಕ್ಕಳಿಗೆ ನೆರವನ್ನು ಒದಗಿಸುತ್ತಿದೆ.

ಈ ಯೋಜನೆಯ ವಿದ್ಯಾರ್ಥಿ ವೇತನ ಪಡೆಯುವುದು ಹೇಗೆ ಮತ್ತು ಎಷ್ಟು ರೂಪಾಯಿ ಯಾರಿಗೆ ಸಿಗಲಿದೆ ಎಂಬುದನ್ನು ಈಗಲೇ ತಿಳಿಯಿರಿ.
ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಕಡ್ಡಾಯವಾಗಿ ನೊಂದಾಯಿತ ಕಾರ್ಮಿಕರ ಮಕ್ಕಳಾಗಿರಬೇಕು ಹಾಗೂ ಅದೇ ರೀತಿ ಕಾರ್ಮಿಕರು ಲೇಬರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ನೀವು ಕಾರ್ಮಿಕರಾಗಿದ್ದು, ಲೇಬರ್ ಕಾರ್ಡ್ ಹೊಂದಿರದೆ ಇದ್ದರೆ ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ನೀವು ಕಾರ್ಮಿಕರಾಗಿದ್ದು ಲೇಬರ್ ಕಾರ್ಡ್ ಬಂದಿರೋದೆ ಇದ್ದರೆ, ಈ ಕೂಡಲೇ ನಿಮ್ಮ ಹತ್ತಿರ ಇರುವ ಕಾರ್ಮಿಕ ಕಲ್ಯಾಣ ಇಲಾಖೆಯ ಭೇಟಿ ನೀಡಿ ಲೇಬರ್ ಕಾರ್ಡ್ ಮಾಡಿಸಿಕೊಳ್ಳಬಹುದು.

ಯಾರಿಗೆ ಎಷ್ಟು ರೂಪಾಯಿ ವಿದ್ಯಾರ್ಥಿವೇತನ ಸಿಗಲಿದೆ?

ಈ ಒಂದು ಕಲಿಕಾ ಭಾಗ್ಯ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿ ವೇತನವು ಈ ಕೆಳಗಿನಂತೆ ಸಿಗುತ್ತದೆ.
• 1 – 4ನೇ ತರಗತಿ – 5000 ರೂಪಾಯಿ
• 5 – 8ನೇ ತರಗತಿ – 8000 ರೂಪಾಯಿ
• 9 – 10ನೇ ತರಗತಿ – 12000 ರೂಪಾಯಿ
• 12 ನೇ ತರಗತಿ ಅಥವಾ puc – 15,000 ರೂಪಾಯಿ
• ಡಿಪ್ಲೋಮ & D. Ed- 20,000 ರೂಪಾಯಿ
• B. Ed – 35,000 ರೂಪಾಯಿ
• ಪದವಿ – 25,000 ರೂಪಾಯಿ
• ಸ್ನಾ. ಪದವಿ – 60,000 ರೂ.

ಕಲಿಕಾ ಭಾಗ್ಯ ಯೋಜನೆ ಅಡಿಯಲ್ಲಿ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿ ಪಡೆಯುತ್ತಿರುವವರೆಗೂ ಕೂಡ ಈ ಒಂದು ವಿದ್ಯಾರ್ಥಿ ವೇತನ ದೊರೆಯಲಿದ್ದು  ಅರರಿರುವ ಎಲ್ಲಾ ವಿದ್ಯಾರ್ಥಿಗಳು ಈ ಒಂದು ಭರ್ಜರಿ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಶಿಕ್ಷಣವನ್ನು ಮುಂದುವರೆಸಿ.  ಇದೇ ರೀತಿ ನಮ್ಮ ಈ ಜಾಲತಾಣದಲ್ಲಿ ನಾವು ವಿದ್ಯಾರ್ಥಿ ವೇತನ,  ಸರ್ಕಾರಿ ಯೋಜನೆ ಸೇರಿದಂತೆ ಎಲ್ಲಾ ರೀತಿಯ ಪ್ರತಿಯೊಂದು ಮಾಹಿತಿಯನ್ನು ಪ್ರತಿನಿತ್ಯ ನೀಡುತ್ತಿರುತ್ತೇವೆ. ಇದೇ ರೀತಿ ಹೆಚ್ಚಿನ ಯೋಜನೆಗಳ ಹಾಗೂ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ.

Leave a Comment