ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ..! ಈಗಲೇ ಅರ್ಜಿ ಸಲ್ಲಿಸಿ..! BPL Card Apply Now..!

ration card apply date 2024:- 

ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನಿಯ ಮೂಲಕ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರವು ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಹಾಗಾಗಿ ಇಷ್ಟು ದಿನ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು

ಕಾಯುತ್ತಿದ್ದವರಿಗೆ ಇದು ಭರ್ಜರಿ ಗುಡ್ ನ್ಯೂಸ್ ಏಕೆಂದರೆ ಈಗ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು ಈ ದಾಖಲಾತಿ ಇದ್ದರೆ ಮಾತ್ರ ಅರ್ಜಿ ಸಲ್ಲಿಸಲು ಬರುತ್ತದೆ ಹಾಗಾಗಿ ಈ ಒಂದು ಲೇಖನ ಮೂಲಕ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವಂತ ಕಡ್ಡಾಯ ದಾಖಲಾತಿಗಳು ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಹೊಸ ರೇಷನ್ ಕಾರ್ಡ್ (ration card apply date 2024)..?


ಸ್ನೇಹಿತರೆ ಇವತ್ತಿನ ದಿನ ಹೊಸ ರೇಷನ್ ಕಾರ್ಡ್ ಅಥವಾ ಹೊಸ ಬಿಪಿಎಲ್ ರೇಷನ್ ಕಾರ್ಡಿಗೆ ಸಾಕಷ್ಟು ಜನರು ಅರ್ಜಿ ಹಾಕಲು ಕಾಯುತ್ತಿದ್ದಾರೆ ಏಕೆಂದರೆ ಇವತ್ತು ನಮ್ಮ ಕರ್ನಾಟಕದಲ್ಲಿ bpl ರೇಷನ್ ಕಾರ್ಡ್ ಹೊಂದಿದಂತವರು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ಅಕ್ಕಿ ಹಾಗೂ ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ಹಾಗೂ ಇವನಿಗೆ ಯೋಜನೆಯ ಮೂಲಕ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3000 ಮತ್ತು ಉಚಿತ ಬಸ್ಸು ಇತರ ಹಲವಾರು ಯೋಜನೆಗಳ ಲಾಭವನ್ನು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ಪಡೆಯಬಹುದಾಗಿದೆ


ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಈ ದಾಖಲಾತಿ ಬೇಕು (ration card apply date 2024)..?


ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ನಮ್ಮ ರಾಜ್ಯ ಸರ್ಕಾರವು ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಹಾಗಾಗಿ ನೀವು ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನಿಮ್ಮ ಹತ್ತಿರ ಇ-ಶ್ರಮ್ ಕಾರ್ಡ್ ಇರಬೇಕು ಅಂದರೆ ಮಾತ್ರ ನಿಮಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಹಾಗಾಗಿ ನಿಮ್ಮ ಹತ್ತಿರ ಈ ಶ್ರಮ ಕಾರ್ಡ್ ಇಲ್ಲದೆ ಇದ್ದರೆ ಈ ರೀತಿ ಅರ್ಜಿ ಸಲ್ಲಿಸಿ


ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಇರುವ ಅರ್ಹತೆಗಳು (ration card apply date 2024)..?


• ಸ್ನೇಹಿತರೆ ನೀವು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬಯಸುತ್ತಿದ್ದರೆ ನಿಮ್ಮ ಕುಟುಂಬದ ವಾರ್ಷಿಕ ಆದಾಯ 1,20,000 ಗಿಂತ ಮೀರಬಾರದು
• ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬಯಸುವಂತಹ ಅರ್ಜಿದಾರರ ಕುಟುಂಬದ ಜಮೀನು ಅಥವಾ ಆಸ್ತಿ 5 ಹೆಕ್ಟರ್ ಗಿಂತ ಕಡಿಮೆ ಇರಬೇಕು
• ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬಯಸುವಂತಹ ಅರ್ಜಿದಾರರು ನಗರ ಪ್ರದೇಶ ಅಥವಾ ಗ್ರಾಮೀಣ ಪ್ರದೇಶದಲ್ಲಿ 100 ಚದರ್ ಅಡಿಗಿಂತ ಕಡಿಮೆ ಪ್ಲಾಟ್ ಹೊಂದಿರಬೇಕು ಹಾಗೂ ಗುಡಿಸಲು ಅಥವಾ ಪತ್ರಸ್ ಮನೆ ಹೊಂದಿರಬೇಕು


• ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸರಕಾರಿ ನೌಕರಿದಾರರಿಗೆ ಹಾಗೂ ಕುಟುಂಬದಲ್ಲಿ ಉನ್ನತ ಹುದ್ದೆಯಲ್ಲಿ ಇರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
• ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬಯಸುವ ಕುಟುಂಬದಲ್ಲಿ ವೈಟ್ ಬೋರ್ಡ್ ಕಾರು ಅಥವಾ ಟ್ಯಾಕ್ಟರ್ ಹಾಗೂ ಇತರ ಹೆವಿ ವಾಹನಗಳು ಹೊಂದಿರಬಾರದು


• ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬಯಸುವ ಕುಟುಂಬಗಳು ಆದಾಯ ತೆರಿಗೆ ಅಥವಾ GST ಪಾವತಿಸುವವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ


ಅರ್ಜಿ ಸಲ್ಲಿಸಲು ಯಾವಾಗ ಪ್ರಾರಂಭ (ration card apply date 2024)..?


ಸ್ನೇಹಿತರೆ ನೀವು ಅಸಂಘಟಿತ ವಲಯದ ಕೂಲಿ ಕಾರ್ಮಿಕರಾಗಿದ್ದರೆ ಹಾಗೂ ನಿಮ್ಮ ಹತ್ತಿರ ಈ ಶ್ರಮ ಕಾರ್ಡ್ ಇದ್ದರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಅರ್ಜಿ ಸಲ್ಲಿಸಲು 03 ನವೆಂಬರ್ 2024 ರಿಂದ ಪ್ರಾರಂಭವಾಗಿದ್ದು ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 6:00 ವರೆಗೆ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಅಥವಾ ಇತರ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಮತ್ತು ಕೊನೆಯ ದಿನಾಂಕ ನಿಗದಿ ಮಾಡಿಲ್ಲ ಆದ್ದರಿಂದ ಬೇಗ ಅರ್ಜಿ ಸಲ್ಲಿಸಿ ಏಕೆಂದರೆ ಕೊನೆಯ ದಿನಾಂಕ ನಿಗದಿ ಮಾಡಬಹುದು


ಅರ್ಜಿ ಸಲ್ಲಿಸಬೇಕಾಗುವ ದಾಖಲಾತಿಗಳು (ration card apply date 2024)..?


• ಜಾತಿ ಪ್ರಮಾಣ ಪತ್ರ
• ಆದಾಯ ಪ್ರಮಾಣ ಪತ್ರ
• ಇ-ಶ್ರಮ ಕಾರ್ಡ್
• ಜನನ ಪ್ರಮಾಣ ಪತ್ರ (6- ವರ್ಷದ ಒಳಗಿನ ಮಕ್ಕಳಿಗೆ)
• ಆಧಾರ್ ಕಾರ್ಡ್
• ಇತ್ತೀಚಿನ ಭಾವಚಿತ್ರ
• ಇತರ ಅಗತ್ಯ ದಾಖಲಾತಿಗಳು


ಅರ್ಜಿ ಸಲ್ಲಿಸುವುದು ಹೇಗೆ (ration card apply date 2024)..?


ಸ್ನೇಹಿತರೆ ಹೊಸ ಬಿಪಿಎಲ್ ರೇಷನ್ ಕಾರ್ಡಿಗೆ ನೀವು ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು ಮೊದಲನೆಯದಾಗಿ ನಮ್ಮ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಹೊಸ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗಡೆ ನೀಡಿದ್ದೇವೆ ಅಥವಾ ನಿಮಗೆ ಅರ್ಜಿ ಸಲ್ಲಿಸಲು ಆಗದೆ ಇದ್ದಲ್ಲಿ ನೀವು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿ

Leave a Comment