ನಮಸ್ಕಾರಗಳು ಸ್ನೇಹಿತರೆ
ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತ ಮಾಹಿತಿ ಏನು ಅಂದರೆ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರಕಾರವು ನೀಡಿರುವ ಗೃಹಲಕ್ಷ್ಮಿ ಯೋಜನೆಯ ಮೂಲಕ ಈಗ ಮಹಿಳೆಯರು ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.
ಅದೇ ರೀತಿಯಾಗಿ ಈಗ 14 ಕಂತಿನ ಹಣವನ್ನು ಕಂತಿನ ಹಣವ ಕೂಡ ಪಡೆದುಕೊಂಡಿದ್ದಾರೆ. ಆದರೆ ಈಗ 14ನೇ ಕಂತಿನ ಹಣ ಕೆಲವೊಂದಷ್ಟು ಮಹಿಳೆಯರ ಖಾತೆಗಳಿಗೆ ಜಮಾ ಆಗಿದೆ. ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗಳಿಗೆ ಜಮಾ ಆಗಿಲ್ಲ.
ಅಂತವರು ಜಮಾ ಆಗಿದೆ ಇಲ್ಲವೇ ಎಂಬುದನ್ನು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಈಗ ಈ ಒಂದು ಲೇಖನದಲ್ಲಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಸ್ನೇಹಿತರೆ ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆ 14ನೇ ಕಂತಿನ ಹಣವನ್ನು ಎಲ್ಲಾ ಮಹಿಳೆಯರ ಖಾತೆಗಳಿಗೂ ಈಗಾಗಲೇ ಜಮಾ ಆಗಿದೆ. ನಿಮ್ಮ ಖಾತೆಗೂ ಕೂಡ ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ನೀವು ಯಾವ ರೀತಿಯಾಗಿ ಚೆಕ್ ಮಾಡಿ ಕೊಳ್ಳಬೇಕೆಂಬುದರ ಬಗ್ಗೆ ಈಗ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಾವು ನೀಡಿದ್ದೇವೆ. ಆದ ಕಾರಣ ನೀವು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿಕೊಂಡು ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.
ಅದೇ ರೀತಿಯಾಗಿ ಈ ಹಿಂದೆ ಪೆಂಡಿಂಗ್ ಇರುವಂತಹ ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡ ಈಗ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈಗ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಆದ ಕಾರಣ ಇನ್ನು ಕೆಲವೇ ದಿನಗಳಲ್ಲಿ ಪೆಂಡಿಂಗ್ ಇರುವಂತಹ ಹಣಗಳು ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಗೃಹಲಕ್ಷ್ಮಿ ಹಣವನ್ನು ಚೆಕ್ ಮಾಡುವುದು ಹೇಗೆ ?
ನೀವೇನಾದ್ರೂ ಗೃಹಲಕ್ಷ್ಮಿ ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ನಾವು ಈ ಕೆಳಗೆ ತಿಳಿಸಿರುವ ಪ್ರಕಾರ ನೀವು ಹಣವನ್ನು ಚೆಕ್ ಮಾಡಿಕೊಳ್ಳಬಹುದು.
• ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಆಪ್ ಗೆ ಹೋಗಿ DBT ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
• ಆನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
• ಆನಂತರ ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಇರುವಂತ ಮೊಬೈಲ್ ನಂಬರಿಗೆ ಒಂದು ಒಟಿಪಿ ಬರುತ್ತದೆ. ನೀವು ಆ ಓಟಿಪಿಯನ್ನು ಖಾಲಿ ಇರುವ ಜಾಗದಲ್ಲಿ ಎಂಟರ್ ಮಾಡಿಕೊಳ್ಳಬೇಕಾಗುತ್ತದೆ.
• ತದನಂತರ ನೀವು ಆ ಒಟಿಪಿಯನ್ನು ಎಂಟರ್ ಮಾಡಿದ ನಂತರ ವೇರಿಫೈ ಎಂಬುದರ ಮೇಲೆ ಕ್ಲಿಕ್ ಮಾಡಿಕೊಂಡು ಮುಂದೆ ಹೋಗಬೇಕಾಗುತ್ತದೆ.
• ಆನಂತರ ಅದರಲ್ಲಿ ನೀವು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. ಓಕೆ ಎಂಬುದರ ಮೇಲೆ ಕ್ಲಿಕ್ ಮಾಡಿಕೊಂಡು ಮುಂದೆವರಿಯಬೇಕಾಗುತ್ತದೆ.
• ತದನಂತರ ನೀವು ನಿಮ್ಮ ನೆನಪಿನಲ್ಲಿ ಉಳಿಯುವಂತ ನಾಲ್ಕು ಅಂಕಿಯ MPIN ನೀವು ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ.
• ಆಮೇಲೆ ನೀವು ಬೆನಿಫಿಷಿಯರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡು ಈ ಹಿಂದೆ ನೀವು ಕ್ರಿಯೇಟ್ ಮಾಡಿದಂತಹ MPIN ಅಲ್ಲಿ ಎಂಟರ್ ಮಾಡಿಕೊಳ್ಳಬೇಕಾಗುತ್ತದೆ.
• ಆನಂತರ ನೀವು ನಿಮ್ಮಗೆ ಅಲ್ಲಿ ಪೇಮೆಂಟ್ ಎಂಬ ಆಯ್ಕೆ ಕಾಣುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
• ಆನಂತರ ಅದರಲ್ಲಿ ನಿಮಗೆ ಗೃಹಲಕ್ಷ್ಮಿ ಸ್ಟೇಟಸ್ ಎಂಬ ಆಯ್ಕೆಯು ದೊರೆಯುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
• ತದನಂತರ ಅದರಲ್ಲಿ ನಿಮಗೆ ಇದುವರೆಗೂ ಎಷ್ಟು ಕಂತಿನ ಹಣವು ಬಂದಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.