Punjab National Bank recruitment: 1025 ಹುದ್ದೆಗಳ ಭರ್ಜರಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ 78,230 ಸಂಬಳ

ಪಂಜಾಬ್ ಬ್ಯಾಂಕ್ ನಲ್ಲಿ ಸುವರ್ಣವಕಾಶ : 1025 ಹುದ್ದೆಗಳ ಭರ್ಜರಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ 78,230 ಸಂಬಳವಿರುವ ಈ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

ದೇಶದಲ್ಲಿ ಪ್ರಸಿದ್ಧವಾದ ಪಂಜಾಬ್ ಬ್ಯಾಂಕಿನಲ್ಲಿ ಭರ್ಜರಿ 1025 ಹುದ್ದೆಗಳ ನೇಮಕಾತಿಗಾಗಿ ಇದೀಗ ಅರ್ಜೆ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಅರ್ಹರ ಎಂದು ಪರಿಶೀಲಿಸಿಕೊಂಡು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ನಮ್ಮ ಈ ಚಾಲತಾನದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಉದ್ಯೋಗ ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ. ಪ್ರಸಿದ್ಧ ಬ್ಯಾಂಕುಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 1,025 ಹುದ್ದೆಗಳ ಖಾಲಿ ಇರುತ್ತವೆ. ಈ ಹುದ್ದೆಗಳ ನೇಮಕಾತಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಬೇಕಾದಂತಹ ಮಾಹಿತಿ ಇಲ್ಲಿದೆ.

ಹುದ್ದೆಗಳು : ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಒಟ್ಟು 1025 ಹುದ್ದೆಗಳು ಖಾಲಿ ಇರುತ್ತವೆ. ಈ ಹುದ್ದೆಗಳು ಅವುಗಳನ್ನು ನೋಡುವುದಾದರೆ

  • ಕ್ರೆಡಿಟ್ ಆಫೀಸರ್ – 1000 ಹುದ್ದೆಗಳು
  • ವಿದೇಶೀ ವಿನಿಮಯ ವ್ಯವಸ್ಥಾಪಕರು – 15 ಹುದ್ದೆಗಳು
  • ಸೈಬರ್ ಸೆಕ್ಯುರಿಟಿ ಮ್ಯಾನೇಜರ್ – 5 ಹುದ್ದೆಗಳು
  • ಸೈಬರ್ ಸೆಕ್ಯುರಿಟಿ ಸೀನಿಯರ್ ಮ್ಯಾನೇಜರ್ – 5 ಹುದ್ದೆಗಳು

ಸಂಬಳ : ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾಲಿ ಇರುವಂತಹ ಕ್ರೆಡಿಟ್ ಆಫೀಸರ್, ವಿದೇಶಿ ವಿನಿಮಯ ವ್ಯವಸ್ಥಾಪಕರು, ಸೈಬರ್ ಸೆಕ್ಯೂರಿಟಿ ಮ್ಯಾನೇಜರ್ ಹಾಗೂ ಸೈಬರ್ ಸೆಕ್ಯೂರಿಟಿ ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ತಿಂಗಳ ಸಂಬಳ ಎಷ್ಟು ಇರುತ್ತದೆ ಎಂದು ನೋಡುವುದಾದರೆ ಮಾಸಿಕ ಸಂಬಳ 36,000 ರೂಪಾಯಿಯಿಂದ – 78230 ರೂಪಾಯಿಯವರಿಗೆ ಮಾಸಿಕ ಸಂಬಳ ಇರುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು :

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ವಯಸ್ಸು ಹುದ್ದೆಗಳಿಗೆ ಅನುಗುಣವಾಗಿ ಕೆಳಗಿನಂತಿರಬೇಕು.

  • ಕ್ರೆಡಿಟ್ ಆಫೀಸರ್ – 21 ರಿಂದ 28 ವರ್ಷ
  • ವಿದೇಶೀ ವಿನಿಮಯ ವ್ಯವಸ್ಥಾಪಕ – 25 ರಿಂದ 35 ವರ್ಷ
  • ಸೈಬರ್ ಸೆಕ್ಯುರಿಟಿ ಮ್ಯಾನೇಜರ್ – 25 ರಿಂದ 35 ವರ್ಷ
  • ಸೈಬರ್ ಸೆಕ್ಯುರಿಟಿ ಸೀನಿಯರ್ ಮ್ಯಾನೇಜರ್ – 27 ರಿಂದ 38 ವರ್ಷ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟು

  • SC/ST/PwBD ಅಭ್ಯರ್ಥಿಗಳಿಗೆ – 59 ರೂಪಾಯಿ
  • ಉಳಿದ ಎಲ್ಲಾ ಅಭ್ಯರ್ಥಿಗಳಿಗೆ – 1180 ರೂಪಾಯಿ

Leave a Comment