ಕೃಷಿ ಉಪಕರಣಗಳನ್ನು ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಲು ಈ ಕೂಡಲೇ ಅರ್ಜಿ ಸಲ್ಲಿಸಿ..! ಅತಿ ಕಡಿಮೆ ದರದಲ್ಲಿ ಪಡೆದುಕೊಳ್ಳುವ ಉತ್ತಮ ಅವಕಾಶ..! Click Here

ನಮಸ್ಕಾರ ಸ್ನೇಹಿತರೆ

ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ಕೃಷಿ ಇಲಾಖೆ 2024 ಮತ್ತು 25ನೇ ಸಾಲಿನ ಯೋಜನೆ ಅಡಿಯಲ್ಲಿ ರೈತರಿಗೆ ಉಪಯುಕ್ತವಾಗುವಂತ ಹಾಗೂ ಕೃಷಿ ಚಟುವಟಿಕೆಯನ್ನು ಇನ್ನಷ್ಟು ಸುಲಭಗೊಳಿಸಲು ನಮ್ಮ ರಾಜ್ಯ ಸರಕಾರವು ಸಬ್ಸಿಡಿ ದರದಲ್ಲಿ ಹಾಗೂ ಕೃಷಿ ಯಂತ್ರಗಳ ಖರೀದಿಗಾಗಿ ಆರ್ಥಿಕ ನೆರವು ನೀಡುತ್ತಿದೆ ಹಾಗಾಗಿ ಈ ಯೋಜನೆ ಅಡಿಯಲ್ಲಿ ಕೃಷಿ ಯಂತ್ರಗಳು ಹಾಗೂ ತುಂತುರು ನೀರಾವರಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪೈಪ್ ಮತ್ತು ಹನಿ ನೀರಾವರಿಗೆ ಸಂಬಂಧಪಟ್ಟ ಉಪಕರಣಗಳನ್ನು ವಿತರಣೆ ಮಾಡುತ್ತಿದೆ ಆದ್ದರಿಂದ ಆಸಕ್ತಿ ಇರುವ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

ಸಬ್ಸಿಡಿ ಯೋಜನೆಗಳು (krushi Subsidy)..?


ಹೌದು ಸ್ನೇಹಿತರೆ ನಮ್ಮ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರಕಾರವು ರೈತರ ಆದಾಯ ದ್ವಿಗುಣಗೊಳಿಸಲು ಹಾಗೂ ರೈತರಿಗೆ ಆದಾಯ ಹೆಚ್ಚಿಸುವ ಉದ್ದೇಶದಿಂದ ಹಲವಾರು ಸಬ್ಸಿಡಿ ಯೋಜನೆಗಳು ಜಾರಿಗೆ ತಂದಿದ್ದು ಈ ಯೋಜನೆ ಅಡಿಯಲ್ಲಿ ಕೆಳಗೆ ನೀಡಿದಂತಹ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತಿ ಇರುವಂತಹ ರೈತರು ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು

ಕೃಷಿ ಯಾಂತ್ರೀಕರಣ ಯೋಜನೆ (krushi Subsidy)..?


• ಹೌದು ಸ್ನೇಹಿತರೆ 2024 ಮತ್ತು 25ನೇ ಸಾಲಿನ ಕೃಷಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ ರೈತರಿಗೆ ವಿವಿಧ ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನಗಳಿಗೆ ಸಂಬಂಧಿಸಿದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ
• ಈ ಕೃಷಿ ಯಂತ್ರೀಕರಣ ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇಕಡ 50ರಷ್ಟು ರಿಯಾಯಿತಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ
• ಈ ಯೋಜನೆ ಅಡಿಯಲ್ಲಿ ರೈತರು ಮಿನಿ ಟ್ಯಾಕ್ಟರ್, ರೂಟೋವೇಟರ್, ಪವರ್ ವೀಡರ್, ಡೀಸೆಲ್ ಪಂಪ್ಸೆಟ್, ಪವರ್ ಸ್ಪ್ರೇಯರ್, ಯಂತ್ರ ಚಾಲಿತ ಮೇಟೋ ಕಾರ್ಟ್, ಹಾಗೂ ತುಂತುರು ನೀರಾವರಿ ಘಟಕಗಳು

ತುಂತುರು ನೀರಾವರಿ ಯೋಜನೆ (krushi Subsidy)..?


• ಸ್ನೇಹಿತರೆ ರೈತರಿಗೆ ಶೇಕಡ 90ರಷ್ಟು ಸಬ್ಸಿಡಿ ದರದಲ್ಲಿ HDPE ಪೈಪ್ಸ್ ಮತ್ತು ಇತರ ತುಂತುರು ನೀರಾವರಿಗೆ ಸಂಬಂಧಿಸಿದ ವಸ್ತುಗಳನ್ನು ನೀಡಲಾಗುತ್ತಿದೆ
• ಹೌದು ಸ್ನೇಹಿತರೆ ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿ ಹೊಂಡ ನಿರ್ಮಾಣ, ತಂತಿ ಬೇಲಿ, ಕೃಷಿಭಾಗ್ಯ, ಮತ್ತು ಸಂಪತ್ತು ಸಂರಕ್ಷಣೆಗಾಗಿ, ಹಾಗೂ ನೀರಾವರಿ ಸೌಲಭ್ಯ ನೀಡುವ ನಿಟ್ಟಿನಿಂದ ಹಲವು ಯೋಜನೆಗಳನ್ನು ಸಬ್ಸಿಡಿ ದರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ
• ಸಾಮಾನ್ಯ ರೈತರಿಗೆ 80% ರಿಯಾಯಿತಿಯಲ್ಲಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡ 90ರಷ್ಟು ರಿಯಾಯಿತಿಯಲ್ಲಿ ಈ ಯೋಜನೆ ಅಡಿಯಲ್ಲಿ ಮೇಲೆ ನೀಡಿದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (krushi Subsidy)..?


• ಸ್ನೇಹಿತರೆ ಈ ಮೇಲೆ ನೀಡಿದಂತ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಕನಿಷ್ಠ ಒಂದು ಎಕರೆ ಜಮೀನು ಹೊಂದಿರಬೇಕು
• ಮತ್ತು ಈ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಈ ಹಿಂದೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ರೀತಿ ಸಬ್ಸಿಡಿ ಪಡೆದಿರಬಾರದು
• ಈ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು
• ಈ ಸಬ್ಸಿಡಿ ಯೋಜನೆಯಲ್ಲಿ ಸೋಲಾರ್ ಪಂಪ್ ಸೆಟ್ ಅಥವಾ ಡೀಸೆಲ್ ಇಂಜಿನ್ ಅಥವಾ 10Hp ಸಾಮರ್ಥ್ಯದ ಮೋಟರ್ಗಳನ್ನು ನೀಡಲಾಗುತ್ತಿದೆ

ಅರ್ಜಿ ಸಲ್ಲಿಸುವುದು ಹೇಗೆ (krushi Subsidy)..?


ಸ್ನೇಹಿತರೆ ಮೇಲೆ ತಿಳಿಸಿದಂತ ಎಲ್ಲಾ ಯೋಜನೆಗಳ ಅಥವಾ ಸಬ್ಸಿಡಿ ಯೋಜನೆಗಳ ಲಾಭ ಪಡೆಯಲು ಬಯಸುವ ರೈತರು ನಿಮಗೆ ಹತ್ತಿರವಿರುವಂತ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ನಿಖರ ಮಾಹಿತಿಯನ್ನು ಪಡೆದುಕೊಳ್ಳಬಹುದು ಮತ್ತು ಅರ್ಜಿ ಸಲ್ಲಿಸಲು ನಿಮಗೆ ಹತ್ತಿರವಿರುವಂತ ಹೋಬಳಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಈ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು

ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಬೇಕು..?


• ರೈತರ ಆಧಾರ್ ಕಾರ್ಡ್
• ರೈತರ ಜಮೀನಿನ ಪಹಣಿ
• ಬ್ಯಾಂಕ್ ಪಾಸ್ ಬುಕ್
• ಇತ್ತೀಚಿನ ಭಾವಚಿತ್ರಗಳು (2)

Leave a Comment