SSLC ಪಾಸಾದವರಿಗೆ 2500 BMTC ಕಂಡಕ್ಟರ್ ಹುದ್ದೆಗಳ ನೇಮಕಾತಿ ಯಾವಾಗ? ಇಲ್ಲಿದೆ ಮಾಹಿತಿ BMTC Recruitment 2024

SSLC ಪಾಸಾದವರಿಗೆ 2500 BMTC ಕಂಡಕ್ಟರ್ ಹುದ್ದೆಗಳ ನೇಮಕಾತಿ ಯಾವಾಗ?

ಇಲ್ಲಿದೆ ಮಾಹಿತಿ
BMTC Recruitment 2024

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಲೇಖನದಲ್ಲಿ ನಾವು ಬಿಎಂಟಿಸಿ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿಯನ್ನು ತಿಳಿಸಲಿದ್ದೇವೆ.

BMTC Recruitment 2024 : ಬೆಂಗಳೂರು ಮಹಾನಗರ ಪಾಲಿಕೆ ಸಂಸ್ಥೆಯು, ಬೆಂಗಳೂರಿನ ನಗರದಲ್ಲಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಿ ಕೊಡುತ್ತಿದ್ದು ಸದ್ಯಕ್ಕೆ ಖಾಲಿ ಇರುವ ಎರಡುವರೆ ಸಾವಿರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಖಾಲಿ ಹುದ್ದೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು. ಅನೇಕ ಜನರ ಹತ್ತನೇ ತರಗತಿ ಪಾಸ್ ಮಾಡಿ ಈ ಒಂದು ನೇಮಕಾತಿಯ ನಿರೀಕ್ಷೆಯಲ್ಲಿದ್ದಾರೆ. ಅನೇಕ ಜನರ ಪ್ರಶ್ನೆ ಏನೆಂದರೆ ಈ ನೇಮಕಾತಿ ಯಾವಾಗ ಆಗುತ್ತದೆ ಎಂಬುದು. ಮೊದಲಿಗೆ ನಾವು ಈ ನೇಮಕಾತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನಂತರ ಯಾವಾಗ ಎಂಬುದನ್ನು ತಿಳಿದುಕೊಳ್ಳೋಣ.

ಬೆಂಗಳೂರು ಮಹಾನಗರ ಪಾಲಿಕೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳ ವಿವರ :
ಬೆಂಗಳೂರು ಮಹಾನಗರ ಪಾಲಿಕೆ ಸಂಸ್ಥೆಯಲ್ಲಿ ಒಟ್ಟು 2503 ಹುದ್ದೆಗಳು ಖಾಲಿ ಇರುತ್ತವೆ. ಈ 2503 ಖಾಲಿ ಹುದ್ದೆಗಳು ಯಾವುವು ಎಂಬುದು ಈ ಕೆಳಗಿನಂತಿದೆ.

• ನಿರ್ವಾಹಕ ( Conductor ) – 2500 ಹುದ್ದೆಗಳು,
• ಸಹಾಯಕ ಲೆಕ್ಕಿಗ ( Assistant ) – 1 ಹುದ್ದೆ
• ಸ್ಟಾಫ್ ನರ್ಸ್ ( Staff nurse ) – 1 ಹುದ್ದೆ
• ಫಾರ್ಮಾಸಿಸ್ಟ್ ( Pharmasist ) – 1 ಹುದ್ದೆ1

ಬೆಂಗಳೂರು ಮಹಾನಗರ ಪಾಲಿಕೆ ಸಂಸ್ಥೆಯಲ್ಲಿ ಒಟ್ಟು 2503 ಖಾಲಿ ಹುದ್ದೆಗಳಿರುತ್ತವೆ. ಈ ಖಾಲಿ ಹುದ್ದೆಗಳಲ್ಲಿ ಒಟ್ಟು 2500 ನಿರ್ವಾಗ ಹುದ್ದೆಗಳು ಖಾಲಿ ಇರುತ್ತವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾರು ಎಂಬುದನ್ನು ನಾವು ಕೆಳಗಿನಂತೆ ನೋಡುವುದಾದರೆ ವಿದ್ಯಾರ್ಹತೆ ಕೆಳಗಿನಂತಿರುತ್ತದೆ.

Qualification : ಬೆಂಗಳೂರು ಮಹಾನಗರ ಪಾಲಿಕೆ ಸಂಸ್ಥೆಯಲ್ಲಿ ಖಾಲಿ ಇರುವಂತಹ ನಿರ್ವಾಹಕ ಅಥವಾ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರುವುದು ಕಡ್ಡಾಯವಾಗಿರುತ್ತದೆ. 10ನೇ ತರಗತಿ ಪಾಸಾದ ಅಂತಹ ಅಭ್ಯರ್ಥಿಗಳು ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Age limit : ಬೆಂಗಳೂರು ಮಹಾನಗರ ಪಾಲಿಕೆ ಸಂಸ್ಥೆಯಲ್ಲಿ ಖಾಲಿ ಇರುವ ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು ನಿಗದಿಪಡಿಸಲಾಗಿರುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಇರಬೇಕು ಮತ್ತು ಅದೇ ಗರಿಷ್ಠ ವರ್ಷವೂ 35 ವರ್ಷ ಇರಬೇಕು. ಅದೇ ರೀತಿ ಮೀಸಲಾತಿ ಬಯಸುವಂತಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು.

ನೇಮಕಾತಿ ಯಾವಾಗ?
BMTC Recruitment 2024 ಬೆಂಗಳೂರು ಮಹಾನಗರ ಪಾಲಿಕೆ ಸಂಸ್ಥೆಯಲ್ಲಿ ಖಾಲಿ ಇರುವಂತಹ ನಿರ್ವಾಹಕ ಮತ್ತು ಇತರೆ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳುವುದರ ಸಂಬಂಧ ಇಲಾಖೆಯು ಈ ಹಿಂದೆ ಖಾಲಿ ಇರುವ ಹುದ್ದೆಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಅಧಿಕೃತ ಜಾಲತಾಣದಲ್ಲಿ ಬಿಡುಗಡೆ ಮಾಡಿ ಶೀಘ್ರದಲ್ಲಿ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಲಾಗಿದೆ. ಆದ್ದರಿಂದ ಈ ನೇಮಕಾತಿಯು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುವ ಹೆಚ್ಚಿನ ಸಾಧ್ಯತೆಗಳಿದ್ದು ಅರ್ಹರಿರುವ ಅಭ್ಯರ್ಥಿಗಳು ಈಗಿನಿಂದಲೇ ತಯಾರಿ ಆರಂಭಿಸಿ ಈ ಒಂದು ಸುವರ್ಣ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ.

More details : https://mybmtc.karnataka.gov.in

Leave a Comment