ISRO ಸಂಸ್ಥೆಯಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ…! ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರು ಈಗಲೇ ಅರ್ಜಿ ಸಲ್ಲಿಸಿ..! Apply now.

SSLC ಪಾಸಾದವರಿಗೆ ಇಸ್ರೋ ಸಂಸ್ಥೆಯಲ್ಲಿ 226 ಹುದ್ದೆಗಳ ನೇಮಕಾತಿ : 

56,100 ರೂ. ಸಂಬಳ
ISRO Recruitment 2024

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗ ಹುಡುಕುತ್ತಿರುವಂತಹ ಯುವ ಜನರಿಗೆ ಸಹಾಯವಾಗುವಂತಹ ಮಾಹಿತಿಯನ್ನು ಪ್ರತಿನಿತ್ಯ ನೀಡುತ್ತಿದ್ದು
ಇಂದಿನ ಈ ಲೇಖನದಲ್ಲಿ ನಾವು ದೇಶದ ಬಾಹ್ಯಾಕಾಶ ಇಲಾಖೆಯಾದ ಇಸ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

ISRO Recruitment 2024: 

ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಸಂಸ್ಥೆಯಲ್ಲಿ 10ನೇ ತರಗತಿ ಪಾಸಾದವರಿಂದ ಹಿಡಿದು ಪದವಿ ಮುಗಿಸಿದಂತಹ ಅಭ್ಯರ್ಥಿಗಳಿಗೂ ಕೂಡ ಅನೇಕ ಹುದ್ದೆಗಳು ಖಾಲಿ ಇದ್ದು ಎಲ್ಲಾ ಹುದ್ದೆಗಳ ನೇಮಕಾತಿಗಾಗಿ ಇದೀಗ ಇಸ್ರೋ ಸಂಸ್ಥೆಯು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಇವುಗಳು ಕೇಂದ್ರ ಸರ್ಕಾರಿ ಹುದ್ದೆಗಳಾಗಿದ್ದು ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಎಲ್ಲ ಅರ್ಹತೆಗಳನ್ನು ಈಗಲೇ ತಿಳಿದುಕೊಂಡು ನೀವು ಅರರಿ ಇದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಈ ಒಂದು ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ISRO Recruitment 2024:

ಇಸ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ನಾವು ನೋಡುವುದಾದರೆ, ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಸಂಸ್ಥೆಯಲ್ಲಿ ಒಟ್ಟಾರೆ 226 ಹುದ್ದೆಗಳು ಖಾಲಿ ಇರುತ್ತವೆ. ಈ ಹುದ್ದೆಗಳು ಕೇಂದ್ರ ಸರ್ಕಾರಿ ಹುದ್ದೆಗಳಾಗಿದ್ದು ಒಟ್ಟಾರೆ 226 ಹುದ್ದೆಗಳನ್ನು ಹುದ್ದೆಗಳವಾರು ಈ ಕೆಳಗಿನಂತೆ ವಿಂಗಡಿಸಲಾಗಿದ್ದು ಅಭ್ಯರ್ಥಿಗಳು ಪರಿಶೀಲಿಸಿ ಕೊಳ್ಳಬಹುದು.

ಹುದ್ದೆಗಳ ಪಟ್ಟಿ :

• ವಿಜ್ಞಾನಿ / ಇಂಜಿನಿಯರ್ – 05 ಹುದ್ದೆಗಳು
• ತಾಂತ್ರಿಕ ಸಹಾಯಕ ~55 ಹುದ್ದೆಗಳು
• ವೈಜ್ಞಾನಿಕ ಸಹಾಯಕ ~ 6 ಹುದ್ದೆಗಳು
• ಗ್ರಂಥಾಲಯ ಸಹಾಯಕ ~ 01 ಹುದ್ದೆಗಳು
• ಟೆಕ್ನಿಷಿಯನ್-ಬಿ ~126 ಹುದ್ದೆಗಳು
• ಡ್ರಾಫ್ಟ್‌ಮನ್-ಬಿ ~16 ಹುದ್ದೆಗಳು
• ಅಗ್ನಿಶಾಮಕ- 03 ಹುದ್ದೆಗಳು
• ಲಘು ವಾಹನ ಚಾಲಕ-‘ಎ’ ~6 ಹುದ್ದೆಗಳು
• ಹೆವಿ ವೆಹಿಕಲ್ ಡ್ರೈವರ್-‘ಎ’ ~2 ಹುದ್ದೆಗಳು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
ಇಸ್ರೋ ಸಂಸ್ಥೆಯಲ್ಲಿ ಖಾಲಿ ಇರುವಂತಹ 226 ಬೇರೆ ಬೇರೆ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಸ್ಥೆಯು ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಆದ್ದರಿಂದ ಅಭ್ಯರ್ಥಿಗಳು ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾವು ಕೆಳಗೆ ನೀಡಿರುವ ಇಸ್ರೋ ಸಂಸ್ಥೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಹುದ್ದೆಗಳ ನೇಮಕಾತಿಗೆ ಪ್ರಕಟಿಸಿದಂತಹ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲಾ ಅರ್ಹತೆಗಳನ್ನು ಪರಿಶೀಲಿಸಿಕೊಂಡು ನಂತರ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ನೀವು ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿದ್ದರೆ ತಡ ಮಾಡದೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಒಂದು ಸುವರ್ಣ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಬಹುದು.

ವಯೋಮಿತಿ Age limit :

ISRO Recruitment 2024 ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು  ಶೈಕ್ಷಣಿಕ ಅರ್ಹತೆಯೊಂದಿಗೆ ವಯೋಮಿತಿಯನ್ನು ನೇಮಕಾತಿಯ ನಿಯಮಗಳ ಪ್ರಕಾರ ಹೊಂದಿರುವುದು ಕೂಡ ಕಡ್ಡಾಯವಾಗಿರುತ್ತದೆ.

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷವಾಗಿರುತ್ತದೆ. ಈ ಒಂದು ವಯೋಮಿತಿಯಲ್ಲಿ ಹೊಂದಿರುವಂತಹ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಇಸ್ರೋ ಸಂಸ್ಥೆಯಲ್ಲಿ ಖಾಲಿ ಇರುವಂತಹ 226 ಹುದ್ದೆಗಳಿಗೆ ಸಂಸ್ಥೆಯು ಮೂರು ಹಂತದಲ್ಲಿ ನೇಮಕಾತಿ ಮಾಡಿಕೊಳ್ಳುತ್ತದೆ ಮೊದಲನೇ ಹಂತದಲ್ಲಿ ಅಭ್ಯರ್ಥಿಗಳ ಲಿಖಿತ ಪರೀಕ್ಷೆ ನಡೆಸಿ ನಂತರ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷಾ ನಡೆಸಿ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸಲು ಲಿಂಕ್ : www.isro.gov.in

Leave a Comment