ಸರ್ಕಾರದಿಂದ 29ರೂ. ಗೆ ಕೆಜಿ ಅಕ್ಕಿ ಖರೀದಿಸಲು ಮುಗಿಬಿದ್ದ ಜನತೆ :ಯಾವುದು ಈ ಅಕ್ಕಿ? ಹೇಗೆ ಖರೀದಿಸಬೇಕು? ಕಡಿಮೆ ಬೆಲೆಯಲ್ಲಿ ಉತ್ತಮವಾದ ಅಕ್ಕಿ ಈಗಲೇ ಖರೀದಿ ಮಾಡಿ

ಸರ್ಕಾರದಿಂದ 29ರೂ. ಗೆ ಕೆಜಿ ಅಕ್ಕಿ ಖರೀದಿಸಲು ಮುಗಿಬಿದ್ದ ಜನತೆ :


ಯಾವುದು ಈ ಅಕ್ಕಿ? ಹೇಗೆ ಖರೀದಿಸಬೇಕು?

ಕೇಂದ್ರ ಸರ್ಕಾರದಿಂದ ಬಡ ಜನತೆಗೆ ಕಡಿಮೆ ದರದಲ್ಲಿ ಅಕ್ಕಿ ನೀಡಲು ಸರ್ಕಾರವು ಹೊಸ ಯೋಜನೆಯನ್ನು ಕೈಗೊಂಡಿದ್ದು ಈ ಯೋಜನೆಯ ಅಡಿಯಲ್ಲಿ ಬಡ ಜನರಿಗೆ ಕೇವಲ 29 ರೂಪಾಯಿಗೆ ಬೆಲೆಯಲ್ಲಿ ಒಂದು ಕೆಜಿ ಅಕ್ಕಿ ನೀಡುತ್ತಿದೆ. ಹಾಗಾದರೆ ಅಕ್ಕಿಯನ್ನು ಪಡೆಯದು ಹೇಗೆ?

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ ಇಂದಿನ ಈ ಲೇಖನದಲ್ಲಿ ನಾವು ಕೇಂದ್ರ ಸರ್ಕಾರದಿಂದ ದೇಶದ ಜನತೆಗೆ ಅತಿ ಕಡಿಮೆ ದರದಲ್ಲಿ ಅಕ್ಕಿಯನ್ನು ನೀಡಲು ಯೋಜನೆ ಕೈಗೊಂಡಿದ್ದು ಈ ಯೋಜನೆಯಲ್ಲಿರುವ ಈ ಅಕ್ಕಿಯನ್ನು ಪಡೆಯುವುದು ಹೇಗೆ ಮತ್ತು ಯಾವುದು ಈ ಅಕ್ಕಿ ಎಂಬುದನ್ನು ಈಗಲೇ ತಿಳಿದುಕೊಳ್ಳಿ.

ಕೇಂದ್ರ ಸರ್ಕಾರದ ಭಾರತೀಯ ಆಹಾರ ನಿಗಮವು ( Food Corporation of India )  ಎರಡು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಈ ದೇಶದ ಬಡ ಜನರಿಗೆ ಕೈಕಟುಕುವ ದರದಲ್ಲಿ ಅಕ್ಕಿಯನ್ನು ನೀಡಲು ಹೊಸ ವ್ಯವಸ್ತೆ ಕೈಗೊಂಡಿದೆ. ಆ ಎರಡು ಸಹಕಾರ ಸಂಸ್ಥೆಗಳು ಯಾವುವು ಎಂದು ನೋಡುವುದಾದರೆ
ಮೊದಲನೆಯದು ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡ್ರೇಶನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು  ನ್ಯಾಷನಲ್ ಕೋ ಆಪರೇಟಿವ್ ಕಂಜೂಮರ್ಸ್ ಫೆಡರೇಶನ್ ಆಫ್ ಇಂಡಿಯಾ. ಈ ಎರಡು ಸಹಕಾರಿ ಸಂಸ್ಥೆಗಳ ಸಹಯೋಗದಲ್ಲಿ ಭಾರತೀಯ ಆಹಾರ ನಿಗಮವು ಈ ಒಂದು ಹೊಸ ಅಕ್ಕಿ ಉತ್ಪನ್ನವನ್ನು ಜಾರಿಗೆ ಮಾಡಿದೆ.

ಈ ಬ್ರಾಂಡ್ ನ ಹೆಸರೇನು?
ಭಾರತೀಯ ಆಹಾರ ನಿಗಮವು ಎರಡು ಸಹಕಾರಿ ಸಂಸ್ಥೆಗಳಲ್ಲಿ ಸಹಯೋಗದಲ್ಲಿ ಜಾರಿಗೆ ತಂದಿರುವ ಈ ಅಕ್ಕಿಯ ಬ್ರಾಂಡನ ಹೆಸರು
” ಭಾರತ ಅಕ್ಕಿ ” ಅಥವಾ ” bharath rice “. ಈ ಒಂದು ಹೊಸ ಉತ್ಪನ್ನದ ಅಕ್ಕಿಯನ್ನು ಕೇವಲ 29 ರೂಪಾಯಿ ಕೆಜಿಗೆ ಮಾರಾಟ ಮಾಡುತ್ತಿದ್ದು ಇದು ಬಡವರಿಗೆ ಕೈಗಟಕುವ ದರದಲ್ಲಿ ಸಿಗುತ್ತಿದೆ. ಇಂದಿನ ಈ ದುಬಾರಿ ದುನಿಯಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಹಾರ ಉತ್ಪನ್ನಗಳ ದರದಲ್ಲಿ, ಕೇಂದ್ರ ಸರ್ಕಾರವು ಬಡ ಜನತೆಗೆ ಕಡಿಮೆ ದರದಲ್ಲಿ  ಆಹಾರ ಉತ್ಪನ್ನಗಳಾದ ಅಕ್ಕಿ ಗೋಧಿ ಮತ್ತು ಇತರೆ ದಿನಸಿ ದವಸಗಳನ್ನು ಕಡಿಮೆ ದರದಲ್ಲಿ ನೀಡುವ ಹೊಸ ಕ್ರಮವನ್ನು ಕೈಗೊಂಡಿದೆ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಈ ಅಕ್ಕಿಯು 5 ಕೆಜಿ ಮತ್ತು 10 ಕೆ.ಜಿ ಬ್ಯಾಗ್ ಗಳಲ್ಲಿ ಮಾರಾಟವಾಗುತ್ತಿದ್ದು, ಕೇಂದ್ರ ಸರ್ಕಾರದಿಂದ ಈ ಒಂದು ಅಕ್ಕಿಗೆ ಕೆಜಿಗೆ 29 ನಿಗದಿಪಡಿಸಲಾಗಿದೆ. ಈ ಒಂದು ಬ್ರಾಂಡ್ ನ ಅಕ್ಕಿಯನ್ನು ಸದ್ಯಕ್ಕೆ ನಮ್ಮ ರಾಜ್ಯದ ಕೋಲಾರ ಜಿಲ್ಲೆಯಲ್ಲಿ ಮಾರಾಟಕ್ಕೆ ಚಾಲನೆ ನೀಡಿದ್ದು ಶೀಘ್ರದಲ್ಲಿ ಎಲ್ಲಾ ಜಿಲ್ಲೆಗಳಿಗೂ ಇದನ್ನು ವ್ಯವಸ್ಥೆ ಮಾಡುವುದಿದೆ.

ಭಾರತ್ ಅಕ್ಕಿ ಜೊತೆಗೆ ಇತರೆ ಆಹಾರ ಉತ್ಪನ್ನಗಳು  :

ಕೇವಲ ಅಕ್ಕಿ ಮಾತ್ರವಲ್ಲದೆ ಇತರೆ ದಿನಸಿ ದವಸಗಳನ್ನು ಕೂಡ ಇದರೊಂದಿಗೆ ಮಾರಾಟ ಮಾಡಲು ಸರ್ಕಾರವ ಕ್ರಮ ಕೈಗೊಳ್ಳುತ್ತಿದ್ದು ಕಡಲೆ ಬೆಳೆ ಸೇರಿದಂತೆ ಗೋಧಿ ಹಾಗೂ ಇತರೆ ಉತ್ಪನ್ನಗಳನ್ನು ಜನರಿಗೆ ನೀಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದ್ದು ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ.

ಅಕ್ಕಿ ಖರೀದಿಸುವುದು ಹೇಗೆ ?
ಭಾರತೀಯ ಆಹಾರ ನಿಗಮವು, ಎರಡು ಸಂಸ್ಥೆಗಳ ಸಹಯೋಗದಲ್ಲಿ ಈ ಒಂದು ಉತ್ಪನ್ನವನ್ನು ಜಾರಿಗೆ ತಂದಿದ್ದು ಈ ಸಂಸ್ಥೆಗಳು ತನ್ನ ಮಳಿಗೆಗಳಲ್ಲಿ ಅಥವಾ ಔಟ್ಲೆಟ್ ಗಳಲ್ಲಿ ಒಂದು ಅಕ್ಕಿಯನ್ನು ಮಾರಾಟ ಮಾಡುತ್ತಿವೆ. ಅದೇ ರೀತಿ ಈ ಅಕ್ಕಿಯನ್ನು ನಾವು ಆನ್ಲೈನ್ ಮುಖಾಂತರವ ಖರೀದಿಸಬಹುದಾಗಿದ್ದು ಬಡ ಜನರಿಗೆ ಇದು ಒಂದು ಅತ್ಯುತ್ತಮವಾದ ವ್ಯವಸ್ಥೆಯಾಗಿದೆ.

Leave a Comment