ಬೃಹತ್ ಉದ್ಯೋಗ ಮೇಳ : 500ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಉದ್ಯೋಗ ನೀಡಲಿವೆ. ನೋಂದಣಿ ಮಾಡಿಕೊಳ್ಳುವ ಡೈರೆಕ್ಟ್ ಲಿಂಕ್

ಬೃಹತ್ ಉದ್ಯೋಗ ಮೇಳ : 500ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಉದ್ಯೋಗ ನೀಡಲಿವೆ. ನೋಂದಣಿ ಮಾಡಿಕೊಳ್ಳುವ ಡೈರೆಕ್ಟ್ ಲಿಂಕ್

ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜಾಲತಾಣದಲ್ಲಿ ನಾವು ದಿನನಿತ್ಯ ರೈತರಿಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಉದ್ಯೋಗವನ್ನು ಹುಡುಕುತ್ತಿರುವಂತವರಿಗೆ ಸರ್ಕಾರದಿಂದ ಹಮ್ಮಿಕೊಳ್ಳಲಾಗುತ್ತಿರುವ ಬೃಹತ್ ಉದ್ಯೋಗ ಮೇಳದ ಬಗ್ಗೆ ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ. ಈ ಒಂದು ಉದ್ಯೋಗ ಮೇಳದ ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಂಡು ಈ ಒಂದು ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆಯಿರಿ.

ಕರ್ನಾಟಕ ರಾಜ್ಯ ಸರ್ಕಾರವು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳ 2024 ಹಮ್ಮಿಕೊಳ್ಳಲಾಗುತ್ತಿದ್ದು ಈ ಉದ್ಯೋಗ ಮೇಳವನ್ನು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಉದ್ಯೋಗವನ್ನು ನೋಡುತ್ತಿರುವ ಎಲ್ಲಾ ಅಭ್ಯರ್ಥಿಗಳು ಈ ಒಂದು ಸುವರ್ಣ ಅವಕಾಶವನ್ನು ಬಳಸಿಕೊಂಡು ಉದ್ಯೋಗ ಪಡೆಯಿರಿ.

ಈ ಉದ್ಯೋಗ ಮೇಳವು ಇದೇ ಫೆಬ್ರವರಿ 26 ಹಾಗು 27ರಂದು ಯುವ ಸಮೃದ್ಧಿ ಸಮ್ಮೇಳನ ರಾಜ್ಯಮಟ್ಟದ ಯುವ ಬೃಹತ್ ಉದ್ಯೋಗ ಮೇಳ 2024 ಹಮ್ಮಿಕೊಳ್ಳಲಾಗುತ್ತಿದೆ. ಈ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳು ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದು, ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಲು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾದಂತಹ ಡಾ. ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಈ ಬೃಹತ್ ಉದ್ಯೋಗ ಮೇಳದ ವಿಶೇಷತೆಗಳೇನು :
ಫೆಬ್ರುವರಿ 26 ಹಾಗು 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಈ ಒಂದು ಬೃಹತ್ ಉದ್ಯೋಗ ಮೇಳದಲ್ಲಿ ದೇಶದಲ್ಲಿರುವ ವಿವಿಧ 500ಕ್ಕೂ ಹೆಚ್ಚು ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವ ಸಾಧ್ಯತೆಗಳು ಹೆಚ್ಚಿವೆ. ಈ ಉದ್ಯೋಗ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 50,000ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಮತ್ತು 500ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವುದು ಪ್ರಮುಖ ಅಂಶವಾಗಿರುತ್ತದೆ. ಆದ್ದರಿಂದ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳು ತಡ ಮಾಡದೆ ಈ ಒಂದು ಉದ್ಯೋಗ ಮೇಳಕ್ಕೆ ನೊಂದಣಿ ಮಾಡಿಕೊಂಡು ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಈ ಉದ್ಯೋಗ ಮೇಳದಲ್ಲಿ ನೀವು ಭಾಗವಹಿಸಬಹುದು!
ಫೆಬ್ರುವರಿ 26 ಹಾಗೂ 27ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ಈ ಒಂದು ಬೃಹತ್ ಉದ್ಯೋಗ ಮೇಳದಲ್ಲಿ ಎಸ್ ಎಸ್ ಎಲ್ ಸಿ, ಪಿ ಯು ಸಿ, ಐಟಿಐ, ಡಿಪ್ಲೋಮಾ , ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮುಗಿಸಿದಂತಹ ಎಲ್ಲಾ ಅಭ್ಯರ್ಥಿಗಳು ಭಾಗವಹಿಸಬಹುದಾಗಿರುತ್ತದೆ. ಆದ್ದರಿಂದ ಇದು ಸಣ್ಣ ವಿದ್ಯಾರ್ಹತೆ ಹೊಂದಿದವರಿಗೆ ಕೂಡ ಬಹು ಉಪಯೋಗವಾಗಲಿದ್ದು ಪ್ರತಿಯೊಬ್ಬರೂ ಇದರ ಸದಪಯೋಗಪಡಿಸಿಕೊಳ್ಳಿ.

ನೋಂದಣಿ ಹೀಗೆ ಮಾಡಿ :
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಬೃಹತ್ ಉದ್ಯೋಗ ಮೇಳಕ್ಕೆ ನೋಂದಣಿ ಹೇಗೆ ಮಾಡಿಕೊಳ್ಳುವುದು ಎಂದು ನೋಡುವುದಾದರೆ ಅಭ್ಯರ್ಥಿಗಳು ಸರ್ಕಾರದ ಒಂದು ವೆಬ್ಸೈಟ್ಗೆ ಭೇಟಿ ನೀಡಿ ನೀವು ಸರಿಯಾದ ಮಾಹಿತಿಯನ್ನು ಭರ್ತಿ ಮಾಡುವುದರ ಮುಖಾಂತರ ಆನ್ಲೈನ್ ಮುಖಾಂತರ ನೀವು ಈ ಒಂದು ಬೃಹತ್ ಉದ್ಯೋಗ ಮೇಳಕ್ಕೆ ರಿಜಿಸ್ಟ್ರೇಷನ್ ಮಾಡಬಹುದಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಈ ಒಂದು ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಕೊಳ್ಳಲು ನಾವು ಕೆಳಗೆ ಲಿಂಕನ್ನು ನೀಡಿರುತ್ತೇವೆ. ಅಭ್ಯರ್ಥಿಗಳು ಆ ಲಿಂಕ್ ಅನ್ನು ಉಪಯೋಗಿಸಿಕೊಳ್ಳುವುದರ ಮುಖಾಂತರ ನೊಂದಣಿ ಮಾಡಿಕೊಂಡು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿರುತ್ತದೆ.

Registration link : http://udyogamele.silkllconnect.kaushalkar.com/candidcateRegistration

Leave a Comment