ಹೊಸ ಪಡಿತರ ಚೀಟಿ ಮಾಡಿಸುವವರಿಗೆ ಸರ್ಕಾರದಿಂದ ಗೂಡ್ ನ್ಯೂಸ್ : 2.95 ಲಕ್ಷ ಹೊಸ ಪಡಿತರ ಚೀಟಿ ಅರ್ಜಿಗಳ ವಿಲೇವಾರಿಗೆ ಮಹೂರ್ತ ಫಿಕ್ಸ್

ಹೊಸ ಪಡಿತರ ಚೀಟಿ ಮಾಡಿಸುವವರಿಗೆ ಸರ್ಕಾರದಿಂದ ಗೂಡ್ ನ್ಯೂಸ್ :

2.95 ಲಕ್ಷ ಹೊಸ ಪಡಿತರ ಚೀಟಿ ಅರ್ಜಿಗಳ ವಿಲೇವಾರಿಗೆ ಮಹೂರ್ತ ಫಿಕ್ಸ್

ಕರ್ನಾಟಕ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ಆದ ನಂತರ ರೇಷನ್ ಕಾರ್ಡ್ ಗಳ ಪ್ರಾಮುಖ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇಂತಹ ಸಮಯದಲ್ಲಿ ರೇಷನ್ ಕಾರ್ಡ್ ಹೊಂದಿರದೆ ಇದ್ದವರು ಯಾವುದೇ ಸರ್ಕಾರಿ ಯೋಜನೆಗಳ ಲಾಭ ಪಡೆಯದೆ ಬೇಸತ್ತಿದ್ದಾರೆ.

ಇಂಥವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಇದರ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ, ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಕರ್ನಾಟಕ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ, ಇನ್ನು ಹಲವಾರು ಯೋಜನೆಗಳ ಲಾಭವನ್ನು ಪಡೆಯಲು ಅತಿ ಮುಖ್ಯವಾಗಿ ಬೇಕಾಗಿರುವುದು ಎಂದರೆ ಅದು ರೇಷನ್ ಕಾರ್ಡ್. ರೇಷನ್ ಕಾರ್ಡ್ ಹೊಂದಿರದೆ ಇದ್ದವರಿಗೆ, ಹೊಸ ರೇಷನ್ ಕಾರ್ಡ್ ಮಾಡಿಸುದು ಒಂದು ದೊಡ್ಡ ಚಿಂತೆ ಆಗಿತ್ತು ಇಂಥವರಿಗೆ ಸರ್ಕಾರವು ಅಧಿಕೃತ ಮಾಹಿತಿಯನ್ನು ನೀಡಿದೆ.

ಹೊಸ ರೇಷನ್ ಕಾರ್ಡಗಳ ಹಂಚಿಕೆ ಯಾವಾಗ?
ಕರ್ನಾಟಕ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ಆದ ನಂತರ ರೇಷನ್ ಕಾರ್ಡಿನ ಮೌಲ್ಯವು ಹೆಚ್ಚಾಗಿದ್ದು, ಹೆಚ್ಚಾಗಿ ಸರ್ಕಾರಿ ಯೋಜನೆಗಳನ್ನು ರೇಷನ್ ಕಾರ್ಡ್ ಆಧಾರವಾಗಿಟ್ಟುಕೊಂಡು ನೀಡಲಾಗುತ್ತಿದೆ. ಇಂತಹ ಸಮಯದಲ್ಲಿ ಅನೇಕ ಜನರಿಗೆ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ತಾಂತ್ರಿಕ ಸಮಸ್ಯೆಯಾಗುತ್ತಿತ್ತು. ಎಲ್ಲ ಸಮಸ್ಯೆಗಳನ್ನು ಅರ್ಥೈಸಿಕೊಂಡು ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ಅವರು ರಾಜ್ಯದ್ಯಂತ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಮಾರ್ಚ್ 31ರ ಒಳಗಾಗಿ ಪರಿಶೀಲನೆಯನ್ನು ನಡೆಸಿ ಎಪ್ರಿಲ್ ಒಂದರಂದು ವಿತರಣೆ ಮಾಡುತ್ತೇವೆ ಎಂದು ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಷ್ಟು ಹೊಸ ಕಾರ್ಡ್ ವಿತರಣೆ?
ಈ ಒಂದು ಮಾಹಿತಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವರಾದಂತಹ ಮುನಿಯಪ್ಪನವರು ಹೇಳಿದ ಪ್ರಕಾರ ರಾಜ್ಯದಲ್ಲಿ 2.95 ಲಕ್ಷ ಕಾರ್ಡ್ ಗಳು ವಿತರಿಸದೆ ಬಾಕಿ ಉಳಿಸಿಕೊಂಡಿದೆ.
ಇವುಗಳಲ್ಲಿ ನಾವು 57,000 ಹೊಸ ಕಾಡುಗಳನ್ನು ವಿತರಿಸಿದ್ದೇವೆ ಮತ್ತು ಆರೋಗ್ಯ ಚಿಕಿತ್ಸೆಯನ್ನು ಪಡೆಯಲು ಅರ್ಜಿ ಸಲ್ಲಿಸಿದವರಿಗೆ ತಕ್ಷಣವೇ ಕಾಡು ವಿತರಿಸಲು ಸೂಚನೆ ನೀಡಲಾಗಿದೆ ಎಂದು ಎಚ್ ಮುನಿಯಪ್ಪನವರ ಹೇಳಿದ್ದಾರೆ. ಅದೇ ರೀತಿ ತುರ್ತು ಕಾರಣಕ್ಕೆ ಸಲ್ಲಿಸಿದವರಿಗೆ 744 ಜನರಿಗೆ ಬಿಪಿಎಲ್ ಕಾರ್ಡ್ ನೀಡಿದ್ದೇವೆ ಎಂದು ಹೇಳಿದರು.

ಮುಂದಿನ ತಿಂಗಳು ಮಾರ್ಚ್ 31ರ ಒಳಗಾಗಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿರುವಂತಹ ಎಲ್ಲಾ ಅರ್ಹ ಫಲಾನುಭವಿಗಳ ಅರ್ಜಿಯನ್ನು ಶೀಘ್ರವೇ ಪರಿಶೀಲನೆ ನಡೆಸಿ, ಏಪ್ರಿಲ್ 1ನೇ ತಾರೀಕಿನಂದು ವಿಲೇವಾರಿ ಮಾಡಲಿರುವ ಆಹಾರ ಇಲಾಖೆಯು ರಾಜ್ಯದ ಜನತೆಗೆ ಶುಭಸುದ್ದಿ ನೀಡಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ನಿಮಗೆ ಗೊತ್ತಿರುವ ಹಾಗೆ ರೇಷನ್ ಕಾರ್ಡ್ ಅತಿ ಮುಖ್ಯವಾಗಿ ಸರ್ಕಾರಿ ಯೋಜನೆಗಳನ್ನು ಮತ್ತು ಇತರೆ ಸೌಲಭ್ಯಗಳನ್ನು ಪಡೆಯಲು ಅತಿ ಮುಖ್ಯವಾಗಿ ಬೇಕಾಗಿರುತ್ತದೆ.

ಒಂದು ವೇಳೆ ನೀವು ಹೊಸ ರೇಷನ್ ಕಾರ್ಡ್ ಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದರೆ, ನಿಮ್ಮ ಅರ್ಜಿಯನ್ನು ಪರಿಶೀಲನೆ ನಡೆಸಿ ನೀವು ಅರ್ಜಿ ಸಲ್ಲಿಸಿರುವ ಎಲ್ಲಾ ಮಾಹಿತಿಯು ಸರಿಯಾಗಿದ್ದರೆ ನಿಮಗೆ ಏಪ್ರಿಲ್ ಒಂದನೇ ತಾರೀಕಿನಂದು ಹೊಸ ರೇಷನ್ ಕಾರ್ಡ್ ನಿಮಗೆ ಸಿಗಲಿದೆ.
ಇದೇ ರೀತಿ ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಉದ್ಯೋಗದ ಮಾಹಿತಿ ಸೇರಿದಂತೆ ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಗಳನ್ನು ಪಡೆಯಲು ಈಗಲೇ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.

Leave a Comment