ಸರ್ಕಾರಿ ಹುದ್ದೆ ನಿರೀಕ್ಷೆಯಲ್ಲಿರುವವರಿಗೆ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ಜರಿ ನೇಮಕಾತಿ : ತಡಮಾಡದೇ ಬೇಗನೆ ಅರ್ಜಿ ಸಲ್ಲಿಸಿ

ಸರ್ಕಾರಿ ಹುದ್ದೆ ನಿರೀಕ್ಷೆಯಲ್ಲಿರುವವರಿಗೆ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ಜರಿ ನೇಮಕಾತಿ : ತಡಮಾಡದೇ ಬೇಗನೆ ಅರ್ಜಿ ಸಲ್ಲಿಸಿ

ಸರ್ಕಾರಿ ಹುದ್ದೆ ನಿರೀಕ್ಷೆಯಲ್ಲಿರುವವರಿಗೆ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ನೇಮಕಾತಿಗಾಗಿ ಕಾಯುತ್ತಿರುವ ಸ್ಪರ್ದಾತ್ನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಆಗಿದ್ದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ ಇಂದಿನ ಈ ಲೇಖನದಲ್ಲಿ ನಾವು ಹಾಸನ ಜಿಲ್ಲೆಯ ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುವ ಖಾಲಿ ಹುದ್ದೆಗಳ ನೇಮಕಾತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೆಕ್ಕದಲ್ಲಿ ನಿಮಗೆ ತಿಳಿಸಲಿದ್ದೇವೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿಯನ್ನು ಕೊನೆಯವರೆಗೂ ಓದಿ ಸಂಪೂರ್ಣವಾಗಿ ತಿಳಿದುಕೊಳ್ಳಿ.

ಹಾಸನ ಜಿಲ್ಲಾ ಗ್ರಾಮ ಪಂಚಾಯತಿ ನೇಮಕಾತಿ : ಖಾಲಿ ಇರುವ ಹುದ್ದೆಗಳ ವಿವರ

ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 14 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳು ಖಾಲಿ ಇರುತ್ತವೆ.

ಅರ್ಹತೆ : ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಇರುವಂತಹ 14 ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳು ಮೇಲ್ವಿಚಾರಕರು ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 12ನೇ ತರಗತಿ ಪಾಸ್ ಆಗಿರಬೇಕು ಮತ್ತು ಅದೇ ರೀತಿ ಲೈಬ್ರರಿ ಸೈನ್ಸ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್ ಮುಗಿಸಿರಬೇಕು. ಈ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ.

ವಯೋಮಿತಿ ಅರ್ಹತೆ ಏನಿರಬೇಕು?

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ವಯೋಮಿತಿ ಏಷ್ಟಿರಬೇಕು ಎಂದು ನೋಡುವುದಾದರೆ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಟ ವಯಸ್ಸು ಏಷ್ಟಿರಬೇಕು ಎಂದು ನೋಡುವುದಾದರೆ 45 ವರ್ಷ ಇರಬೇಕು. ಇಂತಹ ಅಭ್ಯರ್ಥಿಗಳು ಅರ್ಹತೆಯನ್ನು ಹೊಂದಿದವರು ಈಗಲೇ ಬೇಗನೆ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ವಿಧಾನ :


ಹಾಸನ ಜಿಲ್ಲಾ ಗ್ರಾಮ ಪಂಚಾಯತಿ ಅಡಿಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಹಾಸನ ಜಿಲ್ಲೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://hassan.nic.in/

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ಹಾಸನ ಜಿಲ್ಲೆಯಲ್ಲಿ ಖಾಲಿ ಇರುವಂತಹ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 22.02.2024 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22.03.2024

Leave a Comment