ಹೈನುಗಾರಿಕೆ ಮಾಡಲು ಸರ್ಕಾರವೇ ಕೊಡುತ್ತೆ ಹಣ..! ಮೂರು ಲಕ್ಷದಿಂದ 5 ಲಕ್ಷದವರೆಗೂ ಹಣ ಪಡೆದುಕೊಳ್ಳುವುದು ಹೇಗೆ? ಈಗಲೇ ತಿಳಿಯಿರಿ..! Dairy Farming

ಪಶು ಸಂಗೋಪನೆ ಮಾಡಲು ಸರ್ಕಾರದಿಂದ ಬಡ್ಡಿ ರಹಿತ ಸಾಲ..!

ಕರುನಾಡ ಜನತೆಗೆ ನಮಸ್ಕಾರಗಳು..!

ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರಸ್ತುತ ಈ ನಮ್ಮ ಜ್ಞಾನ ಸಮೃದ್ಧಿ ವೆಬ್ಸೈಟ್ನಲ್ಲಿ ರೈತರಿಗೆ ಬೇಕಾಗಿರುವಂತಹ ಮಾಹಿತಿಯನ್ನು ಅತಿ ಸುಲಭವಾಗಿ ರೈತರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದು ಇದೀಗ ರೈತರಿಗೆ ಸಹಾಯವಾಗಲೆಂದು ಕೆಎಂಎಫ್ ಮುಖಾಂತರ ಹಾಗೂ ಸರ್ಕಾರದಿಂದ ದೊರೆಯುವಂತಹ ಹೈನುಗಾರಿಕೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ..!

ಈಗಾಗಲೇ ನಿಮಗೆ ತಿಳಿದಿರುವಂತೆ ಸರ್ಕಾರದಿಂದ ರೈತರಿಗಾಗಿ 10 ಹಲವಾರು ಯೋಜನೆಗಳು ಬರುತ್ತಿದ್ದು ಇದೀಗ ಹೈನುಗಾರಿಕೆ ಮಾಡಲು ರೈತರಿಗೆ ಬಡ್ಡಿ ರೈತ ಸಾಲ ರಾಜ್ಯ ಸರ್ಕಾರವು ನೀಡುತ್ತಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

ಕೃಷಿಯ ಜೊತೆ ಜೊತೆಗೆ ಹೈನುಗಾರಿಕೆಯೂ ಕೂಡ ಒಂದು ಲಾಭದಾಯಕ ವಾದಂತಹ ಕೆಲಸವಾಗಿದ್ದು ಹಲವಾರು ರೈತರು ಕೃಷಿಯ ಜೊತೆಗೆ ಈ ಹೈನುಗಾರಿಕೆಯನ್ನು ಸಹ ಮಾಡುತ್ತಿದ್ದು ಇನ್ನಿತರ ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಸಾಲದ ರೂಪದಲ್ಲಿ ಸ್ವಲ್ಪ ಹಣವನ್ನು ರೈತರಿಗೆ ಹಸುಗಳನ್ನು ಕೊಂಡುಕೊಳ್ಳಲು ಸರ್ಕಾರವು ನೀಡುತ್ತಿದ್ದು ಹೇಗೆ ಸಾಲವನ್ನು ಪಡೆದುಕೊಳ್ಳಬೇಕು ಇಲ್ಲಿದೆ ನೋಡಿ ಮಾಹಿತಿ…!

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನ ಅಡಿಯಲ್ಲಿ ಸಾಲ! (Pashu Kisan credit card -KCC)

ಈ ಕಾರ್ಡನ್ನು ವಿಶೇಷವಾಗಿ ರೈತರಿಗಾಗಿಯೇ ಸರ್ಕಾರ ಬಿಡುಗಡೆ ಮಾಡಿದ್ದು ಈ ಕಾರ್ಡ್ ಇರುವ ರೈತರು (farmers ) ಸರ್ಕಾರದಿಂದ ಸುಲಭವಾಗಿ ಸಾಲ ಸೌಲಭ್ಯವನ್ನು ಅತಿ ಕಡಿಮೆ ಬಡ್ಡಿ ದರದಲ್ಲಿ ಕೂಡ ಪಡೆದುಕೊಳ್ಳಲು ಸಾಧ್ಯವಿದೆ.

ಹೈನುಗಾರಿಕೆ ಮಾತ್ರವಲ್ಲದೆ ಮೀನುಗಾರಿಕೆ ಹಾಗೂ ಪಶು ಸಂಗೋಪನೆಯನ್ನು ಕೂಡ ರೈತರ ಕೃಷಿಗೆ ಪೂರಕ ಅಂತ ಗುರುತಿಸಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಈ ಕಸುಬುಗಳಿಗೂ ಕೂಡ ವಿಸ್ತರಣೆ ಮಾಡಲಾಗಿದೆ.

ರೈತರು ಕೆಲವು ಉಪಕಸುಬು ಆಯ್ದುಕೊಂಡರೆ ಅಂತಹ ಆಯ್ದ ಕಸಬುಗಳಿಗೆ ಸರ್ಕಾರದಿಂದ ಸಾಲ ಸೌಲಭ್ಯವೂ (loan facility) ಸಿಗುತ್ತದೆ, ಕಡಿಮೆ ಬಡ್ಡಿ (less interest) ದರದಲ್ಲಿ ಸುಮಾರು 3 ಲಕ್ಷ ರೂಪಾಯಿಗಳವರೆಗೆ ಸಾಲ (Loan) ಪಡೆದುಕೊಂಡು ಹೈನುಗಾರಿಕೆ, ಮೀನುಗಾರಿಕೆ (fishing), ಪಶು ಸಂಗೋಪನೆ ಮೊದಲಾದ ಉಪಕಸಬುಗಳನ್ನು ಕೂಡ ಮಾಡಬಹುದು.


2019- 20ನೇ ಸಾಲಿನಲ್ಲಿ ದೇಶದಲ್ಲಿ ವಾಸಿಸುವ ರೈತರ ಒಳ್ಳೆಯ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಯನ್ನು ಕೂಡ ಆರಂಭಿಸಲಾಯಿತು. ಈ ಯೋಜನೆಯ ಅಡಿಯಲ್ಲಿ ಹಸು ಸಾಕಾಣಿಕೆ, ಎಮ್ಮೆ ಸಾಕಾಣಿಕೆ, ಕುರಿ ಕೋಳಿ ಸಾಕಾಣಿಕೆ, ಮೀನುಗಾರಿಕೆ ಹೀಗೆ ಬೇರೆ ಬೇರೆ ರೀತಿಯ ಕಸುಬುಗಳಿಗೆ ಸಾಲ ಸೌಲಭ್ಯವನ್ನ ಒದಗಿಸಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ರೆ ಯಾವುದೇ ಗ್ಯಾರಂಟಿ ಇಲ್ಲದೆ ರೈತರು ಪಶು ಸಂಗೋಪನೆಗೆ ಸಾಲದ ಸೌಲಭ್ಯವನ್ನ ಪಡೆಯಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಸಿಗಲಿದೆ ಸಾಲ!

ಕೇಂದ್ರ ಸರ್ಕಾರ (central government), ಹರಿಯಾಣ (Haryana) ರಾಜ್ಯದಲ್ಲಿ ಮೊದಲ ಬಾರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಆರಂಭಿಸಿತು ಇದು ಈಗ ದೇಶದ ಪ್ರತಿಯೊಂದು ರಾಜ್ಯಕ್ಕೂ ಇದನ್ನ ವಿಸ್ತರಿಸಲಾಗಿದೆ.

ರೈತರು 2-3 ಲಕ್ಷ ರೂಪಾಯಿಗಳನ್ನು ಈ ಕಾರ್ಡ್ ಅಡಿಯಲ್ಲಿ ಕೂಡ ಸಾಲವಾಗಿ ಪಡೆಯಬಹುದು. ಕಾರ್ಡ್ ಯೋಜನೆಯ ಅಡಿಯಲ್ಲಿ ಅರ್ಜಿದಾರರು 4% ದರದಲ್ಲಿ ಸಾಲವನ್ನ ಪಡೆಯಬಹುದು 3% ನಷ್ಟು ಸರ್ಕಾರ ಬ್ಯಾಂಕರ್ ಗಳಿಗೆ ಬಡ್ಡಿಯನ್ನ ಒದಗಿಸುತ್ತದೆ.

ಪಶುಸಂಗೋಪನೆಗೆ ಸಿಗುವ ಸಾಲದ ಮೊತ್ತ ಎಷ್ಟು?

• ಎಮ್ಮೆಯ ಸಾಕಾಣಿಕೆಗೆ – 60,249 ರೂಪಾಯಿ

• ಹಸುವಿನ ಸಾಕಾಣಿಕೆಗೆ – 40,783 ರೂಪಾಯಿ

• ಮೊಟ್ಟೆಯನ್ನ ಇಡುವ ಕೋಳಿಗೆ ಪ್ರತಿ ಕೋಳಿಗೆ 720 ರೂಪಾಯಿ

• ಕುರಿಗಳು ಅಥವಾ ಮೇಕೆಗಳ ಸಾಕಾಣಿಕೆ – 4063 ರೂಪಾಯಿ ಪ್ರತಿ ಮೇಕೆಗೆ

1.6 ಲಕ್ಷ ರೂಪಾಯಿಗಳವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲದ ಸೌಲಭ್ಯ ಒದಗಿಸಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಅಧಿಕೃತ ಜಾಲತಾಣಕ್ಕೆ ಹೋಗಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ ಅಥವಾ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ ಸಾಲಕ್ಕೆ ಅರ್ಜಿಯನ್ನ ಸಲ್ಲಿಸಬಹುದು ಅಂತ ಹೇಳಬಹುದು.

1.6 ಲಕ್ಷ ರೂಪಾಯಿಗಳವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲದ ಸೌಲಭ್ಯ ಒದಗಿಸಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಅಧಿಕೃತ ಜಾಲತಾಣಕ್ಕೆ ಹೋಗಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ ಅಥವಾ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ ಸಾಲಕ್ಕೆ ಅರ್ಜಿಯನ್ನ ಸಲ್ಲಿಸಬಹುದು ಅಂತ ಹೇಳಬಹುದು.

Leave a Comment