300 ಹುದ್ದೆಗಳ ಭರ್ಜರಿ ನೇಮಕಾತಿ : 62 ಸಾವಿರ ರೂಪಾಯಿ ಸಂಬಳದ ಈ ಹುದ್ದೆಗಳು ಕನ್ನಡಿಗರಿಗೆ ಭಾರಿ ಅವಕಾಶ | ಈಗಲೇ ಅರ್ಜಿ ಸಲ್ಲಿಸಿ NIACL Recruitment 2024
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ನಮ್ಮ ಈ ಜ್ಞಾನಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ ಸಾರ್ವಜನಿಕರಿಗೆ ವಿದ್ಯಾರ್ಥಿನಿಯರಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ನಿರುದ್ಯೋಗಿಗಳಿಗೆ ಸಹಾಯವಾಗುವಂತಹ ಲೇಖನವನ್ನು ತಂದಿದ್ದು ಉದ್ಯೋಗ ನಿರೀಕ್ಷೆಯಲ್ಲಿ ಇರುವವರಿಗೆ ಇದು ಸಹಾಯಾವಾಗಲಿದೆ. ಇದೇ ರೀತಿ ಇಂತಹ ದಿನನಿತ್ಯದ ಮಾಹಿತಿಗಳಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ.
NIACL Recruitment 2024 : ರಾಷ್ಟ್ರದ ಪ್ರತಿಷ್ಠಿತ ವಿಮಾ ಕಂಪನಿಯಾದ ನ್ಯೂ ಇಂಡಿಯಾ ಅಶ್ಯುರೆನ್ಸ್ ಕೋ ಲಿಮಿಟೆಡ್ ಸಂಸ್ಥೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಹುದ್ದೆಗಳ ನೇಮಕಾತಿಗಾಗಿ ಸಂಸ್ಥೆಯು ಇದೀಗ ಅಧಿಸೂಚನೆಯನ್ನು ಹೊರಡಿಸಿದೆ. ಈ ಒಂದು ಅಧಿಸೂಚನೆಯಲ್ಲಿ ನೇಮಕಾತಿಗೆ ಸಂಬಂಧಿಸಿದಂತಹ ಪ್ರತಿಯೊಂದು ಮಾಹಿತಿಯನ್ನು ನೀಡಿದ್ದು ನೇಮಕಾತಿಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನಾವು ನೀಡಿದ್ದೇವೆ. ಅದೇ ರೀತಿ ಅರ್ಜಿ ಸಲ್ಲಿಸಲು ಬೇಕಾಗಿರುವ ಲಿಂಕ್ ಅನ್ನು ಕೂಡ ಈ ಲೇಖನದ ಕೊನೆ ಭಾಗದಲ್ಲಿ ನೀಡಿದ್ದು ಕೊನೆಯವರೆಗೂ ಸಂಪೂರ್ಣ ಮಾಹಿತಿಯನ್ನು ಓದಿ.
ನ್ಯೂ ಇಂಡಿಯಾ ಅಶ್ಯುರೆನ್ಸ್ ಕೋ ಲಿಮಿಟೆಡ್ ಸಂಸ್ಥೆಯಲ್ಲಿ ಒಟ್ಟಾರೆ 300 ಹುದ್ದೆಗಳು ಖಾಲಿ ಇರುತ್ತವೆ. ಈ ಹುದ್ದೆಗಳ ಹೆಸರು ಏನೆಂದು ನೋಡುವುದಾದರೆ 300 ಕಾಲಿ ಹುದ್ದೆಗಳು ಸಹಾಯಕ ಹುದ್ದೆಗಳಾಗಿವೆ.
ನ್ಯೂ ಇಂಡಿಯಾ ಅಶ್ಯುರೆನ್ಸ್ ಕೊ ಲಿಮಿಟೆಡ್ ಸಂಸ್ಥೆಯಲ್ಲಿ ಒಟ್ಟಾರೆ 300 ಸಹಾಯಕ ಹುದ್ದೆಗಳ ಖಾಲಿ ಇರುತ್ತವೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ನ್ಯೂ ಇಂಡಿಯಾ ಅಶ್ಯುರೆನ್ಸ್ ಕೋ ಲಿಮಿಟೆಡ್ ಸಂಸ್ಥೆಯಲ್ಲಿ ಖಾಲಿ ಇರುವಂತಹ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಮೇಲಿನ ಶಿಕ್ಷಣವನ್ನು ಹೊಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ.
NIACL Recruitment 2024 – ನ್ಯೂ ಇಂಡಿಯಾ ಅಶ್ಯುರೆನ್ಸ್ ಕೋ ಲಿಮಿಟೆಡ್ ಸಂಸ್ಥೆಯಲ್ಲಿ ಕಾಲಿ ಇರುವಂತಹ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹22,405 ರಿಂದ ₹62,265 ವರೆಗೆ ಸಂಬಳವನ್ನು ನೀಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ವಯೋಮಿತಿಯನ್ನು ನೋಡುವುದಾದರೆ ಸಂಸ್ಥೆಯ ನಿಗದಿಪಡಿಸಿದ ದಿನಾಂಕಕ್ಕೆ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ತುಂಬಿರಬೇಕು ಹಾಗೂ ಗರಿಷ್ಠ ವರ್ಷ 30 ವರ್ಷ ಮೀರಿರಬಾರದು. ಒಂದು ವೇಳೆ ಅಭ್ಯರ್ಥಿಗಳು ಮೀಸಲಾತಿ ವ್ಯಾಪ್ತಿಯಲ್ಲಿ ಬರುವುದಾದರೆ ಸಂಸ್ಥೆಯ ನಿಯಮಗಳ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ: ಅಭ್ಯರ್ಥಿಗಳು ಅರ್ಹರಿದ್ದರೆ ನಾವು ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿ ನೇರವಾಗಿ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇನ್ನೂ ಹೆಚ್ಚಿನ ಮಾಹಿತಿ ನಿಮಗೆ ಬೇಕಾಗಿದ್ದರೆ ನಾವು ಕೆಳಗೆ ನೀಡಿರುವ ಜಾಲತಾಣಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 100 ರೂಪಾಯಿ ಮತ್ತು ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 850 ರೂಪಾಯಿಯನ್ನು ಅರ್ಜಿ ಶುಲ್ಕವಾಗಿ ನಿಗದಿಪಡಿಸಲಾಗಿರುತ್ತದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಫೆಬ್ರವರಿ 1, 2024 ರಿಂದ ಆರಂಭವಾಗಿದ್ದು ಫೆಬ್ರವರಿ 15, 2024 ಕೊನೆ ದಿನಾಂಕವಾಗಿರುತ್ತದೆ ಅರ್ಹರಿರುವ ಎಲ್ಲಾ ಅಭ್ಯರ್ಥಿಗಳ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ.
ಅರ್ಜಿ ಲಿಂಕ್ : https://ibpsonline.ibps.in/niacljan24/