ಭರ್ಜರಿ 35,000 ರೂ. ಪ್ರೋತ್ಸಾಹ ಧನ ನೀಡಲು ಅರ್ಜಿ ಅಹ್ವಾನ :
ಇಂಥವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀವು ಅರ್ಹರಾ?
ಈಗಲೇ ತಿಳಿದುಕೊಳ್ಳಿ Prize money scholarship 2024
ಎಲ್ಲರಿಗೂ ನಮಸ್ಕಾರ ಬಂಧುಗಳೇ ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಪ್ರತಿಯೊಬ್ಬರಿಗೂ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ಪ್ರಮುಖವಾಗಿ ಬೇಕಾಗಿರುವಂತಹ ಆರ್ಥಿಕ ಸಹಾಯ ಒದಗಿಸುವ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ. ಆದ್ದರಿಂದ ವಿದ್ಯಾರ್ಥಿ ವೇತನ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಲೇಖನವನ್ನು ಕೊನೆಯವರೆಗೂ ಓದಿ.
Prize money scholarship 2024: ವಿದ್ಯಾರ್ಥಿಯ ಜೀವನದಲ್ಲಿ ಮುಖ್ಯವಾಗಿ ಬೇಕಾಗಿರುವುದು ಆರ್ಥಿಕ ಸಹಾಯ. ಎಷ್ಟೋ ಜನ ವಿದ್ಯಾರ್ಥಿಗಳು ಓದುವುದರಲ್ಲಿ ಪರಿಣಿತರಿದ್ದರು ಕೂಡ ಅವರಿಗೆ ಆರ್ಥಿಕ ಸಹಾಯವಿಲ್ಲದೆ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟುಬಿಡುವುದನ್ನು ನಾವು ನೋಡಿದ್ದೇವೆ. ಸರ್ಕಾರವು ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರಿಸಲು ಬೇಕಾಗುವಂತಹ ಆರ್ಥಿಕ ಸಹಾಯವನ್ನು ನೀಡುವ ಸಲುವಾಗಿ ಹೊಸ ಹೊಸ ವಿದ್ಯಾರ್ಥಿ ವೇತನಗಳನ್ನು ಜಾರಿಗೆ ತರುತ್ತದೆ. ಇಂಥದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗಗಳಿಗೆ ಸೇರಿದಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಸ್ಕಾಲರ್ಷಿಪ್ ಹೆಸರೇ ಪ್ರೈಸ್ ಮನಿ ಸ್ಕಾಲರ್.
Prize money scholarship 2024: ಪಿಯುಸಿ, ಪದವಿ, ಡಿಪ್ಲೋಮಾ ಮತ್ತು ಸ್ನಾತಕೋತ್ತರ ಪದವಿಯನ್ನು ಓದುತ್ತಿರುವ ಅರ ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಓದುತ್ತಿರುವ ಶೈಕ್ಷಣಿಕ ವಿಷಯಗಳ ಆಧಾರದ ಮೇಲೆ ವಿದ್ಯಾರ್ಥಿ ವೇತನದ ಮೊತ್ತವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿರುತ್ತದೆ.
• ಪಿಯುಸಿ ಮತ್ತು ಡಿಪ್ಲೋಮ ಓದುತ್ತಿರುವ ವಿದ್ಯಾರ್ಥಿಗಳಿಗೆ – ಪಿಯುಸಿ ಮತ್ತು ಡಿಪ್ಲೋಮಾ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ವಾರ್ಷಿಕ 20,000 ರೂ. ವಿದ್ಯಾರ್ಥಿ ವೇತನ ಸಿಗಲಿದೆ.
- ಪದವಿ ಶಿಕ್ಷಣ ಓದುತ್ತಿರುವವರಿಗೆ – ಡಿಗ್ರಿ ಅಥವಾ ಪದವಿ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ 25,000 ವಿದ್ಯಾರ್ಥಿ ವೇತನ ಸಿಗಲಿದೆ.
- ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ – ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ 30,000 ರೂ. ವಿದ್ಯಾರ್ಥಿ ವೇತನ ಸಿಗಲಿದೆ.
- ವೃತ್ತಿಪರ ಪದವಿ ಕೋರ್ಸ್ ಗಳಿಗೆ – ಪದವಿಯಲ್ಲಿ ವೃತ್ತಿಪರ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ 35,000 ವಿದ್ಯಾರ್ಥಿ ವೇತನ ಸಿಗಲಿದೆ. ವಿದ್ಯಾರ್ಥಿಗಳ ಶಿಕ್ಷಣ ಪಡೆಯುತ್ತಿರುವ ಕೋರ್ಸ್ ಆಧಾರದ ಮೇಲೆ ವಿದ್ಯಾರ್ಥಿ ವೇತನವನ್ನು ನಿಗದಿಪಡಿಸಲಾಗಿರುತ್ತದೆ. ವಿದ್ಯಾರ್ಥಿ ವೇತನವನ್ನು ಪಡೆಯಲು ಯಾರು ಅರ್ಹರಿರುತ್ತಾರೆ ಎನ್ನುವುದನ್ನು ನೋಡುವುದಾದರೆ ಈ ಕೆಳಗಿನಂತಿದೆ.
ಅರ್ಹತೆಗಳು : Prize money scholarship 2024
ಸರ್ಕಾರದಿಂದ ಲಭ್ಯವಿರುವ ಈ ವಿದ್ಯಾರ್ಥಿ ವೇತನ ಪಡೆಯಲು ಈ ಕೆಳಗಿನ ವಿದ್ಯಾರ್ಥಿಗಳು ಮಾತ್ರ ಅರ್ಹರಿರುತ್ತಾರೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸೇರಿದವರಾಗಿರಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಮೊದಲ ಪ್ರಯತ್ನದಲ್ಲಿಯೆ ಪಾಸ್ ಆಗಿರಬೇಕು. ಅದೇ ರೀತಿ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹೀಗೆ ಸಲ್ಲಿಸಿ : ಪ್ರೈಸ್ ಮನಿ ಸ್ಕಾಲರ್ಶಿಪ್ ಅಥವಾ ಪ್ರೋತ್ಸಾಹ ಧನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು, ನಾವು ಕೆಳಗೆ ನೀಡಿರುವಂತಹ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ನೀವು ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ತೊಂದರೆಗಳು ಎದುರಾದರೆ ನಿಮ್ಮ ಹತ್ತಿರವಿರುವ ಸಮಾಜ ಕಲ್ಯಾಣ ಇಲಾಖೆಯ ಅಥವಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಭೇಟಿ ನೀಡಿ ನಿಮ್ಮ ಸಮಸ್ಯೆಗೆ ನೀವು ಪರಿಹಾರ ಪಡೆದುಕೊಳ್ಳಬಹುದಾಗಿದೆ.
Apply for scholarship : https://twd.karnataka.gov.in/TWPostprizemoney/Home.aspx?ReturnUrl=%2fswprizemoney%2f