ದನಗಳ ಷಡ್ ನಿರ್ಮಾಣ ಮಾಡಲು ಸರ್ಕಾರದಿಂದ 50,000 ಸಾಯಧನ..! ರೈತರು ಈಗಲೇ ಅರ್ಜಿ ಸಲ್ಲಿಸಿ..! Apply Now..!

ಜ್ಞಾನ ಸಮೃದ್ಧಿಯ ಹೊಸ ಲೇಖನಕ್ಕೆ ಸ್ವಾಗತ..!

ಜ್ಞಾನ ಸಮೃದ್ಧಿಯ ಪ್ರತಿನಿತ್ಯದ ಲೇಖನಗಳಲ್ಲಿ ಉದ್ಯೋಗದ ಮಾಹಿತಿ ಹಾಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಗಳ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ದನಗಳ ಷಡ್ ನಿರ್ಮಾಣ ಮಾಡಲು ಸರ್ಕಾರದಿಂದ ಇರುವ ಸೌಲಭ್ಯದ ಬಗ್ಗೆ ತಿಳಿಯೋಣ ಬನ್ನಿ..

ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ರಾಜ್ಯ ಸರ್ಕಾರವು ಈಗಾಗಲೇ ಜಾರಿಗೆ ತಂದಿರುವ ಸಾಕಷ್ಟು ಯೋಜನೆಗಳಲ್ಲಿ ಇದು ಕೂಡ ಒಂದು. ಅದರಲ್ಲಿ ಕೂಲಿ ಕಾರ್ಮಿಕರಿಗೆ ಅಂತಾನೆ ಹಾಗೂ ಜನಸಾಮಾನ್ಯರಿಗೆ ಅಂತನೇ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಕೂಡ ಜಾರಿಗೆ ತಂದಿದ್ದು ನಿಮಗೆಲ್ಲ ಗೊತ್ತಿದೆ. ಈ ಯೋಜನೆ ಅಡಿ ನಿಮಗೆ ಹಲವಾರು ಲಾಭಗಳು ದೊರೆಯಲಿದೆ.

ಈ (Cattle Shed) ಯೋಜನೆಯ ಲಾಭ ಪಡೆದುಕೊಳ್ಳಲು ಕೆಳಗೆ ನೀಡಿರುವ ವರ್ಗಗಳಿಗೆ ಮಾತ್ರ ಅರ್ಹತೆ!

• ಸಣ್ಣ ಮತ್ತು ಅತಿ ಸಣ್ಣ ರೈತರು

• ವಿಕಲಚೇತನ ಕುಟುಂಬಗಳು

• ವಸತಿ ಯೋಜನೆ ಫಲಾನುಭವಿಗಳು

• ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು

• ಮಹಿಳಾ ಪ್ರಧಾನ ಕುಟುಂಬಗಳು

• ಅಲೆಮಾರಿ ಬುಡಕಟ್ಟು ಜನಾಂಗದವರು

• ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟು ಜನಾಂಗದವರು

• ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ವರ್ಗದವರು

ಮೇಲೆ ನೀಡಿರುವ ವರ್ಗಗಳ ಒಂದು ಚೌಕಟ್ಟಿನಲ್ಲಿ ನೀವು ಬರುತ್ತಿದ್ದರೆ ನಿಮಗೆ ಈ ಯೋಜನೆಯ ಉಪಯೋಗ ಪಡೆದುಕೊಳ್ಳಲು ಅರ್ಹತೆ ಇರುತ್ತದೆ ಎಂದು ತಿಳಿಸಲಾಗಿದೆ.

(Cattle Shed) ಅರ್ಹತೆ ಏನಿರಬೇಕು?

ಈ ಯೋಜನೆಯಡಿ ನೊಂದಣಿ ಆಗಿರುವ ಒಂದು ಕುಟುಂಬಕ್ಕೆ ಜೀವಿತ ಅವಧಿಯ ಒಳಗಡೆ ಗರಿಷ್ಠ 2 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುವುದು.

ಈ ಯೋಜನೆಯ ಲಾಭವನ್ನು ನೀವು ಪಡೆದುಕೊಳ್ಳಬೇಕೆಂದು ಬಯಸಿದರೆ ನರೇಗಾ ಜಾಬ್ ಕಾರ್ಡನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.

ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ ಕಾಮಗಾರಿಯಲ್ಲಿ ನೀವು ಕನಿಷ್ಠ ಕುಟುಂಬದ ವ್ಯಕ್ತಿ ಆದರೂ ಕೂಡ ಕಾರ್ಯನಿರ್ವಹಿಸಬೇಕು ಎಂದು ತಿಳಿಸಲಾಗಿರುತ್ತದೆ.

ದನದ ಶೆಡ್ ನಿರ್ಮಾಣ ಮಾಡಿಕೊಳ್ಳಲು 157,000/- 건 ನೀಡಲಾಗುವುದು!

ಹೌದು ಸ್ನೇಹಿತರೆ, ರೈತರಿಗೆ ಅಥವಾ ನರೇಗಾ ಯೋಜನೆಯ ಫಲಾನುಭವಿಗಳಿಗೆ ದನದ ಶೇಡ್ ಅಥವಾ ಶೆಡ್ ಗಳ ನಿರ್ಮಾಣಕ್ಕಾಗಿ ಅಂತ ತಮ್ಮ ಸ್ವಂತ ಜಾಗ ಮತ್ತು ಇತರೆ ಜಾಗಗಳಲ್ಲಿ ಶಡ್‌ ನಿರ್ಮಾಣ ಮಾಡಿಕೊಳ್ಳಲು ಪಂಚಾಯಿತಿಯಿಂದ ಆಸಕ್ತರಿಗೆ ಸಹಾಯಧನವನ್ನು ನೀಡಲಾಗುವುದು ಎಂದು ತಿಳಿದುಬಂದಿರುತ್ತದೆ.

ಜನಸಾಮಾನ್ಯರಿಗೆ ಶೆಡ್‌ ನಿರ್ಮಾಣಕ್ಕೆ ಅಂತಾನೆ ₹20,000ಗಳನ್ನು ಸಹಾಯಧನವನ್ನಾಗಿ ನೀಡಲಾಗುವುದು. ಅದೇ ರೀತಿಯಾಗಿ ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹43,000 ಪಂಚಾಯಿತಿಯಿಂದ ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಲಾಗಿರುತ್ತದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ನೀಡುವ ಮೊತ್ತ ಅಂದರೆ ₹43,000 ಹಾಗೂ ರೈತರ ಕೂಲಿ ವೇತನವನ್ನು ಅಂದರೆ ಒಂಬತ್ತು ಸಾವಿರ ರೂಪಾಯಿ ಹಣವನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿರುತ್ತದೆ.

ಶೆಡ್‌ ನಿರ್ಮಾಣಕ್ಕಾಗಿ ಅರ್ಹತೆಗಳೇನು?

ಸಂಬಂಧಪಟ್ಟ ಪಶುವೈದ್ಯಾಧಿಕಾರಿಗಳಿಂದ ಜಾನುವಾರು ದೃಢೀಕರಣ ಪತ್ರ ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.

ಕನಿಷ್ಠ ನಾಲ್ಕು (4) ಜಾನುವಾರಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗಿರುತ್ತದೆ.

ಈ ಯೋಜನೆಯ ಅಡಿಯಲ್ಲಿ ನೀವು ಸಹಾಯಧನ ಪಡೆದುಕೊಳ್ಳಬೇಕು ಎಂದು ಬಯಸಿದರೆ ನರೇಗ ಯೋಜನೆಯ ಜಾಬ್ ಕಾರ್ಡ್ ಅಥವಾ ಅದರ ಚೀಟಿಯನ್ನು ಹೊಂದಿರಬೇಕಾಗುತ್ತದೆ.

ಈ ಯೋಜನೆಗೆ ನೀವು ಗ್ರಾಮ ಪಂಚಾಯಿತಿಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಹೆಚ್ಚಿನ ವಿವರಗಳನ್ನು ಕೇಳಿ ಪಡೆದುಕೊಳ್ಳಿ.

Leave a Comment