ದನದ ಶೆಡ್ ನಿರ್ಮಾಣ ಮಾಡಲು ಸರ್ಕಾರದಿಂದ ಪಡೆದುಕೊಳ್ಳಿ ಒಂದು ಲಕ್ಷ ಸಹಾಯಧನ..! Apply Now..!

ಜ್ಞಾನ ಸಮೃದ್ಧಿ ಹೊಸ ಲೇಖನಕ್ಕೆ ಸ್ವಾಗತ…

ಪ್ರಸ್ತುತ ಲೇಖನದಲ್ಲಿ ದನದ ಕೊಟ್ಟಿಗೆ ನಿರ್ಮಾಣ ಮಾಡಲು ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳುವುದು ಹೇಗೆ ತಿಳಿಯೋಣ ಬನ್ನಿ

ಈ ವರ್ಷ ಕರ್ನಾಟಕ ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿರುವುದು ಎಲ್ಲರಿಗೂ ಗೊತ್ತಿದೆ ಸರ್ಕಾರವೂ ಕೂಡ ಈ ಪರಿಸ್ಥಿತಿ ನಿಭಾಯಿಸಲು ಹಲವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಹಾಳಾಗಿರುವುದರಿಂದ ಕೃಷಿ ಅವಲಂಬಿತ ಕಾರ್ಮಿಕರು ಮತ್ತು ಕೃಷಿಕರ ಕುಟುಂಬ ಜೀವನೋಪಾರಕ್ಕಾಗಿ ಬೇರೆ ಕಡೆಗೆ ವಲಸೆ ಹೋಗುವ ಪರಿಸ್ಥಿತಿ ಬಂದಿದೆ.

ಇದನ್ನು ತಪ್ಪಿಸುವ ಸಲುವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸದ ದಿನವನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು ಕೇಂದ್ರದಿಂದ ಸಿಕ್ಕ ಸಕಾರಾತ್ಮಕ ಸ್ಪಂದನೆಯಿಂದಾಗಿ ಬರಗಾಲ ಪಿಡಿತ ಪ್ರದೇಶಗಳಲ್ಲಿ 100 ಉದ್ಯೋಗ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಹಳ್ಳಿಗಾಡಿನ ಜನರಿಗೆ ಸಾಕಷ್ಟು ಅನುಕೂಲವಾಗಿದೆ.

ಬರಗಾಲದ ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಜನರು ನರೇಗಾ (MGNREGA) ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದು ಈ ಕಾರಣಕ್ಕಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ಉದ್ಯೋಗ ಖಾತರಿ ನಡಿಗೆ ಸುಸ್ಥಿರ ಅಭಿವೃದ್ಧಿ ಎಡೆಗೆ ಎನ್ನುವ ಅಭಿಯಾನ ಕೂಡ ನಡೆಸಲಾಗುತ್ತಿದೆ.


ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ 2024-25ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸುತ್ತಿದ್ದು, ತೋಟಗಾರಿಕೆ ಇಲಾಖೆ ವತಿಯಿಂದ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ (Facility of personal works) ಕೂಡ ಕಲ್ಪಿಸಿಕೊಡಲಾಗಿದೆ.
ಗ್ರಾಮೀಣ ಪ್ರದೇಶದ ಆಸಕ್ತ ಜನತೆ ತಮ್ಮ ತಮ್ಮ ಗ್ರಾಮ ಪಂಚಾಯಿತಿಯಲ್ಲಿ (Gram Panchayat) ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ಈ ಅವಕಾಶದಲ್ಲಿ ಗ್ರಾಮೀಣ ಭಾಗದ ಒಂದು ಅರ್ಹ ಕುಟುಂಬವು ಜೀವಿತಾವಧಿಯಲ್ಲಿ 5 ಲಕ್ಷ ರೂಪಾಯಿಗಳ (5 lakh rupees) ವರಗೆ ವೈಯಕ್ತಿಕ ಕಾಮಗಾರಿ ಪಡೆಯಲು ಸಾಧ್ಯವಿದೆ. ಇದರ ಕುರಿತ ಸಂಪೂರ್ಣ ವಿವರ ಹೀಗಿದೆ ನೋಡಿ.

ರೈತರು (Farmers) ಹಾಗೂ ಭೂರಹಿತ ಕೃಷಿ ಕೂಲಿಕಾರರು (Landless agricultural labourers) ಹಸು, ಕುರಿ, ಕೋಳಿ, ಹಂದಿ ಸಾಕಾಣಿಕೆ ಮೂಲಕ ಸ್ವಯಂ ಉದ್ಯೋಗ (Self Employed) ಮಾಡಲಿಚ್ಛಿಸುವವರು ಶೆಡ್ ನಿರ್ಮಾಣದಂತಹ ವೈಯಕ್ತಿಕ ಕಾಮಗಾರಿ, ರೈತರು ಕೃಷಿ ಹೊಂಡ (agricultural pit), ಕ್ಷೇತ್ರ ಬದು, ತೋಟಗಾರಿಕೆ ಬೆಳೆ (Horticulture crop), ರೇಷ್ಮೆ ಹಾಗೂ ಅರಣ್ಯ ಬೆಳೆಗಳು (Forest crops) ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿಗೆ ನೆರವನ್ನು ಪಡೆಯಬಹುದು.

ಇದರ ಜೊತೆ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ ವೈಯಕ್ತಿಕ ಕಾಮಗಾರಿಗಳಿಗಾಗಿ ಸೌಲಭ್ಯ ಪಡೆಯಲು ಆಸಕ್ತಿಯುಳ್ಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದೇ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಈ ಕಾಮಗಾರಿಕಳಿಗೆ ಉದ್ಯೋಗವಕಾಶ ಕೂಡ ಸಿಗಲಿದೆ.

ವೈಯಕ್ತಿಕ ಕಾಮಗಾರಿ ಹಾಗೂ ಅವುಗಳಿಗೆ ಲಭ್ಯವಾಗುವ ಅಂದಾಜು ಮೊತ್ತ:-
(estimated amount)
* ಕೃಷಿ ಹೊಂಡ – 15x15x3 ಮೀಟರ್ ರೂ.1,49,000, 12x12x3 ಮೀಟರ್ ರೂ.92,000, 10x10x3 ಮೀಟರ್ ರೂ.63,000, 9x9x3 ಮೀಟರ್ ರೂ.52,000
* ತೆರೆದ ಬಾವಿ – ರೂ. 1,50,000
* ಕೊಳವೆ ಬಾವಿ ಮರುಪೂರಣ – ರೂ.27,000
* ಜಮೀನು ಸಮತಟ್ಟು – ರೂ.10,000
* ಕಂದಕ ಬದು ನಿರ್ಮಾಣ – ರೂ.35,000 ದಿಂದ ರೂ.84,000
* ಬಚ್ಚಲು ಗುಂಡಿ – ರೂ.11,000
* ಪೌಷ್ಠಿಕ ತೋಟ – ರೂ.4,915
* ದನದ ದೊಡ್ಡಿ – ರೂ.57,000
* ಕುರಿ ದೊಡ್ಡಿ – ರೂ.70,000
* ಮೇಕೆ ಶೆಡ್ – ರೂ.70,000
* ಹಂದಿ ಶೆಡ್ – ರೂ.87,000
* ಕೋಳಿ ಶೆಡ್ – ರೂ.60,000
* ಈರುಳ್ಳಿ ಉಗ್ರಾಣ – ರೂ.37,138
* ತೋಟಗಾರಿಕೆ ಇಲಾಖೆ – ರೂ.35,000
* ಎರೆ ಹುಳು ಗೊಬ್ಬರ ತೊಟ್ಟಿ – ರೂ.20,000

ಈ ನೆರವು ಪಡೆಯುವುದು ವಿಧಾನ:-

* ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (Employment Guarantee Scheme) ಈ ಎಲ್ಲ ಸಹಾಯಧನ ಪಡೆಯಲು ಮುಖ್ಯವಾಗಿ ರೈತರು ಜಾಬ್ ಕಾರ್ಡ್ (Job card) ಹೊಂದಿರಬೇಕು.
* ಜಾಬ್ ಕಾರ್ಡ್ ಪಡೆಯಲು ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಫಾರಂ-1 ಭರ್ತಿ ಮಾಡಿ, ಕುಟುಂಬದಲ್ಲಿ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸದಸ್ಯರ ಇತ್ತೀಚಿನ ಭಾವಚಿತ್ರ, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ (Bank Account Number), ಆಧಾರ್ ಸಂಖ್ಯೆ (Aadhaar Number) ಇವುಗಳ ಜೆರಾಕ್ಸ್ ಕೂಡ ಅರ್ಜಿ ಜೊತೆ ಕೊಡಬೇಕು


ಯಾರು ಅರ್ಹರು:-
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ
* ಅಲೆಮಾರಿ ಬುಡಕಟ್ಟುಗಳು
* ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು
* ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು
* ಮಹಿಳಾ ಪ್ರಧಾನ ಕುಟುಂಬಗಳು
* ವಿಕಲಚೇತನ ಕುಟುಂಬಗಳು
* ಭೂ ಸುಧಾರಣಾ ಫಲಾನುಭವಿಗಳು
* ವಸತಿ ಯೋಜನೆಯ ಫಲಾನುಭವಿಗಳು

Leave a Comment