ರೇಷನ್ ಕಾರ್ಡ್ ಹೊಸ ಅಪ್ಡೇಟ್:
ರೇಷನ್ ಕಾರ್ಡುಗಳ ವಿಷಯದಲ್ಲಿ ಸರ್ಕಾರವು ಹೊಸ ಅಪ್ಡೇಟ್ ಅನ್ನು ತಂದಿರುತ್ತದೆ. ರೇಷನ್ ಕಾರ್ಡನ್ನು ನೀವು ಕಳೆದುಕೊಂಡಿದ್ದರು ಕೂಡ ಹಾಗೂ ನಿಮ್ಮ ಬಳಿ ರೇಷನ್ ಕಾರ್ಡ್ ಇಲ್ಲದೇ ಇದ್ದರೂ ಕೂಡ ನೀವು ರೇಷನ್ ಪಡೆಯಬಹುದಾಗಿರುತ್ತದೆ.
ಹಾಗೂ ರೇಷನ್ ಕೇಂದ್ರಕ್ಕೆ ರೇಷನ್ ಕಾರ್ಡ್ ಇಲ್ಲದೆ ಭೇಟಿ ನೀಡಿ ರೇಶನ್ ಪಡೆಯಬಹುದಾಗಿರುತ್ತದೆ. ರೇಷನ್ ಕಾರ್ಡ್ ಬಳಸಿಕೊಂಡು ಅಥವಾ ರೇಷನ್ ಕಾರ್ಡ್ ತೋರಿಸಿ ಪಡೆಯಬಹುದಾದಂತಹ ಎಲ್ಲಾ ಸೌಲಭ್ಯಗಳನ್ನು ಕೂಡ ನೀವು ಪಡೆಯಬಹುದಾಗಿದೆ.
ಡಿಜಿಟಲೀಕರಣಗೊಳ್ಳುತ್ತಿರುವ ಈ ಕಾಲಮಾನದಲ್ಲಿ ರೇಷನ್ ಕಾರ್ಡನ್ನು ಕೂಡ ನೀವು ಡಿಜಿಟಲ್ ಮಾಧ್ಯಮದ ಮೂಲಕ ಬಳಸಬಹುದಾಗಿರುತ್ತದೆ. ನಿಮ್ಮ ಮೊಬೈಲ್ ನಲ್ಲಿ ಮೇರಾ ರೇಷನ್ 2.0 ಎಂಬ ಅಪ್ಲಿಕೇಶನ್ ಅನ್ನು ಇಟ್ಟುಕೊಂಡು ನೀವು ರೇಷನ್ ಕಾರ್ಡ್ ಬಳಸಬಹುದಾಗಿದೆ. ಹಾಗೂ ರೇಷನ್ ಕಾರ್ಡ್ ನಿಂದ ಲಭ್ಯವಿರುವಂತಹ ಎಲ್ಲಾ ಸೌಲಭ್ಯಗಳನ್ನು ಬಳಸಬಹುದಾಗಿದೆ.
ಕೇಂದ್ರ ಸರ್ಕಾರವು ಪರಿಚಯಿಸಿರುವಂತಹ ಈ ಮೇರಾ ರೇಷನ್ 2.0 ಎಂಬ ಅಪ್ಲಿಕೇಶನ್ ಮೂಲಕ ರೇಷನ್ ಕಾರ್ಡ್ ಇಲ್ಲದೆಯೂ ಕೂಡ ನೀವು ರೇಷನ್ ಅನ್ನು ಪಡೆಯಬಹುದಾಗಿರುತ್ತದೆ.
ಈ ಹಿಂದೆ ನೀವು ಪಡಿತರವನ್ನು ಪಡೆಯಲು ನಿಮ್ಮ ಪಡಿತರ ಚೀಟಿಯನ್ನು ರೇಷನ್ ವಿತರಣಾ ಕೇಂದ್ರಕ್ಕೆ ಕಡ್ಡಾಯವಾಗಿ ಒಯಲೇಬೇಕಾಗಿತ್ತು. ಇದೀಗ ಮೇರಾ ರೇಷನ್ 2.0 ಎಂಬ ಅಪ್ಲಿಕೇಶನ್ ಮೂಲಕ ಆಧಾರ್ ಸಂಖ್ಯೆಯನ್ನು ಸೇರಿಸಿ ಪಡಿತರವನ್ನು ಪಡೆಯುವ ಅವಕಾಶವಿದೆ.
ನೀವು ಮೇರಾ ರೇಷನ್ 2.0 ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಬಹುದಾಗಿರುತ್ತದೆ. ನೀವು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ನಂತರ ಆಧಾರ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಗೆ ಬರುವ ಓಟಿಪಿಯನ್ನು ಹಾಕಿ ನಮೂದಿಸಿ. ಲಾಗಿನ್ ಆದ ನಂತರ ನಿಮ್ಮ ರೇಷನ್ ಕಾರ್ಡ್ ಆಪ್ ನಲ್ಲಿ ಸಿಗುತ್ತದೆ.
ಅದನ್ನು ತೋರಿಸಿ ನೀವು ರೇಷನ್ ಕಾರ್ಡಿಗೆ ಸಂಬಂಧಿಸಿದಂತಹ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ ಹಾಗೂ ರೇಷನ್ ಕಾರ್ಡಿಗೆ ಸಂಬಂಧಿಸಿದಂತಹ ವ್ಯವಹಾರಗಳನ್ನು ವ್ಯವಹರಿಸಬಹುದಾಗಿದೆ.