ಈ ವರ್ಷದ ಫೆಬ್ರವರಿ ತಿಂಗಳ 29 ದಿನಗಳಲ್ಲಿ, ಭರ್ಜರಿ 11 ದಿನಗಳು ಬ್ಯಾಂಕ್ ಬಂದ್ ಆಗಿರಲಿವೆ!
ಏನು ಇದು ಹೊಸ ಸುದ್ದಿ ಈಗಲೇ ತಿಳಿಯಿರಿ
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ ಸಾರ್ವಜನಿಕರಿಗೆ ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಹಾಯವಾಗುವಂತಹ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.
ಹಂಚಿಕೊಳ್ಳುತ್ತಿರುವ ಪ್ರತಿಯೊಂದು ಮಾಹಿತಿ ಎಲ್ಲರಿಗೂ ಉಪಯುಕ್ತವಾಗುತ್ತಿವೆ ಎಂದು ಭಾವಿಸಿದ್ದು ಇಂದಿನ ಈ ಲೇಖನದಲ್ಲಿ ನಾವು ಫೆಬ್ರವರಿ ತಿಂಗಳಲ್ಲಿ ಖಾಲಿ ಇರುವ 11 ದಿನಗಳ ಬ್ಯಾಂಕುಗಳ ರಜಾ ದಿನಗಳ ಪಟ್ಟಿಯನ್ನು ನಾವು ಇಲ್ಲಿ ನೀಡಲಿದ್ದೇವೆ. ಈ ಲೇಖನವನ್ನು ಓದುತ್ತಿರುವಂತವರು ಕೊನೆಯವರೆಗೂ ಓದಿ ಎಲ್ಲರಿಗೂ ಶೇರ್ ಮಾಡಿ.
ಏನಿದು ಹೊಸ ಸುದ್ದಿ?
ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ನಂತರ ಹಳ್ಳಿಯ ಜನರ ಬ್ಯಾಂಕ್ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಈಗಂತೂ ಬ್ಯಾಂಕಿನಲ್ಲಿ ಯಾವ ದಿನ ನೋಡಿದರೂ ಸಹ ಅನೇಕ ಜನರು ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಏಕೆಂದರೆ ಗೃಹಲಕ್ಷ್ಮಿ, ಅನ್ನ ಭಾಗ್ಯ ಯೋಜನೆಗಳಾದಂತಹ ಹಣವನ್ನು ಬ್ಯಾಂಕ್ ಗಳ ಖಾತೆಗೆ ಜಮಾ ಮಾಡುತ್ತಿದ್ದರಿಂದ ಅವುಗಳನ್ನು ವಿಥ್ ಡ್ರಾ ಮಾಡಿಕೊಳ್ಳಲು ಜನರ ಬ್ಯಾಂಕಿಗೆ ಬೇಟಿ ನೀಡುತ್ತಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಬ್ಯಾಂಕಿ ಹೋಗಲು ನೀವು ಒಂದು ವೇಳೆ ಯೋಜನೆಯನ್ನು ಹಾಕಿಕೊಂಡಿದ್ದರೆ, ಈಗಲೇ ಬ್ಯಾಂಕುಗಳಿಗೆ ರಜೆ ಫೆಬ್ರವರಿ ತಿಂಗಳಲ್ಲಿ ಯಾವ ದಿನಗಳಂದು ರಜೆಗಳಿವೆ ಎಂದು ಈಗಲೇ ತಿಳಿದುಕೊಂಡು ನಿಮ್ಮ ಯೋಜನೆಯನ್ನು ಮಾಡಿಕೊಳ್ಳಿ.
ನಿಮಗೆ ಗೊತ್ತಿರುವ ಹಾಗೆ ಬ್ಯಾಂಕುಗಳ ಎರಡನೇ ಶನಿವಾರ ಮತ್ತು ಭಾನುವಾರ ಹಾಗೂ ಧಾರ್ಮಿಕ ಸರ್ಕಾರಿ ರಜೆಗಳಲ್ಲಿ ಬ್ಯಾಂಕುಗಳ ಮುಚ್ಚಿರುತ್ತವೆ. ಅದೇ ರೀತಿ ಈ ಫೆಬ್ರವರಿ ತಿಂಗಳಲ್ಲಿ ಭಾನುವಾರ ಎರಡನೇ ಶನಿವಾರ ಮತ್ತು ಧಾರ್ಮಿಕ ರಜೆಗಳನ್ನು ಸೇರಿಸಿ ಒಟ್ಟಾರೆ 11 ರಜೆಗಳು ಇರಲಿವೆ.
ಇಂತಹ ಈ ರಜಾ ದಿನಗಳಲ್ಲಿ ಬ್ಯಾಂಕುಗಳು ಮುಚ್ಚಿರುವ ಕಾರಣ ಜನರು ಫೆಬ್ರವರಿ ತಿಂಗಳಲ್ಲಿ ಯಾವುದೇ ರೀತಿಯ ದೊಡ್ಡ ಮೊತ್ತದ ವ್ಯವಹಾರಗಳನ್ನು ನಡೆಸುದಿದ್ದರೆ, ಮುಂಚಿತವಾಗಿ ಯೋಜನೆಯನ್ನು ಹಾಕಿಕೊಂಡು ನಿಮ್ಮ ವ್ಯವಹಾರವನ್ನು ನಡೆಸಲು ಸಾಧ್ಯವಾಗುತ್ತದೆ.
ಬ್ಯಾಂಕ್ ರಜಾ ದಿನಗಳಂದು ಡಿಜಿಟಲ್ ವ್ಯವಹಾರಗಳು ಕೂಡ ಬಂದ್ ಇರುತ್ತವೆಯಾ?
ಈ ಬರುವ ಫೆಬ್ರವರಿ ತಿಂಗಳಲ್ಲಿ ಒಟ್ಟಾರೆ 11 ರಜೆಗಳಿದ್ದು ಈ ದಿನಗಳನ್ನು ಬ್ಯಾಂಕ್ ಮುಚ್ಚಿರಲಿವೆ. ಇದರಿಂದ ಡಿಜಿಟಲ್ ವ್ಯವಹಾರಗಳಿಗೂ ಕೂಡ ಪೆಟ್ಟು ಬೀಳಲಿದಿಯಾ?.
ಇಲ್ಲ ಸ್ನೇಹಿತರೆ, ಬ್ಯಾಂಕ್ ಬಂದಿರುವ ದಿನಗಳಲ್ಲಿ ಡಿಜಿಟಲ್ ವ್ಯವಹಾರಗಳು ಸಾಮಾನ್ಯವಾಗಿ ದಿನನಿತ್ಯದಂತೆ ನಡೆಯುತ್ತಿರುತ್ತವೆ. ಡಿಜಿಟಲ್ ವ್ಯವಹಾರ ಮಾಡಲು ಯಾವುದೇ ರೀತಿಯ ನಿರ್ಬಂಧ ಗಳಿರುವುದಿಲ್ಲ.
ರಜಾ ದಿನಗಳಲ್ಲಿಯೂ ಕೂಡ ನೀವು ಗೂಗಲ್ ಪೇ ಫೋನ್ ಪೇ ಪೇಟಿಎಂ ಬಳಸಿ ವಿವರಗಳನ್ನು ನಡೆಸಬಹುದಾಗಿದ್ದು, ಒಂದು ವೇಳೆ ನೀವು ನಗದು ರೂಪದ ವ್ಯವಹಾರಗಳಲ್ಲಿ ದೊಡ್ಡ ಮೊತ್ತದ ವ್ಯವಹಾರ ಮಾಡುವ ಯೋಜನೆಯನ್ನು ಫೆಬ್ರವರಿ ತಿಂಗಳಲ್ಲಿ ಹೊಂದಿದ್ದರೆ ಈಗಲೇ ನಾವು ಕೆಳಗೆ ನೀಡಿರುವ ರಜಾ ದಿನಗಳ ಪಟ್ಟಿಯನ್ನು ಪರಿಶೀಲಿಸಿ ನಿಮ್ಮ ಯೋಜನೆಯನ್ನು ಹಾಕಿಕೊಳ್ಳಿ.
ರಜೆಗಳಿರುವ ದಿನಾಂಕಗಳ ಪಟ್ಟಿ ಮತ್ತು ಕಾರಣ :
ಫೆಬ್ರುವರಿ ತಿಂಗಳಿನಲ್ಲಿ 11 ದಿನ ರಜೆ ಇರುವ ಪಟ್ಟಿ ಮತ್ತು ಅವುಗಳ ಕಾರಣವನ್ನು ನಾವು ಈ ಕೆಳಗಿನಂತೆ ನೀಡಿದ್ದೇವೆ.
ಪ್ರಜೆಗಳಿರುವ ದಿನಾಂಕಗಳು – ಫೆಬ್ರವರಿ 4, 10, 11, 14, 15, 18, 19, 20, 24, 25 ಮತ್ತು 26ನೇ ತಾರೀಕು.
ಫೆಬ್ರವರಿ 4ನೇ ತಾರೀಕು ಭಾನುವಾರ – ಈ ತಾರಿಕ್ ನಂದು ಭಾನುವಾರ ಇದ್ದು, ದೇಶಾದ್ಯಂತ ಈ ದಿನದಂದು ಬ್ಯಾಂಕುಗಳು ರಜೆ ಇರಲಿವೆ.
ಫೆಬ್ರವರಿ 10ನೇ ತಾರೀಕು ಶನಿವಾರ – ತಿಂಗಳಿನ ಈ ದಿನದಂದು ಎರಡನೇ ಶನಿವಾರ ಆಗಿರುವುದರಿಂದ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ಸಾಮಾನ್ಯ ರಜಾ ಇರಲಿದೆ.
ಫೆಬ್ರವರಿ 11ನೇ ತಾರೀಕು ಭಾನುವಾರ – ಭಾನುವಾರ ಇರುವುದರಿಂದ ಈ ದಿನದಂದು ದೇಶಾದ್ಯಂತ ಎಲ್ಲಾ ಬ್ಯಾಂಕುಗಳು
ಬಂದ್ ಆಗಿರುತ್ತವೆ.
ಫೆಬ್ರವರಿ 14ನೇ ತಾರೀಕು ಬುಧವಾರ – ಈ ದಿನದಂದು ಒರಿಸ್ಸಾ ತಿಪುರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬಸಂತ್ ಪಂಚಮಿ ಅಥವಾ ಸರಸ್ವತಿ ಪೂಜೆ ಇರುವ ಕಾರಣದಿಂದಾಗಿ ಈ ಮೂರು ರಾಜ್ಯಗಳಲ್ಲಿಯೂ ಕೂಡ ಬ್ಯಾಂಕುಗಳು ರಜೆ ಇರಲಿವೆ.
ಫೆಬ್ರವರಿ 15ನೇ ತಾರೀಕು ಗುರುವಾರ –
ಈ ದಿನದಂದು ಮಣಿಪುರ ರಾಜ್ಯದಲ್ಲಿ Lui-Ngai-Ni ಎಂಬ ಹಬ್ಬದ ಪ್ರಯುಕ್ತ ಮಣಿಪುರ ರಾಜ್ಯದ ಎಲ್ಲಾ ಬ್ಯಾಂಕುಗಳು ರಜೆ ಇರುತ್ತದೆ.
ಫೆಬ್ರವರಿ 18ನೇ ತಾರೀಕು, ಭಾನುವಾರ- ಈ ದಿನ ಭಾನುವಾರ ಇರುವ ಕಾರಣದಿಂದಾಗಿ ದೇಶಾದ್ಯಂತ ಇರುವ ಎಲ್ಲಾ ಬ್ಯಾಂಕುಗಳು ಮುಚ್ಚಿರುತ್ತವೆ.
ಫೆಬ್ರವರಿ 19ನೇ ತಾರೀಕು, ಸೋಮವಾರ – ಈ ದಿನದಂದು ಶ್ರೇಷ್ಠ ವ್ಯಕ್ತಿ ಛತ್ರಪತಿ ಮಹಾರಾಜ ರವರ ಜಯಂತಿ ಇರುವ ಕಾರಣದಿಂದಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಎಲ್ಲಾ ಬ್ಯಾಂಕುಗಳು ರಜೆ ಇರುತ್ತದೆ.
ಫೆಬ್ರವರಿ 20ನೇ ತಾರೀಕು, ಮಂಗಳವಾರ – ಈ ದಿನದಂದು ಮಿಜೋರಾ ಮತ್ತು ಅರುಣಾಚಲ ಪ್ರದೇಶ ರಾಜ್ಯದಲ್ಲಿ ಕಾನ್ಸ್ಟಿಟ್ಯೂಷನ್ ದಿನ ಎಂದು ಆಚರಿಸುವುದಾಗಿ ಎರಡು ರಾಜ್ಯಗಳಲ್ಲಿಯೂ ರಜೆ ಇರುವುದರಿಂದ ಬ್ಯಾಂಕುಗಳು ಮುಚ್ಚಿರುತ್ತವೆ.
ಫೆಬ್ರವರಿ 24ನೇ ತಾರೀಕು, ಶನಿವಾರ – ಈ ದಿನದಂದು ನಾಲ್ಕನೇ ಶನಿವಾರ ಆಗಿದ್ದು, ನಿಮಗೆ ಗೊತ್ತಿರುವ ಹಾಗೆ ತಿಂಗಳ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಬ್ಯಾಂಕುಗಳು ರಜೆ ಇರುತ್ತದೆ.
ಫೆಬ್ರವರಿ 25ನೇ ತಾರೀಕು, ಭಾನುವಾರ- ಈ ದಿನದಂದು ಭಾನುವಾರ ಆಗಿರುವುದರಿಂದ ದೇಶಾದ್ಯಂತ ಇರುವ ಎಲ್ಲ ಬ್ಯಾಂಕುಗಳು ಮುಚ್ಚಿರುತ್ತವೆ.
ಫೆಬ್ರವರಿ 26ನೇ ತಾರೀಕು, ಸೋಮವಾರ – ಈ ದಿನದಂದು ಅರುಣಾಚಲ ಪ್ರದೇಶ ರಾಜ್ಯದಲ್ಲಿ ನ್ಯೋಕಮ್ ಹಬ್ಬ ಇರುವ ಕಾರಣದಿಂದಾಗಿ ಅರುಣಾಚಲ ಪ್ರದೇಶದ ಎಲ್ಲಾ ಬ್ಯಾಂಕುಗಳು ಮುಚ್ಚಿರುತ್ತವೆ.
ಪ್ರೀತಿಯ ಬಂಧುಗಳೇ ಈ ಮೇಲ್ಕಾನ್ಸಿದಂತೆ ಲೇಖನದಲ್ಲಿ ನಾವು ಫೆಬ್ರುವರಿ ತಿಂಗಳಿನಲ್ಲಿ ಬ್ಯಾಂಕುಗಳು ಎಷ್ಟು ದಿನಗಳು ರಜೆಯಲ್ಲಿರಲಿವೆ ಎಂದು ತಿಳಿಸಿದ್ದೇವೆ.
ಈ ಲೇಖನ ಬರೆಯಲು ಕಾರಣವೇನೆಂದರೆ ಹಲವಾರು ವಯಸ್ಕರು ಹಾಗೂ ರೈತರು ಕೇವಲ ಬ್ಯಾಂಕ್ ಖಾತೆಯನ್ನು ಹೊಂದಿದ್ದು ಆದರೆ ಆನ್ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಲು ಬೇಕಾಗಿರುವಂತಹ ಟೆಕ್ನಿಕ್ ಬಳಸುತ್ತಿಲ್ಲ.
ಅದಕ್ಕಾಗಿ ಇಂತಹ ವ್ಯಕ್ತಿಗಳು ಕೇವಲ ಬ್ಯಾಂಕಿಗೆ ಹೋಗಿ ಹಣವನ್ನು ಪಡೆದುಕೊಂಡು ಬರುತ್ತಾರೆ ಹಾಗೆ ಠೇವಣಿಗೆ ಹಣವನ್ನು ಇಡುತ್ತಾರೆ ಇದರಿಂದಾಗಿ ಅಂತಹ ವ್ಯಕ್ತಿಗಳಿಗೆ ಯಾವುದೇ ತರನಾದಂತಹ ತೊಂದರೆ ಆಗಬಾರದು ಎಂದು ತಿಳಿದು ಈ ಮೇಲ್ಕಾಣಿಸಿದ ಲೇಖನದಲ್ಲಿ ಯಾವ ದಿನದಂದು ಬ್ಯಾಂಕುಗಳು ಬಂದ್ ಇರಲಿವೆ ಹಾಗೆ ಎಷ್ಟು ದಿನ ಈ ತಿಂಗಳಿನಲ್ಲಿ ಬ್ಯಾಂಕುಗಳು ಕೆಲಸ ಮಾಡಲಿವೆ ಎಂಬ ಮಾಹಿತಿಯನ್ನು ನಾವು ಅತಿ ಸುಲಭದ ರೀತಿಯಲ್ಲಿ ಈ ಲೇಖನದಲ್ಲಿ ನೀಡಿದ್ದೇವೆ.
ಬ್ಯಾಂಕಿನಲ್ಲಿ ಇರುವ ಸಾಲದ ಸೌಲಭ್ಯಗಳ ಬಗ್ಗೆ ಈಗ ತಿಳಿಯೋಣ ಬನ್ನಿ..
ಹೌದು ಸ್ನೇಹಿತರೆ ಬ್ಯಾಂಕ್ ನಲ್ಲಿ ಹತ್ತು ಹಲವಾರು ಯೋಜನೆಗಳ ಅಡಿಯಲ್ಲಿ ಸಾಲವನ್ನು ನೀಡುತ್ತಿದ್ದು ಅದರಲ್ಲಿ ರೈತರಿಗೆ ಕೃಷಿಯ ಸಾಲ ಇನ್ನಿತರ ಹೊಸ ಮನೆ ಕಟ್ಟಿಸಿಕೊಳ್ಳಲು ಮನೆಯಲು ಹೀಗೆ ಹತ್ತು ಹಲವಾರು ಲೋನ್ ಗಳನ್ನು ನೀಡುತ್ತಿದ್ದಾರೆ.
ಈ ಸಾಲವನ್ನು ಕಡಿಮೆ ಬಡ್ಡಿ ಪ್ರಮಾಣದಲ್ಲಿ ಪಡೆದುಕೊಳ್ಳಬೇಕೆಂದರೂ ನಿಮಗೆ ಆಕರ್ಷಕ ಬಡ್ಡಿ ದರಗಳಲ್ಲಿ ಬ್ಯಾಂಕುಗಳು ಲೋನ್ ಗಳನ್ನು ನೀಡುತ್ತಿದ್ದು ಅದರಲ್ಲಿ ಹತ್ತರಿಂದ ಹನ್ನೆರಡು ಪರ್ಸೆಂಟ್ ಪ್ರತಿಶತದಲ್ಲಿ ಬ್ಯಾಂಕಿನವರು ಲೋನ್ ಅನ್ನು ನೀಡುತ್ತಿದ್ದು ಆಸಕ್ತಿಯುಳ್ಳವರು ಪಡೆದುಕೊಳ್ಳಬಹುದಾಗಿದೆ.
ಕೃಷಿಕರಿಗೆ 3 ಲಕ್ಷದವರೆಗೂ ಬಡ್ಡಿ ರಹಿತ ಸಾಲ..!
ಹೌದು ಸ್ನೇಹಿತರೆ ಇದು ಸರ್ಕಾರದ ಹೊಸ ಯೋಜನೆಯಾಗಿದ್ದು ಡಿಸಿಸಿ ಬ್ಯಾಂಕಿನಲ್ಲಿ ರೈತರಿಗೆ ಸಹಾಯವಾಗಲೆಂದು ಮೂರು ಲಕ್ಷದವರೆಗೂ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದಾರೆ ಆದರೆ ಶರತ್ತುಗಳು ಅನ್ವಯವಾಗುತ್ತದೆ.
ಈ ಲೋನ್ ಭಾಗ್ಯವನ್ನು ಕೇವಲ ಕೃಷಿ ಕೆಲಸಕ್ಕಾಗಿ ಮಾತ್ರ ನೀಡುತ್ತಿದ್ದು ಇದರಲ್ಲಿ ಒಂದು ಶರತ್ತು ಏನೆಂದರೆ ವರ್ಷಕ್ಕೆ ಒಮ್ಮೆ ಬಾರಿ ಒಟ್ಟು ಮೊತ್ತದ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿರುವ ಹಣವನ್ನು ಮತ್ತೆ ಬ್ಯಾಂಕಿಗೆ ಕಟ್ಟಿ ಮತ್ತೆ ರಿನಿವಲ್ ಮುಖಾಂತರ ನೀವು ಪಡೆದುಕೊಳ್ಳಬೇಕಾಗಿರುತ್ತದೆ.
ಅದಕ್ಕಾಗಿ ಬ್ಯಾಂಕಿನಲ್ಲಿ ಕೃಷಿ ಲೋನ್ ಪಡೆದುಕೊಂಡರೆ ಬಡ್ಡಿ ರಹಿತ ಲೋನ್ ದೊರೆಯುತ್ತದೆ ಅದಕ್ಕಾಗಿ ಆಸಕ್ತಿ ಉಳ್ಳವರು ಇದೊಂದು ಉತ್ತಮವಾದಂತಹ ಲೋನ್ ಆಗಿದ್ದು ಈ ಕೃಷಿ ಯೋಜನೆ ಅಡಿಯಲ್ಲಿ ಲೋನ್ ಪಡೆದುಕೊಳ್ಳುವುದು ಕೃಷಿಕರು ಬಹುತೇಕವಾಗಿ ಉಪಯುಕ್ತವಾಗಲಿದೆ.
ಅದಕ್ಕಾಗಿ ಆಸಕ್ತಿ ಉಳ್ಳವರು ಸಾಲವನ್ನು ಈ ಕೃಷಿ ಲೋನನ್ನು ಪಡೆದುಕೊಳ್ಳಲು ಬೇಕಾಗಿರುವ ದಾಖಲಾತಿಗಳನ್ನು ಬ್ಯಾಂಕ್ ನಲ್ಲಿ ಕೇಳಿದರೆ ಅವರೇ ನಿಮಗೆ ಈ ಪರಿಪೂರ್ಣವಾದ ಮಾಹಿತಿಯನ್ನು ನೀಡುತ್ತಾರೆ..